LatestMain PostNational

ತಾಲಿಬಾನಿಗಳನ್ನ RSS, ಬಜರಂಗದಳಕ್ಕೆ ಹೋಲಿಸಿದ ಕವಿ ಮುನ್ವರ್ ರಾಣಾ

ನವದೆಹಲಿ: ತಾಲಿಬಾನಿಗಳನ್ನು ಆರ್‍ಎಸ್‍ಎಸ್ ಮತ್ತು ಬಜರಂಗದಳಕ್ಕೆ ಹೋಲಿಕೆ ಮಾಡಿ ಕವಿ ಮುನ್ವರ್ ರಾಣಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅಫ್ಘಾನಿಸ್ತಾನಕ್ಕಿಂತ ಭಾರತದಲ್ಲಿಯೇ ಹೆಚ್ಚು ಕ್ರೂರತೆ ಇದೆ. ತಾಲಿಬಾನಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿರುವ ವಿಚಾರ ಅಫ್ಘಾನಿಸ್ತಾನದ ಆಂತರಿಕ ವಿಚಾರ. ತಾಲಿಬಾನಿ ಅಥವಾ ಅಫ್ಘಾನಿಗಳು ಯಾರೇ ಇರಲಿ, ಅವರೆಲ್ಲರೂ ಒಂದೇ. ಅದೇ ರೀತಿಯಲ್ಲಿ ಭಾರತದಲ್ಲಿಯ ಬಿಜೆಪಿ, ಆರ್‍ಎಸ್‍ಎಸ್ ಮತ್ತು ಬಜರಂಗದಳ ಸಹ ಒಂದೇ ಆಗಿವೆ. ಸಾವಿರ ವರ್ಷಗಳ ಇತಿಹಾಸದ ಪುಟಗಳನ್ನ ತೆಗೆದುನೋಡಿದ್ರೆ ಅಫ್ಘಾನಿಗಳು ಹಿಂದೂಸ್ತಾನಕ್ಕೆ ಎಂದೂ ದ್ರೋಹ ಮಾಡಿಲ್ಲ ಎಂದು ಹೇಳಿದ್ದಾರೆ.

ಅಫ್ಘಾನಿಸ್ತಾನದ ವಿಷಯವನ್ನು ಭಾರತದಲ್ಲಿ ಚರ್ಚೆ ನಡೆಸುವ ಅವಶ್ಯಕತೆ ಇಲ್ಲ. ಮುಂದೊಂದು ದಿನ ತಾಲಿಬಾನಿಗಳ ಹಿಂದೂಸ್ತಾನದ ಸಹಾಯ ಕೇಳುತ್ತಾರೆ ಮತ್ತು ಭಾರತ ಅವರಿಗೆ ನೆರವು ನೀಡುವ ಸಮಯ ಬರಲಿದೆ. ಭಾರತದ ಮಾಫಿಯಾ ಬಳಿ ತಾಲಿಬಾನಿಗಳಿಗಿಂತ ಹೆಚ್ಚಿನ ಶಸ್ತ್ರಾಸ್ತ್ರಗಳಿವೆ. ತಾಲಿಬಾನಿಗಳು ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡ್ರೆ, ನಮ್ಮಲ್ಲಿ ಮಾಫಿಯಾಗಳನ್ನ ಖರೀದಿಸಲಾಗುತ್ತದೆ ಎಂದಿದ್ದಾರೆ.

ಔರಂಗಜೇಬ್ ಆಡಳಿತಾವಧಿಯಲ್ಲಿ ಭಾರತ ಅಫ್ಘಾನಿಸ್ತಾನದ ಭಾಗವಾಗಿತ್ತು. ಇಂದು ಮೊಘಲ್ ಚಕ್ರವರ್ತಿಗಳಿದಿದ್ರೆ ಭಾರತ ಸಹ ಅಫ್ಘಾನಿಸ್ತಾನದ ಭಾಗವಾಗಿರುತ್ತಿತ್ತು. ಬ್ರಿಟಿಷರ ಆಳ್ವಿಕೆ ಬಂದಾಗ ಅಫ್ಘಾನರು ಅವರನ್ನ ಮರಕ್ಕೆ ನೇತು ಹಾಕಲು ಆರಂಭಿಸಿದರು. ಹಾಗಾಗಿ ಭಾರತ ಮತ್ತು ಅಫ್ಘಾನಿಸ್ತಾನವನ್ನು ಇಬ್ಭಾಗ ಮಾಡಲಾಯ್ತು.

