ನವದೆಹಲಿ: ಕೇಂದ್ರ ಸರ್ಕಾರ ಅದಾನಿಗೆ ಸಂಪೂರ್ಣ ಬೆಂಬಲ ಮಾಡುತ್ತಿದೆ ಎಂದು ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಆರೋಪಿಸಿದ್ದಾರೆ.
ಅದಾನಿ ವಿರುದ್ಧ ಯುಎಸ್ ಕೋರ್ಟ್‌ನಿಂದ ವಾರೆಂಟ್ ಜಾರಿ ವಿಚಾರವಾಗಿ ಮಾತನಾಡಿದ ಅವರು, ಗೌತಮ್ ಅದಾನಿಯನ್ನು (Gautham Adani) ಕೂಡಲೇ ಕೇಂದ್ರ ಸರ್ಕಾರ ಬಂಧನ ಮಾಡಬೇಕು. ಆದರೆ ಕೇಂದ್ರ ಸರ್ಕಾರ, ಪ್ರಧಾನಿ ಮೋದಿ, ಅಮಿತ್ ಶಾ ಅದಾನಿಯನ್ನ ರಕ್ಷಣೆ ಮಾಡುತ್ತಿದ್ದಾರೆ. ಈ ವಿಚಾರವನ್ನ ನಾವು ಸಂಸತ್ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ. ಅದಾನಿ ಕಾನೂನು ಬಾಹಿರ ಕೆಲಸ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಕೇಸ್‌ಲ್ಲಿ ಭಾಗಿಯಾಗಿದ್ದಾರೆ ಎಂದು ಅನೇಕ ವರ್ಷಗಳಿಂದ ಹೇಳುತ್ತಿದ್ದೇವೆ. ಇಷ್ಟೆಲ್ಲಾ ಇದ್ದರೂ ಮೋದಿ ಸ್ವಲ್ವವೂ ಬಗ್ಗೆ ಮಾತನಾಡಲ್ಲ. ಅಮಿತ್ ಶಾ ಕಡೆ ಇಡಿ ಇದೆ. ಸಿಬಿಐ ಇದೆ. ಯಾಕೆ ತನಿಖೆ ಮಾಡುತ್ತಿಲ್ಲ ಎಂದು ಗುಡುಗಿದರು.ಇದನ್ನೂ ಓದಿ: IND vs Aus Test| ವಿವಾದಾತ್ಮಕ ತೀರ್ಪಿಗೆ ರಾಹುಲ್ ಔಟ್
Advertisement
Advertisement
ಹಿಂಡೆನ್‌ಬರ್ಗ್ ಸಂಶೋಧನಾ ವರದಿ ಪ್ರಕಟಿಸಿದಾಗ ಇದೆಲ್ಲ ಸುಳ್ಳು ಅಂದರು. ಈಗ ವಿದೇಶದಲ್ಲಿ ಅಕ್ರಮದ ಬಗ್ಗೆ ಚರ್ಚೆ ಆಗುತ್ತಿದೆ. ನಮ್ಮ ದೇಶದ ಆಸ್ತಿಯನ್ನ ಅದಾನಿಗೆ ಕೊಡುತ್ತಿದ್ದಾರೆ. ಏರ್ಪೋರ್ಟ್, ಪೋರ್ಟ್, ಜಮೀನು ಸೇರಿ ಎಲ್ಲಾ ಅದಾನಿಗೆ ಕೊಡುತ್ತಿದ್ದಾರೆ. ಅವನು ನ್ಯಾಯವಾಗಿ ಮಾಡಿಕೊಂಡರೆ ಪರವಾಗಿಲ್ಲ. ಒಬ್ಬನಿಗೆ ಶ್ರೀಮಂತ ಮಾಡಲು ಹೀಗೆ ಅಕ್ರಮ ಮಾಡುತ್ತಿದ್ದಾರೆ. ಇದಕ್ಕಾಗಿ ಅದಾನಿ ಕೇಂದ್ರ ಸರ್ಕಾರಕ್ಕೆ, ಬಿಜೆಪಿಗೆ ಸಹಾಯ ಮಾಡುತ್ತಿದ್ದಾರೆ. ನಾವು ಯಾವತ್ತು ಟಾಟಾ, ಬಿರ್ಲಾ ಹೆಸರು ಹೇಳಿಲ್ಲ. ದಿಢೀರ್ ಕೋಟ್ಯಧಿಪತಿ ಆಗಬೇಕು, ಮಿಲಿಯನೇರ್, ಬಿಲಿಯನೇರ್ ಆಗಲು ಹೊರಟಿದ್ದಾರೆ. ಅಕ್ರಮದ ಬಗ್ಗೆ ತನಿಖೆ ಆಗಬೇಕು. ಅದಾನಿ ಬಂಧನ ಮಾಡಬೇಕು ಎಂದು ಆಗ್ರಹಿಸುತ್ತೇವೆ ಎಂದರು.
Advertisement
ಚುನಾವಣಾ ಫಲಿತಾಂಶ ವಿಚಾರವಾಗಿ ಮಾತನಾಡಿದ ಅವರು, ಮಹಾರಾಷ್ಟ್ರ, ಜಾರ್ಖಂಡ್ ಎರಡು ರಾಜ್ಯಗಳಲ್ಲಿ ಇಂಡಿಯಾ ಕೂಟ ಗೆಲ್ಲಲಿದೆ ಎರಡು ರಾಜ್ಯದಲ್ಲಿಯೂ ನಮಗೆ ನಿರೀಕ್ಷೆ ಇದೆ. ನಾವು ಉತ್ತಮವಾಗಿ ಕೆಲಸ ಮಾಡಿದ್ದೇವೆ. ನಾಳೆ ಫಲಿತಾಂಶದಲ್ಲಿ ನೋಡೋಣ. ಈಗ ನಾವು ಏನೇ ಹೇಳಿದರೂ ಅದೆಲ್ಲಾ ಊಹಾಪೋಹಗಳು ಆಗುತ್ತವೆ. ನಾನು ಅನೇಕ ಕಡೆ ಸಭೆ ಮಾಡಿದ್ದೇವೆ ಹಾಗೂ ಉತ್ತಮ ಕೆಲಸ ಮಾಡಿದ್ದೇವೆ. ಎರಡು ರಾಜ್ಯದಲ್ಲಿ ನಾವು ಗೆಲ್ಲುತ್ತೇವೆ ಎಂದು ಭರವಸೆ ಇಟ್ಟುಕೊಂಡಿದ್ದೇವೆ. ಕರ್ನಾಟಕದ್ದು ನಿಮಗೆಲ್ಲ ಗೊತ್ತಿದೆ ಬಿಡಿ ಎಂದು ಹೇಳಿದರು.ಇದನ್ನೂ ಓದಿ: BBK 11: ಕೊನೆಗೂ ಅನಾವರಣ ಆಯ್ತು ಶೋಭಾ ಶೆಟ್ಟಿ ಅಸಲಿ ಮುಖ