ಹೆಂಡತಿ, ಮಕ್ಕಳಿದ್ರೂ ಪರಸ್ತ್ರೀಯ ಹಿಂದೆ ಬಿದ್ದು ಆತ್ಮಹತ್ಯೆಗೆ ಶರಣಾದ ವಿವಾಹಿತ

Public TV
2 Min Read
CHIKKABALAPURA SUISIDE

ಚಿಕ್ಕಬಳ್ಳಾಪುರ: ಆತ ವಿವಾಹಿತ (Married Man). ಮುದ್ದಾದ ಹೆಂಡತಿ ಇಬ್ಬರು ಮಕ್ಕಳಿದ್ರೂ, ಮತ್ತೋರ್ವ ವಿವಾಹಿತೆಯ ಬೆನ್ನು ಬಿದ್ದಿದ್ದ. ಪ್ರೀತ್ಸೆ ಪ್ರೀತ್ಸೆ ಅಂತ ಆಕೆಯನ್ನು ಕಾಡತೊಡಗಿದ್ದ. ಆಕೆಯ ಹೆಸರನ್ನು ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದ. ಐ ಲವ್‍ ಯೂ ಅಂತ ಪ್ರತಿ ದಿನ ಮೆಸೇಜ್ ಮಾಡಿ ಕಾಡಿ ಬೇಡತೊಡಗಿದ್ದ ಆದ್ರೆ ಅದೆನಾಯ್ತೋ ಏನೋ ಈಗ ಆತ ತನ್ನ ತಾಯಿಯ ಮನೆಯಲ್ಲಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದು ಇದಕ್ಕೆಲ್ಲಾ ಆಕೆಯೇ ಕಾರಣ ಎನ್ನುವ ಆರೋಪ ಕೇಳಿಬಂದಿದೆ.

suicide

ಅಂದಹಾಗೆ ಆತ್ಮಹತ್ಯೆಗೆ ಶರಣಾಗಿರುವವನ ಹೆಸರು ನವೀನ್ (27), ಚಿಕ್ಕಬಳ್ಳಾಪುರ (Chikkaballapura) ನಗರದ ಕೋಟೆ ಬಡಾವಣೆಯ ನಿವಾಸಿ. ಈತನಿಗೆ ಮದುವೆಯಾಗಿ ಹೆಂಡತಿ, ಇಬ್ಬರು ಮುದ್ದಾದ ಹೆಣ್ಣು ಮಕ್ಕಳು ಇದ್ದಾರೆ. ಆದ್ರೆ ಇವನಿಗೆ ಅದ್ಯಾಕೋ ಏನೋ ಮತ್ತೊಬ್ಬನ ಪತ್ನಿ ದೀಪ ಮೇಲೆ ಲವ್. ಹೀಗಾಗಿ ಪ್ರತಿ ದಿನ ಅಕೆಯ ಹೆಸರನ್ನು ಕನವರಿಸ್ತಾ, ಆಕೆಯ ಹೆಸರನ್ನು ಎದೆ ಮೇಲೆ ಹಚ್ಚೆ ಸಹ ಹಾಕಿಸಿಕೊಂಡಿದ್ದ. ಆಕೆಯ ಮೊಬೈಲ್ ನಂಬರ್‌ಗೆ ಲವ್ ಯೂ ಅಂತ ಮೆಸೇಜ್ ಮಾಡ್ತಿದ್ದನಂತೆ. ಹೀಗೆ ಅಕೆಯ ಬೆನ್ನು ಬಿದ್ದು ಪ್ರೀತ್ಸೆ ಅಂತ ಕಾಡಿಬೇಡಿಕೊಳ್ತಿದ್ದ. ಆದ್ರೆ ಅದೇನಾಯ್ತೋ ಏನೋ ನವೀನ್ ತಾಯಿ ಪದ್ಮಾವತಮ್ಮ ಕಾಶಿ ಯಾತ್ರೆಗೆ ಹೋಗಿದ್ದು, ತಾಯಿ ದೇವರ ಸನ್ನಿಧಿಯಲ್ಲಿ ಇರುವಾಗಲೇ ಇತ್ತ ಮಗ, ತಾಯಿ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ಇದ್ರಿಂದ ಇದಕ್ಕೆಲ್ಲ ಆಕೆಯೇ ಕಾರಣ ಅನ್ನೋದು ನವೀನ್ ತಾಯಿ ಪದ್ಮಾವತಮ್ಮ ಹಾಗೂ ನವೀನ್ ಪತ್ನಿ ಸುಪ್ರಿಯಾ ಆರೋಪವಾಗಿದೆ. ಇದನ್ನೂ ಓದಿ: ಅತಿಥಿ ಶಿಕ್ಷಕನ ಅಟ್ಟಹಾಸಕ್ಕೆ ವಿದ್ಯಾರ್ಥಿ ಬಲಿ – ಪ್ರಶ್ನಿಸಲು ಹೋದ ಶಿಕ್ಷಕರ ಮೇಲೂ ಹಲ್ಲೆ

