ಬಹುಭಾಷಾ ನಟಿ ತಮನ್ನಾ ಭಾಟಿಯಾ (Tamannaah Bhatia) ಅವರು ಈಗೀಗ ಭಾರಿ ಸುದ್ದಿಯಲ್ಲಿದ್ದಾರೆ. ಅದರಲ್ಲೂ ‘ಜೀ ಕರ್ದಾ’, ‘ಲಸ್ಟ್ ಸ್ಟೋರಿಸ್ 2’ (Lust Stories 2) ಸಿನಿಮಾ ವಿಚಾರವಾಗಿ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಹಿಂದೆ ಕಿಸ್ಸಿಂಗ್ ಸೀನ್ಗೆ ನೋ ಎನ್ನುತ್ತಿದ್ದ ಹುಡುಗಿ ಈಗ ಬಾಲಿವುಡ್ನಲ್ಲಿ ತಮನ್ನಾ ತುಂಬಾನೇ ಬೋಲ್ಡ್ ಆಗಿ ನಟಿಸುತ್ತಾ ಇರೋದು ಮಿಲ್ಕಿ ಬ್ಯೂಟಿ ಫ್ಯಾನ್ಸ್ಗೆ ಬೇಸರ ಮೂಡಿಸಿದೆ. ನಟಿಯ ವಿರುದ್ಧ ಫ್ಯಾನ್ಸ್ ಕಿಡಿಕಾರಿದ್ದಾರೆ.
Advertisement
‘ಕೆಜಿಎಫ್’ (KGF) ನಟಿ ತಮನ್ನಾ ಅವರು ದಕ್ಷಿಣದ ಸಿನಿಮಾಗಳಲ್ಲಿ ಉತ್ತಮ ಪಾತ್ರಗಳ ಮೂಲಕ ಗಮನ ಸೆಳೆದಿದ್ದರು. ಆದರೆ ಬೋಲ್ಡ್, ಲಿಪ್ಲಾಕ್ ಸೀನ್ಗಳಲ್ಲಿ ಎಂದೂ ತಮನ್ನಾ ನಟಿಸಿರಲಿಲ್ಲ. ಆದರೆ ಇತ್ತೀಚಿನ ಬಾಲಿವುಡ್ನ ‘ಜೀ ಕರ್ದಾ’, ʼಲಸ್ಟ್ ಸ್ಟೋರಿಸ್ 2′, ಚಿತ್ರಗಳಲ್ಲಿ ತಮನ್ನಾ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅವರೇನಾ.? ಎಂದು ಅಭಿಮಾನಿಗಳು ಬಾಯಿ ಮೇಲೆ ಬೆರಳಿಡೋ ಹಾಗೇ ತಮನ್ನಾ ನಟಿಸಿ ಬಂದಿದ್ದಾರೆ. ಇದನ್ನೂ ಓದಿ:ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ : ಬಾಲಿವುಡ್ ನಟನಿಗೆ ಭದ್ರತೆ ಹೇಗಿದೆ?
Advertisement
Advertisement
ಕೆಲ ವರ್ಷಗಳ ಹಿಂದೆ ಬಂದ ‘ಲಸ್ಟ್ ಸ್ಟೋರಿಸ್’ ಸೀರಿಸ್ ಬೋಲ್ಡ್ ದೃಶ್ಯಗಳಿಂದಲೇ ಹೆಚ್ಚು ಸದ್ದು ಮಾಡಿತ್ತು. ಅದನ್ನೂ ಮೀರಿಸುವಂತೆ ಸೀಕ್ವೆಲ್ ಸೀರಿಸ್ ಬರುತ್ತಿದೆ. ಇನ್ನೂ ತಮನ್ನಾ, ಲವರ್ ವಿಜಯ್ ವರ್ಮಾ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇಷ್ಟು ದಿನ ಲಿಪ್ಲಾಕ್ (Lip Lock) ಸೀನ್ಗೆ ಒಲ್ಲೆ ಎಂದಿದ್ದ ಮಿಲ್ಕಿಬ್ಯೂಟಿ ಈ ಸೀರಿಸ್ನಲ್ಲಿ ತುಟಿಗೆ ತುಟಿ ಸೇರಿಸಿದ್ದಾರೆ. ಪ್ರಿಯಕರನ ಜೊತೆ ನಟಿಸಿರೋದ್ರಿಂದ ಕೊಂಚ ಹೆಚ್ಚೇ ಇಂಟಿಮೆಂಟ್ ಸೀನ್ಗಳಲ್ಲಿ ನಟಿಸಿದ್ದಾರೆ.
Advertisement
ನೀವು ಭಾರತೀಯ ಸಂಸ್ಕೃತಿ ನಾಶ ಮಾಡುತ್ತಿದ್ದೀರಾ ಎಂದು ಕಾಮೆಂಟ್ ಮಾಡಿದ್ದಾರೆ. ನಿನ್ನನ್ನು ಈ ರೀತಿ ನೋಡಲು ನಾಚಿಕೆ ಆಗುತ್ತಿದೆ ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದಾರೆ. ನೀವು ಸೀ ಗ್ರೇಡ್ ನಟನ ಜೊತೆ ಇಂತಹ ಸನ್ನಿವೇಶದಲ್ಲಿ ಹೇಗೆ ನಟಿಸ್ತೀರಾ? ತಮನ್ನಾ ದಯವಿಟ್ಟು ಬಾಲಿವುಡ್ (Bollywood) ಬಿಟ್ಟು ಕಾಲಿವುಡ್, ಟಾಲಿವುಡ್ಗೆ (Tollywood) ಬಂದುಬಿಡಿ ಎಂದು ನೆಟ್ಟಿಗರು ಸಲಹೆ ನೀಡುತ್ತಿದ್ದಾರೆ.
ಒಟ್ನಲ್ಲಿ ತಮನ್ನಾ- ವಿಜಯ್ ವರ್ಮಾ (Vijay Varma) ನಟನೆಯ ಲಸ್ಟ್ ಸ್ಟೋರಿಸ್ 2 ಜೂನ್ 29ಕ್ಕೆ ತೆರೆ ಬರೋದ್ದಕ್ಕೆ ಸಿದ್ಧವಾಗಿದೆ. ರಿಲೀಸ್ಗೂ ಮುನ್ನವೇ ಸಿನಿಮಾ ಸಾಕಷ್ಟು ಟೀಕೆಗೆ ಗುರಿಯಾಗಿದೆ. ತಮನ್ನಾ ಚಿತ್ರ ಸಕ್ಸಸ್ ಕಾಣುತ್ತಾ ಎಂದು ಕಾದುನೋಡಬೇಕಿದೆ.