ಮೋದಿ ಸರ್ಕಾರ ಅಫ್ಘಾನಿಸ್ತಾನದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಸಂಸತ್ ಭವನ, ರಸ್ತೆ ನಿರ್ಮಿಸಿರೋದನ್ನು ಯಾರೂ ಅಲ್ಲಗಳೆಯುತ್ತಿಲ್ಲ. ತಾಲಿಬಾನಿ ಅಥವಾ ಇನ್ನಾರೇ ಬರಲಿ ಭಾರತದಿಂದ ಅಫ್ಘಾನಿಸ್ತಾನಕ್ಕೆ ಒಳ್ಳೆಯದು ಆಗಿದೆಯೇ ಹೊರತು ಕೆಟ್ಟದ್ದು ಆಗಿಲ್ಲ ಎಂಬ ವಿಷಯವನ್ನು ಅಫ್ಘನ್ನರು ಒಪ್ಪಿಕೊಳ್ಳಬೇಕು ಎಂದು ಮೋದಿ ಸರ್ಕಾರದ ಕೆಲಸಗಳಿಗೆ ಮೆಚ್ಚುಗೆ ಸೂಚಿಸಿದರು.  ಇದನ್ನೂ ಓದಿ: ಮಹಿಳೆಯರು ಕೆಲಸ ಮಾಡಬಹುದು, ಮುಸ್ಲಿಂ ಕಾನೂನುಗಳ ವ್ಯಾಪ್ತಿಯಲ್ಲಷ್ಟೇ: ತಾಲಿಬಾನ್

ತಾಲಿಬಾನಿಗಳು ಸ್ವಾತಂತ್ರ್ಯ ಸೇನಾನಿ ಅಂದ ಮುಖಂಡ:
ತಾಲಿಬಾನಿಗಳ ಬಗ್ಗೆ ಮೊದಲಿಗೆ ಸಮಾಜವಾದಿ ಪಕ್ಷದ ಸಂಸದ ಶಫಿಕುರ್ ರಹಮಾನ್ ಬರ್ಖ್ ಒಲವು ವ್ಯಕ್ತಪಡಿಸಿದ್ದಾರೆ. ತಾಲಿಬಾನಿಗಳನ್ನು ಸ್ವಾತಂತ್ರ್ಯ ಸೇನಾನಿಗಳು ಅಂದಿದ್ದಾರೆ. ಬ್ರಿಟಿಷ್ ಆಡಳಿತದಲ್ಲಿ ಭಾರತೀಯರು ಕೂಡ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ಅದೇ ರೀತಿ ತಾಲಿಬಾನಿಗಳು ಅಫ್ಘಾನಿಸ್ತಾನದ ಸ್ವಾತಂತ್ರ್ಯಕ್ಕೆ ಹೋರಾಡಿದ್ದಾರೆ ಎಂದು ಹೇಳಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ತಾಲಿಬಾನ್ ಉಗ್ರರ ಸರ್ಕಾರಕ್ಕೆ ಪಾಕಿಸ್ತಾನ, ಚೀನಾ, ಇರಾನ್ ಬೆಂಬಲ

ತಾಲಿಬಾನಿಗಳನ್ನು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿರೋ ಉತ್ತರ ಪ್ರದೇಶದ ಸಂಭಾಲ್ ಕ್ಷೇತ್ರದ ಎಂಪಿ ಬರ್ಖ್ ವಿರುದ್ಧ ದೇಶದ್ರೋಹ ಕೇಸ್ ದಾಖಲಾಗಿದೆ. ಎರಡನೇಯದಾಗಿ ಎಂಐಎಂ ಅಧ್ಯಕ್ಷ ಸಂಸದ ಅಸಾದುದ್ದೀನ್ ಓವೈಸಿ ಕೂಡ ತಾಲಿಬಾನಿ ಪ್ರೇಮ ಮೆರೆದಿದ್ದಾರೆ. ಭಾರತ ಅಫ್ಘಾನ್‍ನಲ್ಲಿ ಭಾರೀ ಹೂಡಿಕೆ ಮಾಡಿದೆ. ಭಾರತದ ಹೂಡಿಕೆ ವ್ಯರ್ಥವಾಗಬಾರದು. ತಾಲಿಬಾನ್ ಜೊತೆಗೆ ಭಾರತ ಔಪಚಾರಿಕ ಅಥವಾ ಅನೌಪಚಾರಿಕ ಚರ್ಚೆ ನಡೆಸಲಿ. ಭಾರತದ ಬಗ್ಗೆ ತಾಲಿಬಾನಿಗಳಿಗೆ ಉತ್ತಮ ಅಭಿಪ್ರಾಯ ಇದೆ ಎಮದು ತಿಳಿಸಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ – ಭಾರತಕ್ಕೆ ಇರುವ ಸವಾಲುಗಳೇನು?

ಮತ್ತೊಂದೆಡೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕೂಡ ತಾಲಿಬಾನ್‍ಗೆ ಕೊಂಡಾಡಿದೆ. ತಾಲಿಬಾನಿಗಳು ಅಹಿಂಸಾತ್ಮಕವಾಗಿ ಅಭೂತಪೂರ್ವವಾಗಿ ಅಧಿಕಾರ ಪಡೆದಿದ್ದಾರೆ ಅಂತ ಮೌಲಾನಾ ಸಜ್ಜದ್ ನೋಮಾನಿ ಹೇಳಿದ್ದಾರೆ. ಆದರೆ ಇದು ನೋಮಾನಿ ವೈಯಕ್ತಿಕ ಹೇಳಿಕೆ ಅಂತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಅಂತರ ಕಾಯ್ದುಕೊಂಡಿದೆ. ಇದನ್ನೂ ಓದಿ: ಪ್ರತಿಭಟನಾಕಾರರ ಮೇಲೆ ತಾಲಿಬಾನಿಗಳಿಂದ ಗುಂಡಿನ ದಾಳಿ

Leave a Reply

Your email address will not be published. Required fields are marked *

Back to top button