ಬೆಂಗಳೂರು: ಸೌಜನ್ಯ ಪ್ರಕರಣದಲ್ಲಿ ಆಕೆಯ ತಂದೆ, ತಾಯಿ ಹಣ ಮಾಡಿಕೊಂಡಿದ್ದಾರೆ ಎಂದು ಹೈಕೋರ್ಟ್ (High Court) ವಕೀಲ ಅಮೃತೇಶ್ ಗಂಭೀರ ಆರೋಪ ಮಾಡಿದ್ದಾರೆ.
ಸೌಜನ್ಯ ಪ್ರಕರಣ (Sowjanya Case) ಸಂಬಂಧ ಸುದ್ದಿಗೋಷ್ಠಿ ನಡೆಸಿದ ಅವರು ಸುಪ್ರೀಂ ಕೋರ್ಟ್ (Supreme Court) ತೀರ್ಪಿಗೆ ಕಾರಣವಾದ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಪ್ರಕರಣದ ಮುಂದಿನ ತನಿಖೆ ಮತ್ತು ನ್ಯಾಯದ ನಿರೀಕ್ಷೆ ಬಗ್ಗೆ ಚರ್ಚೆ ನಡೆಸಿದ್ದಾರೆ ಹಾಗೂ ಪ್ರಕರಣದಲ್ಲಿ ಯರ‍್ಯಾರು ಎಷ್ಟು ಹಣ ಪಡೆದುಕೊಂಡರು ಎನ್ನುವ ಆಡಿಯೋ ರಿಲೀಸ್ ಮಾಡಿದ್ದಾರೆ. ಇದನ್ನೂ ಓದಿ: ಸೌಜನ್ಯ ಅತ್ಯಾಚಾರ & ಕೊಲೆ ಕೇಸ್; ತನಿಖಾಧಿಕಾರಿಯಾಗಿ ಓರ್ವ ಹಿರಿಯ IPS ಅಧಿಕಾರಿ ನೇಮಕ
ಇದೇ ವೇಳೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಸೌಜನ್ಯ ತಂದೆ, ತಾಯಿಯೇ ಹಣ ಮಾಡಿಕೊಂಡಿದ್ದಾರೆ. ಘಟನೆ ಆದ ಮೇಲೆ ನ್ಯಾಯಕ್ಕಾಗಿ ಬೇಡಿಕೆ ಇಟ್ಟರು. ಒಂದು ಪ್ರೆಸ್ ಮೀಟ್ ಮಾಡಿದ್ದರು. ಮೊದಲ ಪ್ರೆಸ್ ಮೀಟ್ ಆದ ಮೇಲೆ ಒಂದು ವರ್ಷ ಸುಮ್ಮನಿದ್ದರು. ಆನಂತರ ಒಂದು ವರ್ಷದ ಬಳಿಕ ಎರಡನೇ ಪ್ರೆಸ್ ಮೀಟ್ ಮಾಡಿದ್ದರು. ಈ ನಡುವೆ ಒಂದು ವರ್ಷ ಯಾಕೆ ಸುಮ್ಮನಿದ್ರು? ಇದರ ನಡುವೆ ಏನೇನಾಯ್ತು ಅಂತ ಗೊತ್ತಾಗಬೇಕು ಅಲ್ವಾ? ಈ ಸಮಯದಲ್ಲೇ ಈಗಿನ ಮಹಾಪುರುಷ ಮಹೇಶ್ ತಿಮರೋಡಿ ಎಂಟ್ರಿ ಕೊಟ್ಟಿದ್ದು. ಯರ‍್ಯಾರು ಎಷ್ಟೆಷ್ಟು ದುಡ್ಡು ಮಾಡಿಕೊಂಡರು ಅನ್ನೋದು ಗೊತ್ತಾಗಬೇಕು ಅಲ್ವಾ ಎಂದು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಸೌಜನ್ಯ ಮಾವ ವಿಠ್ಠಲ ಗೌಡ ಹಣ ಖರ್ಚು ಮಾಡಿದ ವಿಚಾರವಾಗಿ ಆಡಿಯೋ ಬಿಡುಗಡೆ ಮಾಡಿದ್ದಾರೆ.
