LatestLeading NewsMain PostNational

ದೇಶದಲ್ಲಿ ಬಿಕ್ಕಟ್ಟು ಉಂಟಾದಾಗ ಅಣ್ಣ-ತಂಗಿ ವಿದೇಶಕ್ಕೆ ಓಡಿ ಹೋಗ್ತಾರೆ: ರಾಹುಲ್, ಪ್ರಿಯಾಂಕಾಗೆ ಯೋಗಿ ಟಾಂಗ್

ಶಿಮ್ಲಾ: ದೇಶದಲ್ಲಿ ಯಾವುದೇ ರೀತಿಯ ಬಿಕ್ಕಟ್ಟು (Crisis) ಉಂಟಾದಾಗ ಈ ಇಬ್ಬರು ಅಣ್ಣ-ತಂಗಿ ದೇಶವನ್ನು ತೊರೆದು ವಿದೇಶಕ್ಕೆ ಓಡಿ ಹೋಗುತ್ತಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಪ್ರಿಯಾಂಕಾ ಗಾಂಧಿ (Priyanka Gandhi) ಮತ್ತು ರಾಹುಲ್ ಗಾಂಧಿ (Rahul Gandhi) ಅವರ ಕಾಲೆಳೆದಿದ್ದಾರೆ.

ಸೋಮವಾರ ಹಿಮಾಚಲ ಪ್ರದೇಶದ (Himachal Pradesh) ಉನಾದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯವರ ವಿರುದ್ಧ ತೀವ್ರವಾದ ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿ ಕೊರೊನಾ ಬಿಕ್ಕಟ್ಟಿನ ಸಂದರ್ಭ ಇವರಿಬ್ಬರೂ ದೇಶವನ್ನು ತೊರೆದು ವಿದೇಶಕ್ಕೆ ಪಲಾಯನ ಮಾಡಿದ್ದರು ಎಂದು ವ್ಯಂಗ್ಯವಾಡಿದರು.

ದೇಶದಲ್ಲಿ ಭಯೋತ್ಪಾದನೆಯ ಮೂಲವನ್ನು ಸೃಷ್ಟಿಸಲು ಕಾಂಗ್ರೆಸ್ 370ನೇ ವಿಧಿಯನ್ನು (Article 370) ಹೇರಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಉದ್ದೇಶಪೂರ್ವಕವಾಗಿ 370 ಅನ್ನು ವಿಧಿಸಲಾಯಿತು. ಇದರಿಂದ ದೇಶ ಭಯೋತ್ಪಾದನೆಯ ನೋವನ್ನು ಅನುಭವಿಸಿತು. ಕಾಂಗ್ರೆಸ್ ಆಡಳಿತದಲ್ಲಿ ಭಯೋತ್ಪಾದಕರು ಮತ್ತು ಭಯೋತ್ಪಾದನೆ ಎರಡೂ ಉತ್ತುಂಗದಲ್ಲಿದ್ದವು. ಪ್ರಧಾನಿ ನರೇಂದ್ರ ಮೋದಿ ಅವರು ತಮಗೆ ಅವಕಾಶ ಸಿಕ್ಕ ತಕ್ಷಣ ಜಮ್ಮು ಮತ್ತು ಕಾಶ್ಮೀರದಿಂದ 370ನೇ ವಿಧಿಯನ್ನು ಅನ್ನು ತೆಗೆದುಹಾಕಿದರು ಎಂದು ತಿಳಿಸಿದರು. ಇದನ್ನೂ ಓದಿ: ಇರಾನ್ ಚಳವಳಿಗೆ ಕೈಜೋಡಿಸಿದ ಕೇರಳದ ಮುಸ್ಲಿಂ ಮಹಿಳೆಯರು – ಹಿಜಬ್ ಸುಟ್ಟು ಪ್ರತಿಭಟನೆ

ಕಾಂಗ್ರೆಸ್ ತನ್ನ ಸ್ವಾರ್ಥಕ್ಕಾಗಿ 370ನೇ ವಿಧಿಯನ್ನು ತೆಗೆದುಹಾಕಲಿಲ್ಲ. ಕಾಂಗ್ರೆಸ್ ಕೇವಲ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ದೇಶದ ಆಂತರಿಕ ಭದ್ರತೆಯನ್ನು ಖಚಿತಪಡಿಸಲು ಸಾಧ್ಯವಿಲ್ಲ, ದೇಶವಾಸಿಗಳಿಗೆ ಕಲ್ಯಾಣ ಯೋಜನೆಗಳನ್ನು ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ಆದಿತ್ಯನಾಥ್ ಹೇಳಿದರು.

ಈಗ ಜಮ್ಮು ಮತ್ತು ಕಾಶ್ಮೀರ ದೇಶದ ಇತರ ರಾಜ್ಯಗಳಂತೆ. ಹಿಮಾಚಲ ಪ್ರದೇಶ ಮತ್ತು ಇತರ ರಾಜ್ಯಗಳ ಜನರು ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗಿ ಭೂಮಿಯನ್ನು ಖರೀದಿಸಬಹುದು, ಸ್ವಂತ ಮನೆಯನ್ನೂ ನಿರ್ಮಿಸಬಹುದು ಎಂದರು. ಇದನ್ನೂ ಓದಿ: BJP ಉದ್ಯೋಗದ ಬದಲಿಗೆ ಯುವ ಸಮೂಹಕ್ಕೆ ಡ್ರಗ್ಸ್ ಕೊಡ್ತಿದೆ: ಪ್ರಿಯಾಂಕಾ ಕಿಡಿ

Live Tv

Leave a Reply

Your email address will not be published. Required fields are marked *

Back to top button