ದಕ್ಷಿಣದ ಸ್ಟಾರ್‌ಗಳಾದ ಸಮಂತಾ ಮತ್ತು ನಾಗಚೈತನ್ಯ (Samanth & Nagachaitanya) , ಧನುಷ್ ಮತ್ತು ಐಶ್ವರ್ಯ (Dhanush & Aishwarya Rajanikanth) ಡಿವೋರ್ಸ್ ನಂತರ ಮತ್ತೊಬ್ಬ ನಟ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುತ್ತಿದ್ದಾರೆ. ತಮಿಳು ನಟ ವಿಜಯ್ ಆಂಥೋನಿ (Vijay Antony) ದಾಂಪತ್ಯದಲ್ಲಿ ಬಿರುಕುಂಟಾಗಿದೆ ಎಂಬ ಸುದ್ದಿ ಟಿಟೌನ್ ಅಂಗಳದಲ್ಲಿ ಗಿರಕಿ ಹೊಡೆಯುತ್ತಿದೆ.
ದಕ್ಷಿಣ ಭಾರತದ ಸ್ಟಾರ್ಸ್‌ಗಳಿಗೆ ಡಿವೋರ್ಸ್ ಅನ್ನೋದು ಕಾಮನ್ ಆಗಿಬಿಟ್ಟಿದೆ. ಚಿತ್ರರಂಗದಲ್ಲಿ ವಿಚ್ಛೇದನ ಹೆಚ್ಚಾಗುತ್ತಲೇ ಇದೆ. ಸಮಂತಾ ದಂಪತಿ ನಂತರ ಧನಷ್ ದಂಪತಿ ಕೂಡ ಡಿವೋರ್ಸ್ (Divorce) ಪಡೆದಿದ್ದರು. ಇದೀಗ ಖ್ಯಾತ ನಟ ವಿಜಯ್ ಆಂಥೋನಿ ಕೂಡ ತಮ್ಮ ವೈವಾಹಿಕ ಜೀವನಕ್ಕೆ ಫುಲ್ ಸ್ಟಾಪ್ ಇಡಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ನಟ ಸುಳಿವು ನೀಡಿದ್ದಾರೆ.
ಇತ್ತೀಚೆಗಷ್ಟೇ ತಮಿಳು ನಟ ವಿಜಯ್ ಆಂಥೋನಿ ಮದುವೆ ಬಗ್ಗೆ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ವಿಜಯ್ ಆಂಥೋನಿ ತಮ್ಮ ಪತ್ನಿ ಫಾತಿಮಾಗೆ(Fatima) ಡಿವೋರ್ಸ್ ನೀಡುವ ಸುಳಿವು ನೀಡಿದ್ದಾರೆಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ರಾಜಣ್ಣ ಮೇಲೆ ಪ್ರಶಾಂತ್ ಸಂಬರ್ಗಿ ವಾಗ್ದಾಳಿ
ನಿಮ್ಮ ಕುಟುಂಬದಲ್ಲಿ ಏನೇ ಸಮಸ್ಯೆ ಇದ್ದರೂ, ಅದನ್ನು ನಿಮ್ಮಗಳ ನಡುವೆ ಪರಿಹಾರ ಮಾಡಿಕೊಳ್ಳಿ. ಅದು ಸಾಧ್ಯವಿಲ್ಲ ಅಂದರೆ ಬೇರೆಯಾಗಿ. ಇಬ್ಬರೂ ಕಾಲಿಗೆ ಬೀಳುವ ಮೂಲಕ ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನಿಸಿ. ಆದರೆ, ಮೂರನೇ ವ್ಯಕ್ತಿಯನ್ನು ನಿಮ್ಮ ಜೀವನದೊಳಗೆ ಪ್ರವೇಶ ಮಾಡಲು ಬಿಡಬೇಡಿ. ಆವರು ನಿಮ್ಮನ್ನು ಮುಗಿಸಿಬಿಡುತ್ತಾರೆ ಎಂದು ವಿಜಯ್ ಆಂಥೋನಿ ಟ್ವೀಟ್ ಮಾಡಿದ್ದಾರೆ. ಇದೀಗ ಈ ಟ್ವೀಟ್‌ನಿಂದ ನಟ ವಿಜಯ್ ತಮ್ಮ ಪತ್ನಿಗೆ ಡಿವೋರ್ಸ್ ಕೊಡಲಿದ್ದಾರೆ ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಅಷ್ಟಕ್ಕೂ ಈ ವಿಚಾರ ಅದೆಷ್ಟರ ಮಟ್ಟಿಗೆ ಸತ್ಯ ಎಂಬುದನ್ನ ಕಾದುನೋಡಬೇಕಿದೆ.