ಕಣ್ಣು ಕುಕ್ಕುವಂತೆ ಪಡ್ಡೆಹುಡುಗರ ನಿದ್ದೆಗೆಡಿಸಿದ ಸೇಸಮ್ಮ ನಯಾ ಲುಕ್

Public TV
1 Min Read
sunny leone

ನೀಲಿ ತಾರೆಯಾಗಿ ಗುರುತಿಸಿಕೊಂಡಿದ್ದ ಸನ್ನಿ ಲಿಯೋನ್ (Sunny Leone) ಅವರು ಬಾಲಿವುಡ್ (Bollywood) ಸಿನಿಮಾ, ರಿಯಾಲಿಟಿ ಶೋ ಅಂತಾ ಸಿನಿಪರದೆಯಲ್ಲಿ ಮಿಂಚಿದ್ದರು. ಇದೀಗ ಪಡ್ಡೆಹುಡುಗರ ಮೋಹಕ ನಟಿ ಹಾಟ್ ಫೋಟೋಶೂಟ್ ಮೂಲಕ ಎಲ್ಲರ ಕಣ್ಣು ಕುಕ್ಕುವಂತೆ ಮಿಂಚ್ತಿದ್ದಾರೆ.

sunny leone 1ಪೋರ್ನ್ ಸ್ಟಾರ್ ಆಗಿ ಗಮನ ಸೆಳೆದ ಸನ್ನಿ ಇದೀಗ ಬಾಲಿವುಡ್‌ನ ಬೇಡಿಕೆಯ ನಟಿಮಣಿಯರಲ್ಲಿ ಒಬ್ಬರಾಗಿ ಸದ್ದು ಮಾಡ್ತಿದ್ದಾರೆ. ಹಿಂದಿ, ಸೌತ್ ಸಿನಿಮಾಗಳ ಜೊತೆ ಕನ್ನಡ ಚಿತ್ರಕ್ಕೂ ಕೂಡ ಮನ್ನಣೆ ಕೊಡ್ತಿದ್ದಾರೆ. ಕಳೆದ ವರ್ಷ ಕನ್ನಡದ ಡಿಂಗರ್ ಬಿಲ್ಲಿ ಎಂಬ ಹಾಡಿನಲ್ಲಿ ಮಸ್ತ್ ಆಗಿ ಡ್ಯಾನ್ಸ್ ಮಾಡಿ ಜನಮನ ಗೆದ್ದಿದ್ದರು. ಇದನ್ನೂ ಓದಿ:ಶಿವಣ್ಣ ಜೊತೆ ಅಜಯ್ ರಾವ್ : ಫಸ್ಟ್ ಲುಕ್ ರಿಲೀಸ್

sunny

ಸನ್ನಿ ಲಿಯೋನ್‌ಗೂ ಕನ್ನಡ ಸಿನಿಮಾಗೂ ನಂಟಿದೆ. ಕನ್ನಡ ಸಿನಿಮಾಗೆ ನಟಿ ಆದ್ಯತೆ ಕೊಡುತ್ತಾರೆ. ಪ್ರೇಮ್ ಅಡ್ಡಾದ ಡಿಕೆ (Dk) ಸಿನಿಮಾದಲ್ಲಿ ಸೇಸಮ್ಮಳಾಗಿ ಹೆಜ್ಜೆ ಹಾಕಿದ್ರು. ಬಳಿಕ ‘ಲವ್ ಯೂ ಆಲಿಯಾ’ ಚಿತ್ರದಲ್ಲಿ ಸೃಜನ್ ಲೋಕೇಶ್‌ಗೆ (Srujan Lokesh) ಜೊತೆ ಸನ್ನಿ ಸೊಂಟ ಬಳುಕಿದ್ದರು. ಬಳಿಕ ಚಾಂಪಿಯನ್ ಸಿನಿಮಾದಲ್ಲಿ ಡಿಂಗರ್ ಬಿಲ್ಲಿಯಾಗಿ ಬೇಬಿ ಡಾಲ್ ಕುಣಿದಿದ್ರು.

sunny 1

ಹೀರೋಯಿನ್, ಮಹಿಳಾ ಪ್ರಧಾನ ಸಿನಿಮಾ, ಐಟಂ ಡ್ಯಾನ್ಸ್ ಎಲ್ಲದ್ದಕ್ಕೂ ನಟಿ ಆಧ್ಯತೆ ಕೊಡುತ್ತಾ ಮುಂದೆ ಸಾಗುತ್ತಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್‌ಗಳ ಜೊತೆ ತೆರೆಹಂಚಿಕೊಂಡಿದ್ದಾರೆ.

ಇದೀಗ ಸನ್ನಿ ಲಿಯೋನ್ ಹೊಸ ಫೋಟೋಶೂಟ್‌ವೊಂದನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋ, ಇಂಟರ್‌ನೆಟ್ ಶೇಕ್ ಮಾಡ್ತಿದೆ. ಕಪ್ಪು ಬಣ್ಣದ ಉಡುಗೆಯಲ್ಲಿ ಸನ್ನಿ ಹಾಟ್ ಹಾಟ್ ಆಗಿ ಪೋಸ್ ಕೊಡುವ ಮೂಲಕ ಗಮನ ಸೆಳೆದಿದ್ದಾರೆ. ಸನ್ನಿ ನಯಾ ಲುಕ್‌ನಿಂದ ಇಂಟರ್‌ನೆಟ್ ಬೆಂಕಿ ಹಚ್ಚಿದ್ದಾರೆ.

Share This Article