ಕಾಬೂಲ್: ಅಫ್ಘಾನಿಸ್ತಾನದಲ್ಲಿ ಜನರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಹೀಗಿರುವಾಗ ಜನಪ್ರಿಯ ಹಾಡುಗಾರ ಫವಾದ್ ಕಿಶನಾಬಾದ್ ಅವರನ್ನು ಉಗ್ರರು ಹತ್ಯೆ ಗೈದಿದ್ದಾರೆ.
ಅಫ್ಘಾನಿಸ್ತಾನದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಹಾಡುವುದನ್ನು ತಾಲಿಬಾನಿಗಳು ನಿಷೇಧಿಸಿದ್ದಾರೆ. ಹಾಡುಗಾರ ಫವಾದ್ ಕಿಶನಾಬಾದ್ ತಾಲಿಬಾನ್‍ಗೆ ವಿರುದ್ದವಾಗಿ ಹಾಡುಗಳನ್ನು ಕಟ್ಟಿ ಹಾಡುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಯಲ್ಲಿ ತಾಲಿಬಾನಿಗಳು ಫವಾದ್‍ರನ್ನು ಹುಡುಕಿ ಹತ್ಯೆ ಮಾಡಿದ್ದಾರೆ. ಇದನ್ನೂ ಓದಿ: ಕಾರಿಗೆ ಮೂತ್ರ ಮಾಡಿದ ನಾಯಿ- ಕಾರ್ ಮಾಲೀಕನಿಗೆ ಬಿತ್ತು ಗೂಸಾ
Advertisement
#AFG “Fawad Andarabi a local singer was shot dead by Taliban in Kishaan village in Andarab district in Baghlan province.” Multiple residents from Anadarab tells me. pic.twitter.com/6UWKrRWanw
— BILAL SARWARY (@bsarwary) August 28, 2021
Advertisement
ಅಂದ್ರಾಬ್ ಪ್ರದೇಶದ ಗಾಯಕನನ್ನು ತಾಲಿಬಾನಿಗಳು ಕೊಂದಿದ್ದನ್ನು ಸ್ಥಳೀಯ ಮಾಧ್ಯಮ ದೃಢಪಡಿಸಿದೆ. ಮಾಜಿ ಆಂತರಿಕ ವ್ಯವಹಾರಗಳ ಸಚಿವ ಮಸೂದ್ ಅಂದರಾಬಿ ಹೇಳಿದ್ದಾಗಿ ಉಲ್ಲೇಖಿಸಿದೆ. ಆಗಸ್ಟ್ 15ರಂದು ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದಾರೆ.