ನವದೆಹಲಿ: ಅದಾನಿ ಸಮೂಹದ (Adani Group) ಕಂಪನಿಯ ಬಗ್ಗೆ 2016 ರಿಂದ ಯಾವುದೇ ತನಿಖೆ ನಡೆಸಿಲ್ಲ ಎಂದು ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ (SEBI) ಸುಪ್ರೀಂ ಕೋರ್ಟ್‌ಗೆ (Supreme Court) ತಿಳಿಸಿದೆ.
ಅದಾನಿ ಕಂಪನಿಯ ಹಿಂಡೆನ್‌ಬರ್ಗ್ (Hindenburg) ಮಾಡಿದ ಆರೋಪದ ಬಗ್ಗೆ ತನಿಖೆ ನಡೆಸಲು 6 ತಿಂಗಳು ಕಾಲಾವಕಾಶ ನೀಡಬೇಕೆಂದು ಕೋರಿ ಸೆಬಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ಮುಖ್ಯ ನ್ಯಾ. ಡಿವೈ ಚಂದ್ರಚೂಡ್, ನ್ಯಾ. ಪಿಎಸ್ ನರಸಿಂಹ ಮತ್ತು ನಾ. ಜೆಬಿ ಪರ್ದಿವಾಲಾ ಪೀಠದಲ್ಲಿ ನಡೆಯಿತು.
ಸೋಮವಾರವೂ ಸೆಬಿ ತನ್ನ ತನಿಖೆಯನ್ನು ಪೂರ್ಣಗೊಳಿಸಲು ಸಮಯ ವಿಸ್ತರಣೆಯ ಅಗತ್ಯವಿದೆ ಎಂದು ಪುನರುಚ್ಚರಿಸಿತು. ಇದನ್ನೂ ಓದಿ: ಹಿಂಡೆನ್‌ಬರ್ಗ್ ಸಂಶೋಧನಾ ವರದಿ ಸುಳ್ಳು, ಆಧಾರ ರಹಿತ: ಮಾರಿಷಸ್ ಸಂಸತ್ತಿಗೆ ಸರ್ಕಾರ ಉತ್ತರ
ಈ ವೇಳೆ ಪೀಠ, ನಾವು ಈಗ 6 ತಿಂಗಳು ನೀಡಲು ಸಾಧ್ಯವಿಲ್ಲ. ಕೆಲಸದಲ್ಲಿ ಸ್ವಲ್ಪ ಎಚ್ಚರ ಅಗತ್ಯ. ಒಂದು ತಂಡವನ್ನು ರಚಿಸಿ ಕೆಲಸ ಮಾಡಿ. ನಾವು ಆಗಸ್ಟ್ ಮಧ್ಯದಲ್ಲಿ ಪ್ರಕರಣವನ್ನು ಪಟ್ಟಿ ಮಾಡಬಹುದುಎಂದು ಆದೇಶ ನೀಡಿತು.
ಶತಕೋಟ್ಯಧಿಪತಿ ಗೌತಮ್ ಅದಾನಿ ಸಮೂಹ ಮಾರಿಷಸ್ ಮೂಲದ ಶೆಲ್ ಕಂಪನಿಗಳನ್ನು ಬಳಸಿ ಸ್ಟಾಕ್ ಮಾರುಕಟ್ಟೆಯಲ್ಲಿ ಷೇರುಗಳ ಬೆಲೆಯನ್ನು ಕೃತಕವಾಗಿ ಹೆಚ್ಚಳ ಮಾಡಿದೆ ಎಂದು ಹಿಂಡೆನ್‌ಬರ್ಗ್ ಆರೋಪಿಸಿತ್ತು.
ತನಿಖೆ ಪೂರ್ಣಗೊಳಿಸಲು ಕಾಲವಕಾಶದ ಅಗತ್ಯವಿದೆ. ಇದುವರೆಗೂ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಹಾಗೂ ಇದುವರೆಗೂ ತಿಳಿದು ಬಂದ ಅಂಶಗಳನ್ನು ತಜ್ಞರ ಸಮಿತಿಯ ಗಮನಕ್ಕೆ ತರಲಾಗಿದೆ. ಅಲ್ಲದೆ ಹಿಂಡೆನ್‍ಬರ್ಗ್ ವರದಿಯಲ್ಲಿ ತಿಳಿಸಿರುವ 12 ಶಂಕಾಸ್ಪದ ವರ್ಗಾವಣೆಗಳ ಕುರಿತು ಆಳವಾದ ತನಿಖೆ ನಡೆಸಬೇಕಿದೆ. ಆ ವರ್ಗಾವಣೆಗಳ ಮಾಹಿತಿಗಳು ಜಟಿಲವಾಗಿವೆ. ಅಲ್ಲದೆ ಅಲ್ಲಿ ವಿವಿಧ ವರ್ಗಾವಣೆ ನಡೆದಿದೆ ಎಂದು ಸೆಬಿ ಅರ್ಜಿಯಲ್ಲಿ ಮನವಿ ಮಾಡಿತ್ತು.