ಬಾಲಿವುಡ್ ನಟಿ ಅಥಿಯಾ ಶೆಟ್ಟಿ (Athiya Shetty) ಮತ್ತು ಕ್ರಿಕೆಟಿಗ ಕೆ.ಎಲ್ ರಾಹುಲ್ (Rahul) (ಜ.23)ರಂದು ಅದ್ದೂರಿಯಾಗಿ ವಿವಾಹವಾದರು. ಸುನಿಲ್ ಶೆಟ್ಟಿ ಅವರ ಖಂಡಾಲ ಬಂಗಲೆಯಲ್ಲಿ ಈ ಜೋಡಿ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರೂ ಮದುವೆಯ ಸುಂದರ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇನ್ನೂ ಮದುವೆಯಲ್ಲಿ ಅಥಿಯಾ ಧರಿಸಿದ್ದ ಲೆಹೆಂಗಾ ಎಲ್ಲರ ಗಮನ ಸೆಳೆದಿದೆ. ಆದರೆ ಅಥಿಯಾಗಾಗಿ ಲೆಹೆಂಗಾ ತಯಾರಿಸಲು ತೆಗೆದುಕೊಂಡ ಸಮಯ ಕೇಳಿದ್ರೆ ನೀವು ಶಾಕ್ ಆಗುತ್ತೀರಾ. ಈ ಬಗ್ಗೆ ಅಥಿಯಾ ಅವರ ಡ್ರೆಸ್ ಡಿಸೈನರ್ ಅನಾಮಿಕಾ ಖನ್ನಾ (Anamika Khanna) ರಿವೀಲ್ ಮಾಡಿದ್ದಾರೆ.
View this post on Instagram
ನಟಿ ಅಥಿಯಾ ಶೆಟ್ಟಿ ಮದುವೆಯ ಫೋಟೋಗಳನ್ನು ಹಂಚಿಕೊಂಡು ʻನಿಮ್ಮ ಬೆಳಕಿನಲ್ಲಿ ನಾನು ಹೇಗೆ ಪ್ರೀತಿಸಬೇಕು ಎಂಬುದನ್ನ ನಾನು ಕಲಿತೆ’ ಎಂದು ಹೇಳಿದ್ದಾರೆ. ಇಂದು ನಮ್ಮ ಅತ್ಯಂತ ಪ್ರೀತಿಪಾತ್ರರ ಜೊತೆ, ನಮಗೆ ಅಪಾರ ಸಂತೋಷ ಎಲ್ಲವನ್ನೂ ನೀಡಿದ ಮನೆಯಲ್ಲಿ ನಾವು ಮದುವೆಯಾದೆವು. ಕೃತಜ್ಞತೆ ಮತ್ತು ಪ್ರೀತಿ ತುಂಬಿದ ಹೃದಯದಿಂದ, ಈ ಪ್ರಯಾಣದಲ್ಲಿ ನಾವು ನಿಮ್ಮ ಆಶೀರ್ವಾದವನ್ನು ಬಯಸುತ್ತೇವೆ ಎಂದು ಅಥಿಯಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಥಿಯಾ ಮತ್ತು ಕೆ.ಎಲ್ ರಾಹುಲ್ ಕುಟುಂಬದವರು ಮತ್ತು ಆತ್ಮಿಯರ ಸಮ್ಮುಖದಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಅಥಿಯಾ, ರಾಹುಲ್ ಮದುವೆಗೆ ಕೇವಲ 70 ಜನ ಅತಿಥಿಗಳಿಗೆ ಮಾತ್ರ ಆಹ್ವಾನ ನೀಡಿದ್ದರು. ಇದನ್ನೂ ಓದಿ: ವಿನಯ್ ರಾಜ್ಕುಮಾರ್ಗೆ ನಾಯಕಿಯಾದ `ವಿಕ್ರಮ್’ ನಟಿ ಸ್ವಾತಿಷ್ಟ ಕೃಷ್ಣನ್
