ಕನ್ನಡದ ಬ್ಯೂಟಿ ಶ್ರೀಲೀಲಾ (Sreeleela) ಸದ್ಯ ತೆಲುಗು ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಮಾಡಿರುವ ಸಿನಿಮಾವೆಲ್ಲಾ ಸಕ್ಸಸ್ ಕಾಣದೇ ಇದ್ದರೂ ಶ್ರೀಲೀಲಾಗೆ ಭಾರೀ ಬೇಡಿಕೆ ಇದೆ. ಸದ್ಯ ಶ್ರೀಲೀಲಾ ಮದುವೆ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಚಿತ್ರರಂಗದ ದೊಡ್ಡ ಮನೆಗೆ ಸೊಸೆಯಾಗಿ ಹೋಗ್ತಾರಂತೆ ಶ್ರೀಲೀಲಾ. ಹೀಗಂತ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.
Advertisement
ಇತ್ತೀಚೆಗಷ್ಟೇ ಶ್ರೀಲೀಲಾ ತಾಯಿ ಖ್ಯಾತ ಜ್ಯೋತಿಷಿಯೊಬ್ಬರಿಗೆ ಜಾತಕ ತೋರಿಸಿದ್ದು, ನಿಮ್ಮ ಮಗಳು ಚಿತ್ರರಂಗದ ದೊಡ್ಡ ಮನೆತನದ ಸೊಸೆಯಾಗಲಿದ್ದಾರೆ ಎಂದು ಜ್ಯೋತಿಷಿ ಭವಿಷ್ಯ ಹೇಳಿದ್ದಾರೆ. ಸದ್ಯ ಈ ರೀತಿಯ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇದನ್ನೂ ಓದಿ:ವಯಸ್ಸಾಯ್ತು ಮದುವೆಯಾಗು ಎಂದವನಿಗೆ ಶಮಿತಾ ಶೆಟ್ಟಿ ಕ್ಲಾಸ್
Advertisement
Advertisement
ಕನ್ನಡದ ಕಿಸ್, ಭರಾಟೆ, ಬೈಟು ಲವ್ ಚಿತ್ರ ನಂತರ ಪೆಳ್ಳಿ ಸಂದಡಿ, ‘ಧಮಾಕಾ’ (Dhamaka) ಚಿತ್ರದ ಮೂಲಕ ಟಾಲಿವುಡ್ಗೆ ನಟಿ ಪರಿಚಿತರಾದರು. ಬಳಿಕ ತೆಲುಗಿನ ಸ್ಟಾರ್ ನಟರಿಗೆ ಶ್ರೀಲೀಲಾ ನಾಯಕಿಯಾದರು. ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣ (Rashmika Mandanna), ಕೃತಿ ಶೆಟ್ಟಿಗೆ ಠಕ್ಕರ್ ಕೊಟ್ಟು ಬಿಗ್ ಚಾನ್ಸ್ ಬಾಚಿಕೊಂಡರು.
Advertisement
ಇತ್ತೀಚೆಗೆ ಮಹೇಶ್ ಬಾಬು (Mahesh Babu) ಜೊತೆ ‘ಗುಂಟೂರು ಖಾರಂ’ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾಗೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅಲ್ಲದೇ ಕೆಲವು ದಿನಗಳ ಹಿಂದೆ ಬಾಲಕೃಷ್ಣ ಅಭಿನಯದ ‘ಭಗವಂತ ಕೇಸರಿ’ ಚಿತ್ರದಲ್ಲಿ ಶ್ರೀಲೀಲಾ ನಟಿಸಿದ್ದರು.