ಕೊಡವ ಶೈಲಿಯಲ್ಲಿ ಮಿಂಚಿದ ನಟಿ ಶುಭ್ರ ಅಯ್ಯಪ್ಪ- ವಿಶಾಲ್ ಜೋಡಿ

Public TV
1 Min Read
shubra

ಸ್ಯಾಂಡಲ್‌ವುಡ್ (Sandalwood) ಬ್ಯೂಟಿ ಶುಭ್ರ ಅಯ್ಯಪ್ಪ (Shubra Aiyappa) ಇತ್ತೀಚಿಗಷ್ಟೇ ಉದ್ಯಮಿ ವಿಶಾಲ್ (Vishal Sivappa) ಜೊತೆ ಹಸೆಮಣೆ ಏರಿದ್ದರು. ಈ ಬೆನ್ನಲ್ಲೇ ಕೊಡವ ಲುಕ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ನಟಿಯ ಲುಕ್ ಇದೀಗ ನೆಟ್ಟಿಗರ ಗಮನ ಸೆಳೆದಿದೆ.

ಸತತ ಆರು ವರ್ಷಗಳಿಂದ ಶುಭ್ರ ಮತ್ತು ವಿಶಾಲ್ ಶಿವಪ್ಪ ಡೇಟಿಂಗ್ ಮಾಡುತ್ತಿದ್ದರು. ಜನವರಿ 19ರಂದು ಗುರುಹಿರಿಯರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರಿದ್ದರು. ಕೂರ್ಗ್‌ನಲ್ಲಿ 150 ವರ್ಷದ ಹಳೆಯ ಮನೆ ʻದೊಡ್ಮನೆʼಯಲ್ಲಿ (Doddamane) ಅದ್ದೂರಿಯಾಗಿ ವಿವಾಹವಾಗಿದ್ದರು. ಕೊಡವ ಪದ್ಧತಿ ಪ್ರಕಾರ ಮದುವೆಯಾದರು. ಈಗ ಕೊಡವ ಲುಕ್‌ನಲ್ಲಿ ಶುಭ್ರ ಮತ್ತು ವಿಶಾಲ್ ಚೆಂದದ ಫೋಟೋಶೂಟ್‌ವೊಂದು ಮಾಡಿಸಿದ್ದಾರೆ. ಇದನ್ನೂ ಓದಿ: 10 ಸಾವಿರ ಗಂಟೆಗಳಲ್ಲಿ ರೆಡಿಯಾಯ್ತು ನಟಿ ಅಥಿಯಾ ಶೆಟ್ಟಿ ಧರಿಸಿದ್ದ ಲೆಹೆಂಗಾ

ನಟಿ ಶುಭ್ರ ಪಿಂಕ್ ಬಣ್ಣದ ಸೀರೆಯಲ್ಲಿ ಮಿರ ಮಿರ ಎಂದು ಮಿಂಚಿದ್ರೆ, ವರ ವಿಶಾಲ್ ಕೊಡವ ಲುಕ್‌ನಲ್ಲಿ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ಒಟ್ನಲ್ಲಿ ಈ ಜೋಡಿಯ ಫೋಟೋಶೂಟ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

ನವಜೋಡಿಗೆ ಚಿತ್ರರಂಗದ ಸ್ನೇಹಿತರಿಂದ, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *