Connect with us

Bengaluru City

ಸದ್ದಿಲ್ಲದೇ ಹಸಮಣೆ ಏರಲು ಸಿದ್ಧವಾದ ನಟಿ ತ್ರಿಷಾ!

Published

on

ಬೆಂಗಳೂರು: ಭಾರತೀಯ ಚಿತ್ರರಂಗದಲ್ಲಿ ನಾಯಕಿಯರು ಸದ್ದಿಲ್ಲದೇ ಹಸಮಣೆ ಏರುತ್ತಿದ್ದಾರೆ. ಈಗ ಈ ಲಿಸ್ಟ್ ಗೆ ಟಾಲಿವುಡ್ ನಟಿ ತ್ರಿಷಾ ಕೃಷ್ಣನ್ ಕೂಡ ಸೇರಿಕೊಳ್ಳುತ್ತಿದ್ದಾರೆ.

ಮೊನ್ನೆ ಮೊನ್ನೆಯಷ್ಟೆ ಸೋನಮ್ ಕಪೂರ್ ಮದುವೆಯಾದರು. ನಂತರ ದಿಢೀರ್ ಎಂದು ನೇಹಾ ದೂಪಿಯಾ ಕೂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟದ್ದರು. ಅದಕ್ಕೂ ಮೊದಲು ಶ್ರಿಯಾ ಸರಣ್ ಕೂಡ ಸಂಸಾರ ಜೀವನಕ್ಕೆ ಎಂಟ್ರಿ ಕೊಟ್ಟಿದ್ದರು.

ಕಳೆದ ನಾಲ್ಕು ವರ್ಷದ ಹಿಂದೆಯೇ ತ್ರಿಷಾ ಮದುವೆಯಾಗಬೇಕಿತ್ತು. ಅದ್ಧೂರಿ ನಿಶ್ಚಿತಾರ್ಥವಾಗಿದ್ದರೂ ಕೆಲವೇ ದಿನಗಳಲ್ಲಿ ಸಂಬಂಧ ಮುರಿದುಹೋಯಿತ್ತು. ಬಳಿಕ ತೆಲುಗು ಸ್ಟಾರ್ ರಾಣಾ ದಗ್ಗುಬಾಟಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿತ್ತು. ಅದೇನೇ ಇದ್ದರೂ ಇಲ್ಲಿಯವರೆಗೆ ಸಿಂಗಲ್ ಆಗಿದ್ದ ತ್ರಿಷಾ ಇದೀಗ ಗುಪ್ತವಾಗಿ ಮದುವೆಗೆ ಸಜ್ಜಾಗುತ್ತಿದ್ದಾರೆ ಎಂಬ ಸುದ್ದಿ ಟಾಲಿವುಡ್‍ನಲ್ಲಿ ಕೇಳಿ ಬರುತ್ತಿದೆ.

ತ್ರಿಷಾ ಮದುವೆ ವಿಚಾರವನ್ನು ಗುಟ್ಟಾಗಿ ಇಡೋದಕ್ಕೆ ಕಾರಣವೂ ಇದೆ. ಹಿಂದೊಮ್ಮೆ ಬ್ಯುಸಿನಸ್‍ಮ್ಯಾನ್ ವರುಣ್ ಜೊತೆಗಿನ ಮದುವೆ ವಿಚಾರವನ್ನೇ ಬಚ್ಚಿಡದೇ ಹೇಳಿಕೊಂಡಿದ್ದರು. ಕೆಲವೇ ತಿಂಗಳಲ್ಲಿ ಮುರಿದು ಬಿದ್ದಾಗಲೂ ಧೈರ್ಯದಿಂದ ಮಾತನಾಡಿದ್ದರು. ಆದರೆ ಈ ಬಾರಿ ಮಾತ್ರ ಮದುವೆ ವಿಚಾರದಲ್ಲಿ ಸೀಕ್ರೆಟ್ ಮೇಂಟೈನ್ ಮಾಡುತ್ತಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ತ್ರಿಷಾ ಮದುವೆಯಾಗಲಿದ್ದು, ವಿದೇಶದಲ್ಲಿ ಆಭರಣ, ಬಟ್ಟೆ ಖರೀದಿ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.

ಮೂಲಗಳ ಪ್ರಕಾರ ಮದುವೆಯಾದ ಮೇಲೆ ತ್ರಿಷಾ ಅಭಿನಯಿಸುವುದಿಲ್ಲ. ಕೈಯಲ್ಲಿರುವ ಐದಾರು ಪ್ರಾಜೆಕ್ಟ್‍ಗಳನ್ನು ಸಹಿ ಹಾಕಿದ್ದು, ಬೇರೆ ಯಾವುದೇ ಯಾವುದೇ ಹೊಸ ಚಿತ್ರಕ್ಕೂ ಸಹಿ ಹಾಕಿಲ್ಲ.

ತ್ರಿಷಾ ಮದುವೆಯಾಗುತ್ತಿರೋ ಹುಡುಗ ಮುಂಬೈ ಮೂಲದ ಬುಸಿನಸ್‍ಮ್ಯಾನ್ ಆಗಿದ್ದು, ಮದುವೆಯ ಬಳಿಕ ಇಬ್ಬರೂ ವಿದೇಶದಲ್ಲಿ ಸೆಟಲ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಉದ್ಯಮದಲ್ಲಿ ಸದಾ ಬೇಡಿಕೆಯಲ್ಲಿದ್ದ ತ್ರಿಷಾ ಹಿಂದೊಮ್ಮೆ ವೈಯಕ್ತಿಕ ಜೀವನದಲ್ಲಿ ಎಡವಿದ್ದರು. ಈ ಬಾರಿ ಅತ್ಯಂತ ಕಾಳಜಿಯಿಂದ ವೈಯಕ್ತಿಕ ಜೀವನ ಸರಿದೂಗಿಸಿಕೊಂಡು ತಮ್ಮ ಸಿನಿಮಾ ಚಾರ್ಮ್ ಅದಕ್ಕೆ ತಟ್ಟದಂತೆ ನೋಡಿಕೊಳ್ಳುತ್ತಿದ್ದಾರೆ. ಅದೇನೇ ಇದ್ದರೂ ಶೀಘ್ರದಲ್ಲೇ ತ್ರಿಷಾ ರಿಯಲ್ ಮದುಮಗಳಾಗಿ ನಿಮ್ಮ ಮುಂದೆ ಕಾಣಿಸ್ಕೊಳ್ಳುವ ಸಮಯ ಕೂಡಿ ಬಂದಿದೆ.

Click to comment

Leave a Reply

Your email address will not be published. Required fields are marked *