ದೆಹಲಿಯ ಆಸ್ಪತ್ರೆಗಳ ಮೇಲೆ ಅಫ್ಘಾನಿಸ್ತಾನ ಅವಲಂಬಿತವಾಗಿದೆ: ಪರಿಸ್ಥಿತಿ ಬಿಚ್ಚಿಟ್ಟ ಜಾನ್

Public TV
2 Min Read
UDP JOHN

ಉಡುಪಿ: ಭಾರತದ ಔಷಧ ಅಫ್ಘಾನಿಸ್ತಾನಕ್ಕೆ ಸದಾ ರವಾನೆಯಾಗುತ್ತದೆ. ಗಂಭೀರ ಆರೋಗ್ಯ ಪರಿಸ್ಥಿತಿಗಳು ಉಂಟಾದ ಸಂದರ್ಭದಲ್ಲಿ ಅಫ್ಘಾನಿಸ್ತಾನದಿಂದ ಡೆಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಾರೆ ಎಂಬ ಸತ್ಯಾಂಶವನ್ನು ಅಘ್ಘಾನಿಸ್ತಾನದಿಂದ ತಾಯ್ನಾಡಿಗೆ ಮರಳಿರುವ ಮಲ್ಪೆಯ ಜಾನ್ ಎಂಬವರು ಬಿಚ್ಚಿಟ್ಟಿದ್ದಾರೆ.

AFGANITAN

ಅಫ್ಘಾನಿಸ್ತಾನ ತಾಲಿಬಾನ್ ಕೈವಶವಾಗುವ ದಿನವೇ ಮಲ್ಪೆಯ ಜಾನ್ ಭಾರತಕ್ಕೆ ವಾಪಸ್ಸಾಗಿದ್ದಾರೆ. ಫ್ಯೂಯೆಲ್ ಸೂಪರ್ ವೈಸರಾಗಿ ಜಾನ್ ಅವರು ವೃತ್ತಿ ನಿರ್ವಹಿಸುತ್ತಿದ್ದರು. ಅಲ್ಲಿಂದ ತಾಯ್ನಾಡಿಗೆ ಮರಳಿದ ಬಳಿಕ ಅಲ್ಲಿನ ಸ್ಥಿತಿಯನ್ನು ಟಿವಿಯಲ್ಲಿ ನೋಡಿ ದೇವರೇ ನನ್ನನ್ನು ಕರೆಸಿಕೊಂಡರು ಎಂದು ಜಾನ್ ಖುಷಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾಬೂಲ್ ವಿಮಾನ ನಿಲ್ದಾಣಕ್ಕೆ 5 ಸಾವಿರ ಅಮೆರಿಕ ಸೈನಿಕರ ನಿಯೋಜನೆ

UDP JOHN 1

ಅಘ್ಘಾನಿಸ್ತಾನ ಪರಿಸ್ಥಿತಿ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಜಾನ್, ಕಳೆದ 10 ದಿನಗಳಿಂದ ತಾಲಿಬಾನಿಗಳು ನಮ್ಮ ಎಲ್ಲಾ ಕಂಪನಿಗಳನ್ನು ವಶಪಡಿಸಿಕೊಂಡು ಬರುತ್ತಿದ್ದರು. ಕಾಬೂಲ್ ಬ್ರಾಂಚ್ ಮಾತ್ರ ನಮ್ಮ ಕೈಯಲ್ಲಿ ಉಳಿದಿತ್ತು. ನಮಗೆ ಮೆಸೇಜ್ ಮೂಲಕ ಬಾಸ್ ಮಾಹಿತಿಯನ್ನು ಕೊಟ್ಟಿದ್ದರು. ಕೂಡಲೇ ದೇಶಕ್ಕೆ ವಾಪಸಾಗಲು ಸಿದ್ಧರಾಗಿ ಎಂದು ಹೇಳಿದರು.

ಟಿಕೆಟ್ ಮಾಡಿ ಕಳುಹಿಸಿದರು. ವಿಮಾನದಲ್ಲಿ ಕುಳಿತು ಅರ್ಧ ಗಂಟೆಯ ಒಳಗೆ ಅಫ್ಘಾನಿಸ್ತಾನ ಚಿತ್ರಣವೇ ಬದಲಾಗಿದೆ. ತಾಲಿಬಾನ್‍ಗಳು ದೇಶ ವಶಪಡಿಸಿದ್ದಾರೆ ಎಂಬ ಮಾಹಿತಿ ನನಗೆ ಗೊತ್ತಾಯಿತು. ಸಂಕಟ ಸಮಯದಲ್ಲಿ ದೇವರೇ ನನ್ನನ್ನು ಅಲ್ಲಿಂದ ಕರೆದುಕೊಂಡು ಬಂದಿದ್ದಾರೆ ಎಂದು ಅನಿಸುತ್ತದೆ. ದೇವರ ಕೃಪೆಯಿಂದ ನಾನು ವಾಪಸ್ ಬಂದಿದ್ದೇನೆ. ಮನುಷ್ಯ ಮಾತ್ರರಿಂದ ಈ ಕೆಲಸ ಆಗಲು ಸಾಧ್ಯವಿಲ್ಲ. ಅಫ್ಘಾನ್ ಜನಕ್ಕೆ ಆ ದಿನದ ಯೋಚನೆ ಮಾತ್ರ. ಭವಿಷ್ಯದ ಬಗ್ಗೆ ನಾಳಿನ ಬಗ್ಗೆ ಯಾರೂ ಯೋಚನೆ ಮಾಡುವುದಿಲ್ಲ. ಇಂದಿನ ದಿನ ಬದುಕಿದರೆ, ಈ ದಿನ ಚೆನ್ನಾಗಿ ಹೋದರೆ ಆಯ್ತು ಎಂದು ಜೀವನ ಮಾಡುತ್ತಾರೆ. ನಾಳಿನ ಬಗ್ಗೆ ಆಲೋಚನೆಗಳೇ ಅಲ್ಲಿನ ಜನಕ್ಕೆ ಇರುವುದಿಲ್ಲ ಎಂದು ಅಲ್ಲಿನ ಮಾಹಿತಿ ನೀಡಿದರು. ಇದನ್ನೂ ಓದಿ: ತಾಲಿಬಾನಿಗಳನ್ನ RSS, ಬಜರಂಗದಳಕ್ಕೆ ಹೋಲಿಸಿದ ಕವಿ ಮುನ್ವರ್ ರಾಣಾ

ಅಫ್ಘನ್ನರಿಗೆ ಭಾರತದಲ್ಲೇ ಚಿಕಿತ್ಸೆ:
ಕಾಬೂಲ್ ಪಟ್ಟಣದಲ್ಲಿ ವಾರಕ್ಕೆ ಎರಡು-ಮೂರು ಬಾರಿ ಬಾಂಬ್ ಸ್ಫೋಟಗಳು ಆಗುತ್ತಿರುತ್ತವೆ. ಅಫ್ಘಾನಿಸ್ತಾನದಲ್ಲಿ ಭಾರತೀಯರಿಗೆ ಬಹಳ ಗೌರವ ಇದೆ. ಅಫ್ಘಾನಿಸ್ತಾನ ದೇಶಕ್ಕೆ ಭಾರತ ದೇಶದಿಂದ ಬಹಳ ಸಹಾಯಗಳು ಆಗಿದೆ. ಆ ಕೃತಜ್ಞತಾಭಾವ ಅವರಲ್ಲಿದೆ. ಭಾರತದ ಔಷಧ ಅಫ್ಘಾನಿಸ್ತಾನಕ್ಕೆ ಸದಾ ರವಾನೆಯಾಗುತ್ತದೆ. ಗಂಭೀರ ಆರೋಗ್ಯ ಪರಿಸ್ಥಿತಿಗಳು ಉಂಟಾದ ಸಂದರ್ಭದಲ್ಲಿ ಅಫ್ಘಾನಿಸ್ತಾನದಿಂದ ಡೆಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಾರೆ. ದೆಹಲಿಯ ಲಜಪತ್ ನಗರದಲ್ಲಿ ಅಪಘಾನಿಸ್ತಾನದವರೇ ಹೆಚ್ಚು ವಾಸಿಸುತ್ತಿದ್ದಾರೆ. ಅಲ್ಲಿ ಆಸ್ಪತ್ರೆಯಿಲ್ಲ, ಸರಿಯಾದ ಚಿಕಿತ್ಸೆಗಳು ಸಿಗುವುದಿಲ್ಲ. ಅಮೆರಿಕ ಅಲ್ಲಿ 20 ವರ್ಷದ ಕಾಂಟ್ರ್ಯಾಕ್ಟರ್ ಇಟ್ಟುಕೊಂಡಿತ್ತು. ವಾಪಸ್ ಯಾಕೆ ಹೋದರು ಎಂಬ ಬಗ್ಗೆ ನಮಗೆ ಮಾಹಿತಿಯಿಲ್ಲ ಎಂದು ಅಲ್ಲಿನ ಸ್ಥಿತಿಯನ್ನು ವಿವರಿಸಿದರು.

ಅಫ್ಘಾನಿಸ್ತಾನದಲ್ಲಿ ಮಿಲಿಟರಿಗೆ, ಸ್ಪೆಷಲ್ ಕೋರ್ಸ್‍ಗಳಿಗೆ 20 ವರ್ಷಗಳ ಕಾಲ ಅಮೆರಿಕ ಟ್ರೈನಿಂಗ್ ಕೊಟ್ಟಿತ್ತು. ಎಲ್ಲಾ ವ್ಯರ್ಥ ಆಗಿದೆ. ಅಮೆರಿಕ 20 ವರ್ಷಗಳಿಂದ ಅಘ್ಘಾನಿಸ್ತಾನಕ್ಕೆ ಮಾಡಿದ ಎಲ್ಲಾ ಸವಲತ್ತುಗಳನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡಿದ್ದಾರೆ. ಇನ್ನೂ ಒಂದೆರಡು ತಿಂಗಳಿನಲ್ಲಿ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತದೆ ಎಂದು ನನ್ನ ಕಂಪನಿ ಮಾಲೀಕರು ಹೇಳಿದ್ದಾರೆ. ನನ್ನನ್ನು ಮತ್ತೆ ಕೆಲಸಕ್ಕೆ ಬರುವಂತೆ ಹೇಳಿದ್ದಾರೆ. ಆದರೆ ಹೋಗುವ ಬಗ್ಗೆ ಅಥವಾ ಇಲ್ಲೇ ಇರುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಅಭಿಪ್ರಾಯ ಹಂಚಿಕೊಂಡರು. ಇದನ್ನೂ ಓದಿ: ಪ್ರಾಣಿಗಳನ್ನು ತುಂಬಿಕೊಂಡಂತೆ 800 ಜನ ಒಂದೇ ವಿಮಾನದಲ್ಲಿ ಭಾರತಕ್ಕೆ ಬಂದಿಲ್ಲ

Share This Article
Leave a Comment

Leave a Reply

Your email address will not be published. Required fields are marked *