ಗದಗ: ಎಲ್.ಕೆ ಅಡ್ವಾಣಿಗೆ (LK Advani) ಭಾರತ ರತ್ನ (Bharat Ratna) ಪ್ರಶಸ್ತಿ ನೀಡಿದ್ದು ಸಂತೋಷ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು. ನಗರದ ಹೊಸ ಬಸ್ ನಿಲ್ದಾಣದಲ್ಲಿ ನೂತನ 50 ಬಸ್‌ಗಳ ಉದ್ಘಾಟನೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ (BJP) ಪಕ್ಷ ಈ ಮಟ್ಟಕ್ಕೆ ಬೆಳೆಯಲು ಅಡ್ವಾಣಿ ಸಹ ಕಾರಣ. ಅವರನ್ನು ಮೂಲೆಗುಂಪು ಮಾಡಿದ್ದರು. ಈಗಲಾದರೂ ಬಿಜೆಪಿಯವರಿಗೆ ಬುದ್ಧಿ ಬಂದು ಅವರಿಗೆ ಭಾರತ ರತ್ನ ಘೋಷಣೆ ಮಾಡಿದ್ದು ಸಂತೋಷ ಎಂದರು.
ಪ್ರಹ್ಲಾದ್ ಜೋಷಿ ಹಾಗೂ ಸಂತೋಷ್ ಅವರು ಸೇರಿ ಯಡಿಯೂರಪ್ಪಗೆ ಏನು ಮಾಡಿದ್ರು? ಯಡಿಯೂರಪ್ಪ ಅವರನ್ನು ಕೆಳಗೆ ಇಳಿಸಿದವರು ಯಾರು? ಇವರೆ ತಾನೇ ಇಳಿಸಿದ್ದು? ವಿಜಯೇಂದ್ರ ಏನು ಆಗಬಾರದು ಎಂದು ಮೊನ್ನೆಯೂ ಏನೋ ಪ್ರಯತ್ನ ಮಾಡಿದರು. ಆದರೂ ಏನು ನಡಿಯಲಿಲ್ಲ. ಚುನಾವಣೆ ಬಂತಲ್ವಾ, ಅದಕ್ಕೆ ಯಡಿಯೂರಪ್ಪ ಮುಖ ನೋಡಿ ಮತ ಹಾಕುತ್ತಾರೆ ಎಂದು ಸುಮ್ಮನಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಇದನ್ನೂ ಓದಿ: ಪಿತೂರಿಗೆ ಬಲಿಯಾಗಿ ನಾನು, ಪ್ರೀತಂ ವಿಷಕಂಠರಾಗಿದ್ದೇವೆ: ಸಿ.ಟಿ ರವಿ
Advertisement
Advertisement
ಇನ್ನು ದಕ್ಷಿಣ ಭಾರತ ಪ್ರತ್ಯೇಕ ಕೂಗು ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದ ಅವರು, ನಮ್ಮ ದೇಶದಲ್ಲಿ 560 ರಾಜ್ಯಗಳಿದ್ದವು. ಮೊದಲು ನಮ್ಮ ದೇಶನೇ ಇರಲಿಲ್ಲ. ಬ್ರಿಟಿಷರು ಆಳುವ ಸಂದರ್ಭದಲ್ಲಿ 560 ರಾಜ್ಯಗಳಿದ್ದವು. ಆಗ ಎಲ್ಲಾ ರಾಜ್ಯಗಳ ಭೂಪ್ರದೇಶ ಭಾರತ, ಇಂಡಿಯಾ ಎಂದು ಮಾಡಿದ್ದು ಕಾಂಗ್ರೆಸ್. ಸ್ವಾತಂತ್ರ‍್ಯ ಹೋರಾಟದಲ್ಲಿ ಕಾಂಗ್ರೆಸ್‌ನವರು (Congress) ಭಾಗವಹಿಸಿದ್ದರು. ಬಿಜೆಪಿ ಪೂರ್ವಜರು ವಿಹೆಚ್‌ಪಿ, ಆರ್‌ಎಸ್‌ಎಸ್ ನವರು ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ. ಅಖಂಡ ಭಾರತ ಕಟ್ಟಿದ್ದೇ ಕಾಂಗ್ರೆಸ್ ಪಕ್ಷ. ಭಾರತ ಒಡೆಯುವ ಪ್ರಶ್ನೆಯೇ ಇಲ್ಲ. ಡಿಕೆ ಸುರೇಶ್ (DK Suresh) ಆ ರೀತಿ ಹೇಳಬೇಕು ಅಂದರೆ ಅವರಿಗೆ ಎಷ್ಟು ಕೋಪ ಬಂದಿರಬಾರದು? ದಕ್ಷಿಣ ಭಾರತ ರಾಜ್ಯಗಳಿಗೆ ಎಷ್ಟು ಅನುದಾನ ಕೊಟ್ಟಿದ್ದಾರೆ? 2 ಲಕ್ಷ ಕೋಟಿ ಸಹ ಕೊಟ್ಟಿಲ್ಲ. ನಮ್ಮ ರಾಜ್ಯದಿಂದ ನಾಲ್ಕೂವರೆ ಲಕ್ಷ ಕೋಟಿ ಟ್ಯಾಕ್ಸ್ ಹೋಗುತ್ತೆ. ಅದರಲ್ಲಿ ನಮಗೆ ಕೊಡುವುದು ಕೇವಲ 50 ಸಾವಿರ ಕೋಟಿ ಮಾತ್ರ. ದೇಶ ಅಖಂಡವಾಗಿ ಇರಬೇಕು. ಆದರೆ ನಮಗೆ ಕೊಡುವಂತಹದ್ದು ಕೊಡಬೇಕಲ್ಲಾ? ನಮ್ಮ ರಾಜ್ಯಕ್ಕೆ ಅನುದಾನ ಕಡಿಮೆ ಕೊಡುತ್ತಿರುವುದರಿಂದ ಬಿಜೆಪಿಯವರಿಗೆ ಒಳಒಳಗೆ ಖುಷಿ. ರಾಜ್ಯದಲ್ಲಿ 123 ತಾಲೂಕು ಬರಗಾಲ ಎಂದು ಘೋಷಣೆ ಮಾಡಿದೆ. ಪ್ರಧಾನಿಗಳು ಬಿಡಿಗಾಸು ಸಹ ಕೊಟ್ಟಿಲ್ಲ. ಕೇಂದ್ರ ಸರ್ಕಾರದ ಗೈಡ್‌ಲೈನ್ಸ್ ಪ್ರಕಾರ ಒಂದು ರೂ. ಸಹ ಬಿಡುಗಡೆ ಮಾಡಿಲ್ಲ. ಇದು ಮಲತಾಯಿ ಧೋರಣೆ ಅಲ್ವಾ? ಈ ಕೋಪಕ್ಕೆ ಅವರು ಹೇಳಿದ್ದಾರೆ ಅಷ್ಟೇ ಎಂದು ಸಮಜಾಯಿಷಿ ಕೊಟ್ಟರು. ಇದನ್ನೂ ಓದಿ: ರಾಜ್ಯದ ಹಿತಕ್ಕಾಗಿ ಯಾವುದೇ ಹೋರಾಟಕ್ಕೂ ಸಿದ್ಧ: ಡಿಕೆ ಸುರೇಶ್
Advertisement
Advertisement
ಬರಗಾಲ ವಿಷಯಕ್ಕೆ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಕೇಂದ್ರ ಸರ್ಕಾರದ ಮಾರ್ಗದರ್ಶನ ಪ್ರಕಾರ ನಾವು ಬರಗಾಲ ಎಂದು ಘೋಷಣೆ ಮಾಡಿದ್ದೇವೆ. ನಾಲ್ಕೂವರೆ ಲಕ್ಷ ಕೋಟಿ ಹಣ ನಮ್ಮನ್ನು ಯಾಕೆ ಕೇಳುತ್ತಾರೆ? ನಾವು ಯಾಕೆ ಕೊಡಬೇಕು? ಕರ್ನಾಟಕ ರಾಜ್ಯಕ್ಕೆ ಹೆಚ್ಚೇನು ಕೊಡಬೇಕಿಲ್ಲ ಅನ್ನುವುದಾದರೆ ನಾವು ಏಕೆ ಕೊಡಬೇಕು? ನಾವು ಟ್ಯಾಕ್ಸ್ ಯಾಕೆ ಕೊಡಬೇಕು? ನಾವು ಪರಿಹಾರ ಕೊಡುತ್ತೇವೆ. ಆದರೆ ಕೇಂದ್ರದ ಕೊಡುಗೆ ಏನು ಎಂಬುದು ಮೊದಲು ಹೇಳಲಿ. ಬಿಜೆಪಿ ಅವರಿಗೆ ಬಾಯಿ ಇಲ್ಲ, ಫೆವಿಕಾಲ್ ಹಾಕಿಕೊಂಡಿದ್ದಾರೆ. ಯಡಿಯೂರಪ್ಪ, ವಿಜಯೇಂದ್ರ, ಬೊಮ್ಮಾಯಿ, ಪ್ರಹ್ಲಾದ್ ಜೋಷಿ ಇವರ ಕೊಡುಗೆ ಏನು? ರಾಜ್ಯಕ್ಕೆ ಬರ ಬಂದಿದೆ, ಹಣ ಕೊಡಿ ಎಂದು ಕೇಳುವ ತಾಕತ್ತು, ಧಮ್ಮು ಅವರಿಗಿಲ್ಲ. ಇಂಥವರನ್ನು ಕರ್ನಾಟಕದಿಂದ 25 ಜನ ಆಯ್ಕೆ ಮಾಡಿ ಕಳುಹಿಸಿದ್ದಾರೆ. ಎಲ್ಲಾ ದಂಡ ಎಂದರು. ಈ ವೇಳೆ ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ ಪಾಟೀಲ್ ಸೇರಿದಂತೆ ಪಕ್ಷದ ಅನೇಕ ಮುಖಂಡರು ಉಪಸ್ಥಿತರಿದ್ದರು. ಇದನ್ನೂ ಓದಿ: ಕೇಂದ್ರದಿಂದ ರಾಜ್ಯಕ್ಕೆ ನೀಡಿದ 20 ವರ್ಷದ ಅನುದಾನದ ಬಗ್ಗೆ ಶ್ವೇತಪತ್ರ ಹೊರಡಿಸಲಿ: ಆರ್.ಅಶೋಕ್