ಅಫ್ತಾಬ್ ನನ್ನನ್ನು ಕೊಂದು ಪೀಸ್ ಪೀಸ್ ಮಾಡ್ತಾನೆ – 2 ವರ್ಷದ ಹಿಂದೆಯೇ ಪೊಲೀಸರಿಗೆ ಪತ್ರ ಬರೆದಿದ್ದ ಶ್ರದ್ಧಾ

Public TV
2 Min Read
delhi murder

ಮುಂಬೈ: ಲಿವ್‌ಇನ್ ರಿಲೇಶನ್‌ನಲ್ಲಿದ್ದು ತನ್ನ ಬಾಯ್‌ಫ್ರೆಂಡ್ ಕೈಯಲ್ಲೇ ಕೊಲೆಯಾಗಿ, ತುಂಡು ತುಂಡಾಗಿ ಕತ್ತರಿಸಿ ದೆಹಲಿಯಾದ್ಯಂತ (Delhi) ಕಾಡುಗಳಲ್ಲಿ ಹೂತು ಹೋದ ಯುವತಿ ಶ್ರದ್ಧಾ (Shraddha Walkar) 2 ವರ್ಷಗಳ ಹಿಂದೆಯೇ ಈ ರೀತಿ ಆಗಬಹುದು ಎಂದು ಪೊಲೀಸರಿಗೆ (Cops) ತನಗಾದ ಭೀತಿಯನ್ನು ಪತ್ರದ (Letter) ಮೂಲಕ ತಿಳಿಸಿದ್ದರು ಎಂಬುದು ಇದೀಗ ಬೆಳಕಿಗೆ ಬಂದಿದೆ.

ಶ್ರದ್ಧಾ 2 ವರ್ಷಗಳ ಹಿಂದೆ ತಮ್ಮ ಹುಟ್ಟೂರಾದ ವಸಾಯಿಯ ತಿಲುಂಜ್‌ನಲ್ಲಿ ಪೊಲೀಸರಿಗೆ ಈ ಬಗ್ಗೆ ತಿಳಿಸಿದ್ದರು. ಆಕೆ ಅಫ್ತಾಬ್‌ನೊಂದಿಗೆ (Aftab Poonawala) ಒಂದೇ ಫ್ಲಾಟ್‌ನಲ್ಲಿ ವಾಸವಿದ್ದು, ಅಫ್ತಾಬ್ ಆಕೆಗೆ ಥಳಿಸಿದ ಕಾರಣಕ್ಕೆ ಪೊಲೀಸರಿಗೆ ಪತ್ರ ಬರೆದಿದ್ದಾಗಿ ಮಹಾರಾಷ್ಟ್ರದ ತನಿಖಾಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

SHRADDHA WALKER AFTAB

2022ರ ನವೆಂಬರ್ 23ರಂದು ಶ್ರದ್ಧಾ ಬರೆದಿರುವ ಪತ್ರದಲ್ಲಿ, ಅಫ್ತಾಬ್ ಇಂದು ನನ್ನನ್ನು ಉಸಿರುಗಟ್ಟಿಸಿ ಕೊಲ್ಲಲು ಪ್ರಯತ್ನಿಸಿದ್ದಾನೆ. ಆತ ನನಗೆ ಬ್ಲಾಕ್‌ಮೇಲ್ ಮಾಡುತ್ತಿದ್ದು, ನನ್ನನ್ನು ಕೊಂದು, ತುಂಡು ತುಂಡು ಮಾಡಿ ಎಸೆದು ಹೋಗುತ್ತೇನೆ ಎಂದು ಹೆದರಿಸುತ್ತಿದ್ದಾನೆ. ಕಳೆದ 6 ತಿಂಗಳಿನಿಂದ ಆತ ನನಗೆ ನಿರಂತರವಾಗಿ ಹೊಡೆಯುತ್ತಿದ್ದಾನೆ. ಆದರೆ ನನಗೆ ಈ ಬಗ್ಗೆ ಪೊಲೀಸರ ಬಳಿ ಹೋಗಿ ಹೇಳುವಷ್ಟು ಧೈರ್ಯವಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತನ್ನೆದುರೇ ಸೆಕ್ಸ್ ಮಾಡಲು ಜೋಡಿಯನ್ನು ಒತ್ತಾಯಿಸಿದ ಪೂಜಾರಿ – ಫಾಸ್ಟ್ ಗಂ ಸುರಿದು ಇಬ್ಬರ ಹತ್ಯೆ

ವರದಿಗಳ ಪ್ರಕಾರ ಡೇಟಿಂಗ್ ಅಪ್ಲಿಕೇಶನ್ ಮೂಲಕ ಪರಿಚಯವಾದ ಶ್ರದ್ಧಾ ಹಾಗೂ ಅಫ್ತಾಬ್ 2019ರಲ್ಲಿ ಸಂಬಂಧ ಬೆಳೆಸಿದ್ದರು. ಪತ್ರದಲ್ಲಿ ಆಕೆ 6 ತಿಂಗಳಿನಿಂದ ಹಿಂಸೆಯನ್ನು ಅನುಭವಿಸುತ್ತಿರುವುದಾಗಿ ತಿಳಿಸಿದರೂ ಅವರಿಬ್ಬರ ಸಂಬಂಧ ಮತ್ತೆರಡು ವರ್ಷಗಳ ವರೆಗೂ ಮುರಿದು ಹೋಗಿರಲಿಲ್ಲ. ಈ ವರ್ಷ ಮೇ ತಿಂಗಳಿನಲ್ಲಿ ಅವರಿಬ್ಬರೂ ದೆಹಲಿಗೆ ಸ್ಥಳಾಂತರಗೊಂಡಿದ್ದರು.

delhi Shraddha murder Aaftab 1

ಅಂತರ್ ಧರ್ಮೀಯ ಎಂಬ ಕಾರಣಕ್ಕೆ ಶ್ರದ್ಧಾ ಪೋಷಕರು ಇಬ್ಬರ ಸಂಬಂಧವನ್ನು ಒಪ್ಪದ ಕಾರಣ ಸಂಪರ್ಕವನ್ನು ಕಡಿತಗೊಳಿಸಿದ್ದರು. ದೆಹಲಿಯ ಮೆಹ್ರೌಲಿಯಲ್ಲಿ ಫ್ಲಾಟ್‌ಗೆ ಸ್ಥಳಾಂತರಗೊಂಡ ಕೆಲ ದಿನಗಳ ಬಳಿಕ ನಡೆದ ಭೀಕರ ಹತ್ಯೆ 6 ತಿಂಗಳ ಬಳಿಕ ಬೆಳಕಿಗೆ ಬಂದಿದೆ. ಇದನ್ನೂ ಓದಿ: ದೆಹಲಿಯಲ್ಲಿ ಮತ್ತೆ ಬರ್ಬರ ಕೊಲೆ- ನಾಲ್ವರು ಕುಟುಂಬಸ್ಥರನ್ನು ಕತ್ತು ಸೀಳಿ ಕೊಲೆಗೈದ ಮಾದಕ ವ್ಯಸನಿ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *