ಬಾಲಿವುಡ್ ನಟಿ ಶಮಿತಾ ಶೆಟ್ಟಿಗೆ (Shamitha Shetty) ಟ್ರೋಲಿಗರ (Troll) ಕಾಟ ಶುರುವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಶಮಿತಾಗೆ ವಯಸ್ಸಾಯ್ತು ಮದುವೆಯಾಗು ಎಂದ ನೆಟ್ಟಿಗನಿಗೆ ನಟಿ ಸಖತ್ ಆಗಿ ತಿರುಗೇಟು ನೀಡಿದ್ದಾರೆ. ಯಾವಾಗ ಮದುವೆ ಎಂದವನಿಗೆ ನಟಿ ಕುಟುಕಿದ್ದಾರೆ.
Advertisement
ಶಿಲ್ಪಾ ಶೆಟ್ಟಿ (Shilpa Shetty) ಸಹೋದರಿ ಶಮಿತಾ ಶೆಟ್ಟಿ 45 ವರ್ಷ ಆಗಿದ್ದರೂ ಇನ್ನೂ ಸಿಂಗಲ್. ಸದಾ ಒಂದಲ್ಲಾ ಒಂದು ಹಾಟ್ ಫೋಟೋಶೂಟ್ ಮೂಲಕ ನಟಿ ಸದ್ದು ಮಾಡುತ್ತಿರುತ್ತಾರೆ. ಟ್ರೋಲ್‌ಗಳನ್ನು ಹೇಗೆ ಎದುರಿಸಬೇಕು ಎಂದು ನಟಿಗೆ ಗೊತ್ತಿದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಕೆಣಕಿದವನಿಗೆ ನಟಿ ಕೊಟ್ಟಿರೋ ಉತ್ತರ ಫ್ಯಾನ್ಸ್ ಗಮನ ಸೆಳೆದಿದೆ.
Advertisement
ಮದುವೆಯಾಗು ವಯಸ್ಸಾಯ್ತು ಎಂದು ನೆಟ್ಟಿಗನೊಬ್ಬ ಶಮಿತಾಗೆ ಕೆಣಕಿದ್ದಾರೆ. ಅದಕ್ಕೆ ನಟಿ, ನಿಮಗೆ ಅಭಿನಂದನೆಗಳು. ಮಿಷನ್ ಯಶಸ್ವಿಯಾಗಿದೆ. ಮದುವೆಯಾಗುವುದು ನನ್ನ ಜೀವನದಲ್ಲಿ ನನ್ನ ಏಕೈಕ ಉದ್ದೇಶವಲ್ಲ. ನಾನು ಸ್ವತಂತ್ರವಾಗಿರುವುದಕ್ಕೆ ನನಗೆ ಖುಷಿಯಿದೆ ಎಂದಿದ್ದಾರೆ. ಇದನ್ನೂ ಓದಿ:ರಾಜಕೀಯ ಅಖಾಡಕ್ಕೆ ಮೆಗಾಸ್ಟಾರ್ ಮನೆ ಮಗಳು?
Advertisement
Advertisement
ನಿಮ್ಮ ಜೀವನದಲ್ಲಿ ನಿಮಗೆ ಬಹಳಷ್ಟು ಪಾಸಿಟಿವಿಟಿ ಸಿಗಲಿ ಎಂದು ಹಾರೈಸುತ್ತೇನೆ. ನೀವು ಇನ್ಮುಂದೆ ಬೇರೆ ಮಹಿಳೆಯರನ್ನು ಕೆಳಗೆ ಎಳೆಯಲು ಪ್ರಯತ್ನಿಸುವುದಿಲ್ಲ ಎಂದು ಭಾವಿಸುತ್ತೇನೆ ಎಂದು ನಟಿ ತಿರುಗೇಟು ನೀಡಿದ್ದಾರೆ. ನಟಿಯ ಬೋಲ್ಡ್ ಉತ್ತರಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಅಂದಹಾಗೆ, ಅಕ್ಕ ಶಿಲ್ಪಾ ಶೆಟ್ಟಿಯಂತೆ ಬಾಲಿವುಡ್‌ನಲ್ಲಿ ಶಮಿತಾ ಕೆರಿಯರ್‌ಗೆ ಬ್ರೇಕ್ ಸಿಗಲಿಲ್ಲ. ‘ಬಿಗ್ ಬಾಸ್ ಹಿಂದಿ ಸೀಸನ್ 15’ರಲ್ಲಿ (Bigg Boss Hindi 15) ಶಮಿತಾ ಹೈಲೆಟ್ ಆಗಿದ್ದರು. ಈ ಶೋನಿಂದ ಅಪಾರ ಅಭಿಮಾನಿಗಳನ್ನು ನಟಿ ಗಳಿಸಿದ್ದಾರೆ.