CHIKKABALAPURA SUISIDE.

ನವೀನ್, ವಿವಾಹಿತೆಯ ಮೇಲೆ ಮೋಹಿತನಾಗಿದ್ದು, ಮೊದ ಮೊದಲು ಆಕೆ ಕೂಡ ನವೀನ್‍ನನ್ನು ನಿರಾಕರಿಸಿದ್ದಳಂತೆ. ನಂತರ ಆತನ ಬ್ಲಾಕ್‍ಮೇಲ್, ಹಿಂಸೆ, ಹುಚ್ಚು ಪ್ರೀತಿಗೆ ಮನಸೋತು ಆಗಾಗ ಲವ್ ಯೂ ಅಂತ ಮೆಸೇಜ್ ಮಾಡ್ತಿದ್ದಳಂತೆ, ಸ್ವತಃ ಆಕೆಯ ಗಂಡನ ಎದುರಲ್ಲೇ ನವೀನ್ ಆಗಮಿಸಿ, ಲವ್ ಮಾಡು ಲವ್ ಮಾಡು ಅಂತ ಕಾಡುತ್ತಿದ್ದ ಇದ್ರಿಂದ ಎರಡು ಕುಟುಂಬಗಳ ಮಧ್ಯೆ ಗಲಾಟೆ ನ್ಯಾಯ ಪಂಚಾಯಿತಿ ಸಹ ಆಗಿದೆಯಂತೆ. ಇತ್ತೀಚೆಗೆ ಆಕೆ. ನವೀನ್ ಕಾಟ ತಾಳಲಾರದೆ ಫೋನ್ ಬಳಸುವುದನ್ನೆ ಬಿಟ್ಟಿದ್ದಳಂತೆ, ಇದ್ರಿಂದ ನೊಂದು ನವೀನ್ ನೇಣು ಬಿಗಿದುಕೊಂಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಆದ್ರೆ ಮೃತನ ಸಂಬಂಧಿಗಳು ಇದಕ್ಕೆಲ್ಲಾ ಆಕೇಯೇ ಕಾರಣ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದ್ರೆ ಆಕೆ ಮಾತ್ರ ಅವನು ಸತ್ತು ಹೋದ್ರೆ ನಾನ್ ಏನ್ ಮಾಡಲಿ ನನಗೂ ಅದಕ್ಕೂ ಏನು ಸಂಬಂಧವಿಲ್ಲ ಅಂತಿದ್ದಾಳೆ. ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಅನುಮಾನಸ್ಪದ ಸಾವು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಮಧ್ಯರಾತ್ರಿ ಫೋನ್‍ನಲ್ಲಿ ಮಾತನಾಡಿದ್ದಕ್ಕೆ ಮಗಳನ್ನೇ ಕೊಂದ ತಂದೆ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *