ಇಂದೋರ್: ಭಾರತ-ಪಾಕಿಸ್ತಾನ (India-Pakistan) ವಿಭಜನೆಗೆ ಧರ್ಮವೇ ಆಧಾರವಾಗಿತ್ತು. ಧರ್ಮದ ಆಧಾರದ ಮೇಲೆ ಪಾಕಿಸ್ತಾನ ಮುಸ್ಲಿಂ ದೇಶವಾದರೆ, ಭಾರತ ಹಿಂದೂ ದೇಶವಾಗಿದೆ (Hindu Nation) ಎಂದು ಬಿಜೆಪಿ (BJP) ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ (Kailash Vijayvargiya) ಹೇಳಿದ್ದಾರೆ.
ಮಧ್ಯಪ್ರದೇಶದ (Madhyapradesh) ಇಂದೋರ್‌ನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಹಿಂದೂ ರಾಷ್ಟ್ರವಾದವನ್ನು ಸಮರ್ಥಿಸಿಕೊಂಡಿದ್ದಾರೆ. ಭೋಪಾಲ್‌ನಲ್ಲಿ ವಾಸಿಸುವ ಅವರ ಮುಸ್ಲಿಂ ಸ್ನೇಹಿತ ಪ್ರತಿದಿನ ಹನುಮಾನ್ ಚಾಲೀಸಾವನ್ನು ಪಠಿಸುತ್ತಾನೆ ಮತ್ತು ಶಿವ ದೇವಾಲಯಕ್ಕೂ ಭೇಟಿ ನೀಡುತ್ತಾನೆ ಎಂದು ಅವರು ಹೇಳಿಕೊಂಡಿದ್ದಾರೆ. ತಮ್ಮ ಮುಸ್ಲಿಂ ಸ್ನೇಹಿತನಂತೆ, ತಮ್ಮ ಪೂರ್ವಜರು ಹನುಮಾನ್ ಚಾಲೀಸಾವನ್ನು ಪಠಿಸುತ್ತಾರೆ ಎಂದು ಭಾವಿಸುವ ಅನೇಕ ಜನರಿದ್ದಾರೆ ಎಂದು ಅವರು ಹೇಳಿದರು. ಇದನ್ನೂ ಓದಿ: 2 ಸಾವಿರಕ್ಕೂ ಅಧಿಕ ಮೋದಿ ವಿರೋಧಿ ಪೋಸ್ಟರ್‌ಗಳು – ನಾಲ್ವರು ಅರೆಸ್ಟ್
Advertisement
Advertisement
ಹನುಮಾನ್ ಮತ್ತು ಶಿವನನ್ನು ಪೂಜಿಸಲು ಹೇಗೆ ಪ್ರೇರಿತನಾದೆ ಎಂದು ನಾನು ನನ್ನ ಮುಸ್ಲಿಂ ಸ್ನೇಹಿತನನ್ನು ಕೇಳಿದೆ. ಅವರ ಕುಟುಂಬದ ಇತಿಹಾಸವನ್ನು ಓದಿದಾಗ, ಅವರ ಪೂರ್ವಜರು ರಾಜಸ್ಥಾನದ ರಜಪೂತರು ಮತ್ತು ಅವರ ಕೆಲವು ಸಂಬಂಧಿಕರು ಇನ್ನೂ ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ವಾಸಿಸುವ ರಜಪೂತರೆಂದು ನನ್ನ ಸ್ನೇಹಿತ ಉತ್ತರಿಸಿದ ಎಂದರು.
Advertisement
Advertisement
ಇದಕ್ಕೂ ಮೊದಲು ಜೂನ್ 2022 ರಲ್ಲಿ ಕೈಲಾಶ್ ವಿಜಯವರ್ಗಿಯಾ ಅವರು ಅಗ್ನಿವೀರರ ಕುರಿತಾದ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು. ಅಗ್ನಿವೀರರನ್ನು ತಮ್ಮ ಬಿಜೆಪಿ ಕಚೇರಿಯಲ್ಲಿ ಭದ್ರತಾ ಕೆಲಸಗಳಿಗೆ ನೇಮಿಸಿಕೊಳ್ಳುವುದಾಗಿ ಹೇಳಿದ್ದರು. ಈ ಹೇಳಿಕೆ ಟೀಕೆಗೆ ಗುರಿಯಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ್ದರು. ಇದನ್ನೂ ಓದಿ: ನಾಡಿನ ಸಮಸ್ತ ಜನತೆಗೆ ಕನ್ನಡದಲ್ಲೇ ಯುಗಾದಿ ಶುಭಾಶಯ ತಿಳಿಸಿದ ಮೋದಿ