ಮದುವೆಯಲ್ಲಿ ಅಥಿಯಾ ಪಿಂಕ್ ಬಣ್ಣದ ಗ್ರ್ಯಾಂಡ್ ಡ್ರೆಸ್ನಲ್ಲಿ ಮಿಂಚಿದ್ರೆ, ರಾಹುಲ್ ಬಿಳಿ ಬಣ್ಣದ ಶೆರ್ವಾನಿಯಲ್ಲಿ ಕಂಗೊಳಿಸಿದ್ದರು. ಅಥಿಯಾ ಧರಿಸಿದ್ದ ಲೆಹಂಗಾ ಮೇಲೆ ಹ್ಯಾಂಡ್ ಮೇಡ್ ವರ್ಕ್ ಮಾಡಿದ್ದು ವಿಶೇಷವಾಗಿದ್ದು. ಕೈಯಿಂದ ನೇಯ್ಗೆ ಮಾಡಲಾಗಿದ್ದು ಜರ್ದೋಜಿ ಮಚ್ಚು ಜಾಲಿ ವರ್ಕ್ ಅನ್ನು ರೇಶ್ಮೆಯಿಂದ ಮಾಡಿಸಲಾಗಿದೆ. ರೇಶ್ಮೆ ಆರ್ಗನ್ಜಾದಿಂದ ಮಾಡಿದ ದುಪಟ್ಟಾವನ್ನು ಧರಿಸಿದ್ದರು. ಈ ಸುಂದರ ಲೆಹೆಂಗಾವನ್ನು ಸೆಲೆಬ್ರಿಟಿ ಡಿಸೈನರ್ ಅನಾಮಿಕ ಖನ್ನಾ ಅವರು ಡಿಸೈನ್ ಮಾಡಿದ್ದಾರೆ. ಇನ್ನೂ ಈ ಲೆಹೆಂಗಾ ತಯಾರಿಸಲು ಕ್ರಮಿಸಿದ ಸಮಯ ಕೇಳಿದ್ರೆ ನೀವು ದಂಗಾಗುತ್ತೀರಾ.
ಅಥಿಯಾ ಧರಿಸಿದ್ದ ಲೆಹಂಗಾವನ್ನು ತಯಾರಿಸಲು ಬರೋಬ್ಬರಿ 10 ಸಾವಿರ ಗಂಟೆಗಳು ಬೇಕಾಯಿತು. ಅಂದರೆ 1 ವರ್ಷ 51 ದಿನಗಳು ಬೇಕಾಯಿತು ಎಂದು ಹೇಳಿದ್ದಾರೆ. ಇಷ್ಟು ಸುಂದರವಾಗಿ ಲೆಹಂಗಾ ತಯಾರಿಸಲು ಸ್ಫೂರ್ತಿಯೇ ಆಥಿಯಾ ಶೆಟ್ಟಿ ಎಂದು ಅನಾಮಿಕ ಖನ್ನಾ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ. ಅಥಿಯಾ ಸುಂದರ ಟೇಸ್ಟ್ ಹೊಂದಿರುವ ವ್ಯಕ್ತಿಯಾಗಿದ್ದು, ಹಾಗಾಗಿ ಅವರಿಗಾಗಿ ಸ್ಪೆಷಲ್ ಆಗಿ ಲೆಹಾಂಗಾ ತಯಾರಿಸಿದ್ದಾರೆ.
ಇನ್ನೂ ಮದುವೆಗೆ 70 ಅತಿಥಿಗಳಷ್ಟೇ ಭಾಗಿಯಾಗಿದ್ದ ಕಾರಣ, ಆರತಕ್ಷತೆಯನ್ನು ಅದ್ದೂರಿಯಾಗಿ ಮಾಡಲಾಗುತ್ತದೆ. ಐಪಿಎಲ್ ಮ್ಯಾಚ್ ಬಳಿಕ ಆರತಕ್ಷತೆಯನ್ನು ಚಿತ್ರರಂಗದ ಸ್ನೇಹಿತರಿಗೆ ಮತ್ತು ಆಪ್ತರಿಗಾಗಿ ನಿಗದಿಪಡಿಸಲಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k