ಮುಂಬೈ: ನಾನು ಬಿಸಿಸಿಐ (BCCI) ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಆ ಎರಡು ವಿಷಯಗಳನ್ನು ಕುರಿತು ಗಂಭೀರವಾಗಿ ಪರಿಗಣಿಸಿ ಇನ್ನಷ್ಟು ಅಭಿವೃದ್ಧಿಯತ್ತ ಭಾರತೀಯ ಕ್ರಿಕೆಟ್‍ನ್ನು ಕೊಂಡೊಯ್ಯುತ್ತೇನೆ ಎಂದು ಬಿಸಿಸಿಐ ನೂತನ ಅಧ್ಯಕ್ಷ ರೋಜರ್ ಬಿನ್ನಿ (Roger Binny) ಹೇಳಿದ್ದಾರೆ.
Advertisement
ಬಿಸಿಸಿಐಯ 36ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಇದೀಗ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಈ ಎರಡು ವಿಷಯಗಳ ಕುರಿತು ಗಂಭೀರವಾಗಿ ಚಿಂತಿಸಿದ್ದೇನೆ. ಮೊದಲನೆಯದು ಗಾಯಗೊಂಡಿರುವ ಆಟಗಾರರ ಕುರಿತು ಹೆಚ್ಚಿನ ನಿಗಾ ವಹಿಸುತ್ತೇನೆ. ಎರಡನೆಯದು ಭಾರತದಲ್ಲಿರುವ ಕ್ರಿಕೆಟ್ ಪಿಚ್‍ಗಳ (Pitches) ಕುರಿತು ಗಮನಹರಿಸಬೇಕಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕನ್ನಡಿಗ ರೋಜರ್ ಬಿನ್ನಿ ಇನ್ಮುಂದೆ BCCI ಕ್ಯಾಪ್ಟನ್
Advertisement
Advertisement
ಸೌರವ್ ಗಂಗೂಲಿ (Sourav Ganguly) ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಬಿನ್ನಿ ನೇಮಕಗೊಂಡಿದ್ದಾರೆ. ನಿನ್ನೆ ನಡೆದ 91ನೇ ಬಿಸಿಸಿಐ ವಾರ್ಷಿಕ ಸಭೆಯಲ್ಲಿ ಬಿನ್ನಿ ಅವರನ್ನು ಒಮ್ಮತದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಬಿನ್ನಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಏಕೈಕ ಅಭ್ಯರ್ಥಿಯಾಗಿದ್ದರು ಹಾಗಾಗಿ ಅವರಿಗೆ ಅಧ್ಯಕ್ಷ ಪಟ್ಟ ಒಲಿದು ಬಂದಿದೆ. ಇದನ್ನೂ ಓದಿ: ದಾದಾ ಪರ ದೀದಿ ಬ್ಯಾಟಿಂಗ್ – ICC ಚುನಾವಣೆಗೆ ಅವಕಾಶ ಕೊಡುವಂತೆ ಮೋದಿಗೆ ಪತ್ರ
Advertisement
1955 ಜುಲೈ 19ರಂದು ಜನಿಸಿದ ರೋಜರ್ ಬಿನ್ನಿ 1979 ರಿಂದ 1987ರ ವರೆಗೆ ಭಾರತ ಕ್ರಿಕೆಟ್ ತಂಡದಲ್ಲಿದ್ದರು. ಈವರೆಗೆ 27 ಟೆಸ್ಟ್ ಪದ್ಯಗಳಲ್ಲಿ 830 ರನ್‍ಗಳಿಸಿ, ಬೌಲಿಂಗ್‍ನಲ್ಲಿ 47 ವಿಕೆಟ್ ಪಡೆದಿದ್ದಾರೆ. 72 ಏಕದಿನ ಕ್ರಿಕೆಟ್ ಪಂದ್ಯದಲ್ಲಿ 629 ರನ್ ಗಳಿಸಿ, 77 ವಿಕೆಟ್ ಪಡೆದು ಮಿಂಚಿದ್ದಾರೆ.