ನವದೆಹಲಿ: ಅಬಕಾರಿ ನೀತಿಗೆ ಸಂಬಂಧಿಸಿದಂತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದ ಕೆಲವೇ ಗಂಟೆಗಳ ಬಳಿಕ ದೆಹಲಿ ಸರ್ಕಾರ 12 ಐಎಎಸ್ ಅಧಿಕಾರಿಗಳನ್ನು ಇಲಾಖೆಗಳ ನಡುವೆ ವರ್ಗಾವಣೆ ಮಾಡಿದೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಭಾರತೀಯ ಆಡಳಿತ ಸೇವೆಗಳ(ಐಎಎಸ್) ಅಧಿಕಾರಿಗಳನ್ನು ತಕ್ಷಣವೇ ವರ್ಗಾವಣೆ ಮಾಡುವಂತೆ ಆದೇಶ ಹೊರಡಿಸಿದ್ದಾರೆ. ಅಧಿಕೃತ ಸೂಚನೆಯಲ್ಲಿ ಲೆಫ್ಟಿನೆಂಟ್ ಗವರ್ನರ್ 12 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೆ ಆದೇಶಿಸಿದ್ದಾರೆ ಎಂದು ಕಚೇರಿ ತಿಳಿಸಿದೆ.
Advertisement
Advertisement
ಜಿತೇಂದ್ರ ನಾರಾಯಣ್, ಅನಿಲ್ ಕುಮಾರ್ ಸಿಂಗ್, ವಿವೇಕ್ ಪಾಂಡೆ, ಶುರ್ಬೀರ್ ಸಿಂಗ್, ಗರಿಮಾ ಗುಪ್ತಾ, ಮಾಧೋರಾವ್ ಮೋರ್, ಉದಿತ್ ಪ್ರಕಾಶ್ ರೈ, ವಿಜೇಂದ್ರ ಸಿಂಗ್ ರಾವತ್, ಕ್ರಿಶನ್ ಕುಮಾರ್, ಕಲ್ಯಾಣ್ ಸಹಾಯ್ ಮೀನಾ, ಸೋನಾಲ್ ಸ್ವರೂಪ ಮತ್ತು ಹೇಮಂತ್ ಕುಮಾರ್ ವರ್ಗಾವಣೆಗೊಂಡ 12 ಅಧಿಕಾರಿಗಳು. ಇದನ್ನೂ ಓದಿ: ಹಿಂದೂಗಳಿಗೂ ಇಲ್ಲಿ ನನ್ನಷ್ಟೇ ಹಕ್ಕಿದೆ – ಬಾಂಗ್ಲಾದೇಶ ಪ್ರಧಾನಿ ಹೇಳಿಕೆ
Advertisement
ಹೊಸ ಅಬಕಾರಿ ನೀತಿ ಪ್ರಕರಣದಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ದೆಹಲಿ ಉಪ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಅವರ ಮನೆ ಸೇರಿದಂತೆ ರಾಷ್ಟ್ರ ರಾಜಧಾನಿಯ 22 ಸ್ಥಳಗಳಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಶುಕ್ರವಾರ ದಾಳಿ ನಡೆಸಿತ್ತು. ಇದಾದ ಬಳಿಕ ಈ ನಿರ್ದೇಶನ ನೀಡಲಾಗಿದೆ.
Advertisement
ಸಿಬಿಐ ದೆಹಲಿಯ ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಮತ್ತು ಜಾರಿಗೊಳಿಸುವಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಎಫ್‌ಐಆರ್‌ನಲ್ಲಿ ಸಿಸೋಡಿಯಾ ಅವರನ್ನು ಇತರ 14 ಜನರೊಂದಿಗೆ ಪಟ್ಟಿ ಮಾಡಲಾಗಿದೆ. ಇದನ್ನೂ ಓದಿ: ಮಲಗಿದ್ದಾಗ ಐಟಿಬಿಪಿ ಶಿಬಿರದಿಂದ ಯೋಧರ ಎರಡು AK-47 ರೈಫಲ್ ಕಳವು – ವಿಶೇಷ ತಂಡದಿಂದ ತಲಾಶ್
ನಾವು ತನಿಖೆಗೆ ಸಹಕರಿಸಿದ್ದೇವೆ ಮತ್ತು ಮುಂದೆಯೂ ಸಹಕರಿಸುತ್ತೇವೆ. ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ತನಿಖಾ ಸಂಸ್ಥೆ ಸಿಬಿಐ ದುರ್ಬಳಕೆಯಾಗುತ್ತಿದೆ ಎಂದು ನಮಗೆ ತಿಳಿದಿದೆ ಎಂದು ಮನೀಶ್ ಸಿಸೋಡಿಯಾ ತನ್ನ ನಿವಾಸದಲ್ಲಿ 15 ಗಂಟೆಗಳ ತನಿಖೆ ಮುಗಿದ ಬಳಿಕ ಹೇಳಿದರು.