ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಬಿಗ್ ಬಾಸ್ ಶೋಗೆ (Bigg Boss Kannada 10) ತೆರೆ ಬಿದ್ದಿದೆ. ದೊಡ್ಮನೆಗೆ 7ನೇ ಸ್ಪರ್ಧಿಯಾಗಿ ಸಿರಿ (Siri) ಎಂಟ್ರಿ ಕೊಟ್ಟಿದ್ದಾರೆ.
ಬದುಕು, ಮದುಮಗಳು, ರಂಗೋಲಿ, ರಾಮಾಚಾರಿ (Ramachari) ಸೇರಿದಂತೆ ಹಲವು ಸೀರಿಯಲ್ ಮತ್ತು ಸಿನಿಮಾಗಳಲ್ಲಿ ನಟಿಸಿರುವ ನಟಿ ಸಿರಿ ಬಿಗ್ ಬಾಸ್ಗೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ:Bigg Boss Kannada : 6ನೇ ಸ್ಪರ್ಧಿಯಾಗಿ ಮನೆ ಪ್ರವೇಶ ಮಾಡಿದ ತೃತೀಯಲಿಂಗಿ ನೀತು
ಸ್ಪರ್ಧಿಗಳಾಗಿ ಪ್ರೇಕ್ಷಕರ ವೋಟ್ ಪಡೆದು ನಮ್ರತಾ ಗೌಡ, ಸ್ನೇಹಿತ್ ಗೌಡ, ವಿನಯ್ ಗೌಡ, ರ್ಯಾಪರ್ ಇಶಾನಿ, ಸಂತೋಷ್ ಕುಮಾರ್, ನೀತು ವನಜಾಕ್ಷಿ ಬಿಗ್ ಬಾಸ್ ಮನೆ ಸೇರಿದ್ದಾರೆ.
ವಿಶೇಷ ಅತಿಥಿಗಳಾಗಿ ಹಿರಿಯ ನಟಿ ಶ್ರುತಿ, ಪ್ರಥಮ್, ಚಂದನ್ ಶೆಟ್ಟಿ, ಮುಂಜು ಪಾವಗಡ ಭಾಗಿಯಾಗಿ ಕಿಚ್ಚನಿಗೆ ಸಾಥ್ ನೀಡಿದ್ದಾರೆ.