ಬಿಟೌನ್ ಖ್ಯಾತನಟಿ ತಾಪ್ಸಿ ಪನ್ನು (Taapsee Pannu) ವಿರುದ್ಧ ಮಧ್ಯ ಪ್ರದೇಶದ ಇಂದೋರ್ ನಲ್ಲಿ ದೂರು ದಾಖಲಾಗಿದೆ. ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಬಿ.ಜೆಪಿ ಶಾಸಕಿ ಮಾಲಿನಿ ಗೌರ್ ಪುತ್ರ ಏಕಲವ್ಯ ಸಿಂಗ್ ಗೌರ್ (Eklavya Singh Gaur) ಅವರು ನಿನ್ನೆ ಇಂದೋರ್ ನಲ್ಲಿ ದೂರು (Complaint) ದಾಖಲಿಸಿದ್ದಾರೆ.
Advertisement
ನೇರ ನುಡಿ ಕಾರಣದಿಂದಾಗಿ ಆಗಾಗ್ಗೆ ವಿವಾದಕ್ಕೆ ಸಿಲುಕಿಕೊಳ್ಳುವ ತಾಪ್ಸಿ ಪನ್ನು ಈ ಬಾರಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎನ್ನುವ ಆರೋಪಕ್ಕೆ ತುತ್ತಾಗಿದ್ದಾರೆ. ಎದೆ ಸೀಳು ಕಾಣಿಸುವ ರೀತಿಯಲ್ಲಿ ಬಟ್ಟೆ ಧರಿಸಿರುವ ಅವರು ಆ ಬಟ್ಟೆಯ ಮೇಲೆ ಲಕ್ಷ್ಮೀ ಚಿತ್ರ ಇರುವ ನಕ್ಲೇಸ್ (Devi Necklace) ಧರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಇದನ್ನೂ ಓದಿ:ಅಂಬಿ ಸ್ಮಾರಕ ಲೋಕಾರ್ಪಣೆ, ಸುಮಲತಾ ಅಂಬರೀಶ್ ಕಣ್ಣೀರು
Advertisement
Advertisement
ಮುಂಬೈನಲ್ಲಿ ನಡೆದ ಫ್ಯಾಷನ್ ವೀಕ್ ನಲ್ಲಿ ಭಾಗಿಯಾಗಿದ್ದ ತಾಪ್ಸಿ, ರಾಂಪ್ ವಾಕ್ ಮಾಡಿದ್ದರು. ಕೆಂಪು ಬಣ್ಣದ ಗೌನ್ ಧರಿಸಿದ್ದ ಅವರು ಆ ಕಾಸ್ಟ್ಯೂಮ್ ನೊಂದಿಗೆ ಲಕ್ಷ್ಮಿ ಚಿತ್ರ ಇರುವ ನಕ್ಲೇಸ್ ಹಾಕಿಕೊಂಡಿದ್ದರು. ಈ ಫೋಟೋ ಸಾಕಷ್ಟು ಟ್ರೋಲ್ ಕೂಡ ಆಗಿತ್ತು. ನೆಟ್ಟಿಗರು ಕೂಡ ತರಾಟೆಗೆ ತಗೆದುಕೊಂಡಿದ್ದರು. ಅಶ್ಲೀಲ ಬಟ್ಟೆ ಜೊತೆ ಲಕ್ಷ್ಮೀ ಧರಿಸುವುದು ಶೋಭೆ ಅಲ್ಲಅಂತ ಕಾಮೆಂಟ್ ಕೂಡ ಮಾಡಿದ್ದರು.
Advertisement
ತಾಪ್ಸಿ ಪನ್ನು ಹಾಕಿದ್ದ ಬಟ್ಟೆಯನ್ನು ಕಂಡು ಹಲವರು ಗರಂ ಕೂಡ ಆಗಿದ್ದರು. ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಹಿಂದ್ ರಕ್ಷಕ್ ಸಂಘಟನೆಯ ಏಕಲವ್ಯ ಸಿಂಗ್ ಗೌರ ಮಾರ್ಚ್ 27ರಂದು ಇಂದೋರ್ ನಲ್ಲಿ ದೂರು ದಾಖಲಿಸುವ ಮೂಲಕ ಕಾನೂನು ಕ್ರಮಕ್ಕಾಗಿ ಆಗ್ರಹಿಸಿದ್ದಾರೆ.