ಹಲವಾರು ವರ್ಷಗಳಿಂದ ಸೌಜನ್ಯ ಹೆಸರೇಳಿದ ಕೂಡಲೇ ಕುತೂಹಲ ಶುರುವಾಗುತ್ತೆ. ಕರ್ನಾಟಕ ರಾಜ್ಯ ಮಾತ್ರವಲ್ಲ, ದೇಶದಲ್ಲೇ ಕುತೂಹಲ ಮೂಡಿಸಿದ ಪ್ರಕರಣ. 14 ವರ್ಷಗಳ ನಂತರ ಧರ್ಮಸ್ಥಳ ಪೊಲೋಸರು ಮಿಸ್ಸಿಂಗ್ ಕಂಪ್ಲೈಂಟ್ ತೆಗೆದುಕೊಳ್ಳುತ್ತಾರೆ. ನಂತರ ರೇಪ್ ಆಂಡ್ ಮರ್ಡರ್ ಅಂತ ಎಫ್‌ಐಆರ್ ಆಗಿತ್ತು. ನಂತರ ಈ ಪ್ರಕರಣವನ್ನು ಸಿಐಡಿ, ಎಸ್‌ಐಟಿಗೆ ಕೊಡುತ್ತಾರೆ. ದೇವಾಲಯಗಳು, ಮಠ ಮಾನ್ಯಗಳನ್ನ ಟಾರ್ಗೆಟ್ ಮಾಡುವ ಒಂದು ಗುಂಪಿದೆ. ಆ ಗುಂಪು ಈ ರೇಪ್ ಮರ್ಡರ್ ಕೇಸ್‌ನಲ್ಲಿ ಕ್ಷೇತ್ರದವರ ಕೈವಾಡ ಎನ್ನುವ ಗುಲ್ಲೇಬ್ಬಿಸಿದ್ದರು ಎಂದು ಆರೋಪಿಸಿದ್ದಾರೆ.ಇದನ್ನೂ ಓದಿ: ಸೌಜನ್ಯ ಕೇಸ್: SITಯಿಂದ ನನ್ನ ಕೈಬಿಡಿ ಅಂತ ಎಎಸ್‌ಪಿ ಪತ್ರ
ಆರಂಭದಲ್ಲಿ ಸೌಜನ್ಯ ತಂದೆ, ತಾಯಿ ಧರ್ಮಸ್ಥಳದ ಪರವಾಗಿದ್ದರು. ಎಲ್ಲರೂ ಸಪೋರ್ಟ್ ಮಾಡಿದ್ದರು ಅಂತ ಹೇಳಿಕೆ ನೀಡಿದ್ದರು. ಆದರೆ ಧರ್ಮಸ್ಥಳದವರು ಯಾವುದೇ ಒತ್ತಡ ಮಾಡಿರಲಿಲ್ಲ. ರೇಪ್ ಆಂಡ್ ಮರ್ಡರ್ ಸ್ಥಳದಲ್ಲಿ ನಡೆದಿದ್ದ ಮಹಜರ್ ವೇಳೆಯೂ ಸಂತೋಷ್ ರಾವ್‌ನನ್ನು ಯಾವುದೇ ರೀತಿ ಬಲವಂತವಾಗಿ ಕರೆದುಕೊಂಡು ಹೋಗಿರಲಿಲ್ಲ. ಆಗ ಅವನು ಸಹಜ ಸ್ಥಿತಿಯಲ್ಲಿ ಇದ್ದ ಹಾಗೂ ಸ್ಥಳಕ್ಕೆ ಹೋಗಿ ಅವನೇ ಸಾಕ್ಷ್ಯ ವಸ್ತುಗಳನ್ನ ಎತ್ತಿಕೊಟ್ಟಿದ್ದ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸೌಜನ್ಯ ಕೊಲೆ ಕೇಸ್ – ಶಶಿಕುಮಾರ್ ನೇತೃತ್ವದಲ್ಲಿ ಎಸ್‌ಐಟಿ ರಚನೆ

