ಅಕ್ಷಯ್ ಕುಮಾರ್ ಬಳಿಕ ‘ಕಣ್ಣಪ್ಪ’ ಸಿನಿಮಾದಲ್ಲಿ ಕಾಜಲ್ ಅಗರ್ವಾಲ್

Public TV
1 Min Read
kajal 1

ಟಾಲಿವುಡ್‌ನ ಬಿಗ್ ಬಜೆಟ್ ‘ಕಣ್ಣಪ್ಪ’ (Kanappa Film) ಸಿನಿಮಾ ತಾರಾಗಣ ದಿನದಿಂದ ದಿನಕ್ಕೆ ಹಿರಿದಾಗುತ್ತಿದೆ. ಪ್ರಭಾಸ್ (Prabhas), ಮೋಹನ್ ಲಾಲ್, ಅಕ್ಷಯ್ ಕುಮಾರ್ ಚಿತ್ರತಂಡಕ್ಕೆ ಸಾಥ್ ನೀಡಿದ ಬೆನ್ನಲ್ಲೇ ಮಗಧೀರ ಬೆಡಗಿ ಕಾಜಲ್ ಅಗರ್ವಾಲ್ (Kajal Aggarwal) ಕೂಡ ಕೈಜೋಡಿಸಿದ್ದಾರೆ.

kajal aggarwal

ಮಲ್ಟಿಸ್ಟಾರ್‌ಗಳಿರುವ ‘ಕಣ್ಣಪ್ಪ’ ಸಿನಿಮಾದಲ್ಲಿ ವಿಷ್ಣು ಮಂಚು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಾಜಲ್‌ಗೂ ಮುಖ್ಯ ಪಾತ್ರವೊಂದಕ್ಕೆ ನಟಿಸಲು ಚಿತ್ರತಂಡ ಸಂಪರ್ಕಿಸಿದೆ. ಆದರೆ ಸಿನಿಮಾತಂಡದಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಒಂದೇ ವೇಳೆ, ಈ ಸುದ್ದಿ ನಿಜವೇ ಆಗಿದ್ದಲ್ಲಿ ಅಭಿಮಾನಿಗಳಿಗೆ ಮನರಂಜನೆ ಗ್ಯಾರಂಟಿ. ಇದನ್ನೂ ಓದಿ:ಚಿತ್ರರಂಗಕ್ಕೆ ದ್ವಾರಕೀಶ್ ಕೊಡುಗೆ ಅಪಾರ- ನರೇಂದ್ರ ಮೋದಿ ಸಂತಾಪ

kajalಸ್ಟಾರ್ ಹೀರೋಗಳಿಗೆ ನಾಯಕಿಯಾಗಿ ಮಾತ್ರವಲ್ಲ. ಮಹಿಳಾ ಪ್ರಧಾನ ಸಿನಿಮಾಗಳಲ್ಲಿಯೂ ನಟಿಸುವ ಮೂಲಕ ಕಾಜಲ್ ಸೈ ಎನಿಸಿಕೊಂಡಿದ್ದಾರೆ. ಮದುವೆಯಾಗಿ ಒಂದು ಮಗುವಿನ ತಾಯಿಯಾದ್ಮೇಲೆಯೂ ಕಾಜಲ್ ತಮ್ಮ ಚಾರ್ಮ್ ಉಳಿಸಿಕೊಂಡಿದ್ದಾರೆ. ಅದಕ್ಕಾಗಿಯೇ ಈಗಲೂ ಕೂಡ ಚಿತ್ರರಂಗದಲ್ಲಿ ನಟಿಗೆ ಬೇಡಿಕೆ ಇದೆ. ಸದ್ಯ ‘ಕಣ್ಣಪ್ಪ’ ಚಿತ್ರದ ವಿಚಾರವಾಗಿ ನಟಿ ಸಖತ್ ಸುದ್ದಿಯಾಗುತ್ತಿದ್ದಾರೆ.

ಸದ್ಯ ಕಾಜಲ್ ಕೈಯಲ್ಲಿ ತೆಲುಗು ಮತ್ತು ತಮಿಳು ಸೇರಿದಂತೆ ಹಲವು ಸಿನಿಮಾಗಳಿವೆ. ಒಂದಿಷ್ಟು ಕಥೆಗಳನ್ನು ಕೇಳುತ್ತಿದ್ದಾರೆ. ಕಳೆದ ವರ್ಷ ಅಂತ್ಯದಲ್ಲಿ ಬಾಲಯ್ಯಗೆ ಜೋಡಿಯಾಗಿ ಕಾಜಲ್ ನಟಿಸಿದ್ದರು. ಇವರ ಜೊತೆ ಶ್ರೀಲೀಲಾ ಕೂಡ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಸಿನಿಮಾ ಗಲ್ಲಾಪಟ್ಟಿಗೆಯಲ್ಲಿ ಸಕ್ಸಸ್‌ ಕಂಡಿದೆ.

Share This Article