ಭೋಪಾಲ್: ನಮೀಬಿಯಾದಿಂದ (Namibia) ಭಾರತದ (India) ಮಧ್ಯಪ್ರದೇಶಕ್ಕೆ ಕರೆ ತಂದಿದ್ದ 8 ಚೀತಾಗಳ (Cheetah) ಪೈಕಿ 2 ಚೀತಾಗಳನ್ನು ಭಾರತಕ್ಕೆ ಕರೆತಂದು 51 ದಿನಗಳ ಕ್ವಾರಂಟೈನ್ ಮುಗಿದ ಬಳಿಕ ಕಾಡಿನ ಆವರಣದಲ್ಲಿ ಬಿಟ್ಟ ಕೂಡಲೇ ಬೇಟೆ ಆರಂಭಿಸಿದೆ.
Advertisement
ಪ್ರಧಾನಿ ನರೇಂದ್ರ ಮೋದಿಯ (Narendra Modi) 72ನೇ ವರ್ಷದ ಹುಟ್ಟುಹಬ್ಬದಂದು ನಮೀಬಿಯಾದಿಂದ ಕರೆತಂದಿದ್ದ 8 ಚೀತಾಗಳನ್ನು ಮಧ್ಯಪ್ರದೇಶದ (Madhya Pradesh) ಕುನ್ಹೋ ರಾಷ್ಟ್ರೀಯ ಉದ್ಯಾನವನದಲ್ಲಿ (Kuno National Park) ಬಿಡಲಾಗಿತ್ತು. ಆದರೆ ಚೀತಾಗಳು ಅಲ್ಲಿನ ಹವಾಮಾನ ಹಾಗೂ ವಾತಾವರಣಕ್ಕೆ ಹೊಂದಿಕೊಳ್ಳಬೇಕಾಗುವವರೆಗೂ ಅವುಗಳ ಮೇಲೆ ನಿಗಾ ವಹಿಸಲಾಗಿತ್ತು. ಕಾಡಿನಲ್ಲೇ ನಿರ್ದಿಷ್ಟ ಪ್ರದೇಶದಲ್ಲಿರಿಸಲಾಗಿತ್ತು. ಇದೀಗ 51 ದಿನಗಳ ಕ್ವಾರಂಟೈನ್ ಬಳಿಕ 8 ಚೀತಾಗಳ ಪೈಕಿ 2 ಚೀತಾಗಳನ್ನು ಕಾಡಿನ ದೊಡ್ಡ ಪ್ರದೇಶಕ್ಕೆ ಬಿಡಲಾಗಿದೆ. ಈ 2 ಚೀತಾಗಳು ದೊಡ್ಡ ಪ್ರದೇಶಕ್ಕೆ ಬಿಟ್ಟ 24 ಗಂಟೆಗಳಲ್ಲಿ ಬೇಟೆ ಆಡಿರುವ ಬಗ್ಗೆ ವರದಿಯಾಗಿದೆ. ಇದನ್ನೂ ಓದಿ: 70 ವರ್ಷಗಳ ನಂತರ ಭಾರತಕ್ಕೆ ಮರಳಿದ ಚೀತಾ – ನಮೀಬಿಯಾದ 8 ಚೀತಾಗಳನ್ನು ಬಿಡುಗಡೆ ಮಾಡಿದ ಮೋದಿ
Advertisement
Advertisement
ಚೀತಾಗಳು ಆರೋಗ್ಯವಾಗಿ, ಅಲ್ಲಿನ ಪ್ರದೇಶಕ್ಕೆ ಹೊಂದಿಕೊಳ್ಳುತ್ತಿರುವುದನ್ನು ತಿಳಿದು ಸಂತಸವಾಯಿತು. ಇದೀಗ 2 ಚೀತಾಗಳನ್ನು ಬಿಡುಗಡೆಮಾಡಲಾಗಿದೆ. ಉಳಿದ ಚೀತಾಗಳನ್ನು ಹಂತ ಹಂತವಾಗಿ ವನ್ಯ ಜೀವಿಗಳಿರುವೆಡೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ಬಿಕ್ಕಟ್ಟು ಉಂಟಾದಾಗ ಅಣ್ಣ-ತಂಗಿ ವಿದೇಶಕ್ಕೆ ಓಡಿ ಹೋಗ್ತಾರೆ: ರಾಹುಲ್, ಪ್ರಿಯಾಂಕಾಗೆ ಯೋಗಿ ಟಾಂಗ್
Advertisement
Great news! Am told that after the mandatory quarantine, 2 cheetahs have been released to a bigger enclosure for further adaptation to the Kuno habitat. Others will be released soon. I’m also glad to know that all cheetahs are healthy, active and adjusting well. ???? pic.twitter.com/UeAGcs8YmJ
— Narendra Modi (@narendramodi) November 6, 2022
ಚೀತಾ ವಿಶೇಷತೆಯೇನು?
ನಮೀಬಿಯಾದಿಂದ ತರಲಾದ 8 ಚೀತಾಗಳಲ್ಲಿ 3 ಗಂಡು ಹಾಗೂ 5 ಹೆಣ್ಣು ಚೀತಾಗಳಿವೆ. ಇವು 2 ರಿಂದ 6 ವರ್ಷ ಆಸುಪಾಸಿನದ್ದಾಗಿವೆ. ಮಚ್ಚೆ ಗುರುತಿನ ಚೀತಾಗಳ ಸಂತತಿ ಭಾರತದಲ್ಲಿ 70 ವರ್ಷ ಹಿಂದೆಯೇ ನಾಶವಾಗಿತ್ತು. ಭಾರತದಲ್ಲಿದ್ದ ಕೊನೆಯ ಚೀತಾ 1947ರಲ್ಲಿ ಸಾವನ್ನಪ್ಪಿತ್ತು. 1952ರಲ್ಲಿ ಈ ಪ್ರಭೇದ ಭಾರತದಲ್ಲಿ ಇಲ್ಲ ಎಂದು ಘೋಷಣೆ ಮಾಡಲಾಗಿತ್ತು. ಇದೀಗ 75 ವರ್ಷಗಳ ಬಳಿಕ ಭಾರತಕ್ಕೆ ಚೀತಾಗಳು ಬಂದಿವೆ. ಈ ಚೀತಾಗಳಿಗೆ ಕುನ್ಹೋ ಉದ್ಯಾನವನ ಪರಿಸರ ಅನುಕೂಲಕರವಾಗಿದ್ದು ಅಲ್ಲಿ ಬಿಡಲಾಗಿದೆ. ಇದನ್ನೂ ಓದಿ: ಭಾರತಕ್ಕೆ ಬಂದ ಚೀತಾ ತಂಡದಲ್ಲಿದ್ರು ಪುತ್ತೂರಿನ ಡಾ.ಸನತ್ ಕೃಷ್ಣ ಭಟ್