ಬಿಗ್ ಬಾಸ್ ಮನೆಯ (Bigg Boss Kannada 10) ಆಟಕ್ಕೆ ತೆರೆಬಿದ್ದಿದೆ. ಈ ಬೆನ್ನಲ್ಲೇ ಕಿಚ್ಚನ ಜೊತೆಗಿ ಸಂಗೀತಾ ಶೃಂಗೇರಿ ಸ್ಪೆಷಲ್ ಫೋಟೋ ಶೇರ್ ಮಾಡಿ ವಿಶೇಷ ಸಾಲುಗಳನ್ನು ಬರೆದಿದ್ದಾರೆ. ‘ನಮ್ಮ ಬಿಗ್ ಬಾಸ್ ನೀವೇ’ ಎಂದು ಸಂಗೀತಾ(Sangeetha Sringeri) ಹಾಡಿಹೊಗಳಿದ್ದಾರೆ. ಇದನ್ನೂ ಓದಿ:‘ಡೊಳ್ಳು’ ನಂತರ ಮತ್ತೆ ಒಂದಾಯಿತು ರಾಷ್ಟ್ರ ಪ್ರಶಸ್ತಿ ವಿಜೇತ ಜೋಡಿ
ಬಿಗ್ ಬಾಸ್ ಕನ್ನಡ ಸೀಸನ್ 10ರ (Bigg Boss Kannada 10) ವಿನ್ನರ್ ಆಗಿ ಕಾರ್ತಿಕ್ ಮಹೇಶ್ (Karthik Mahesh) ಹೊರಹೊಮ್ಮಿದ್ದಾರೆ. 2ನೇ ರನ್ನರ್ ಅಪ್ ಆಗಿ ಸಂಗೀತಾ ಸ್ಥಾನ ಪಡೆದಿದ್ದಾರೆ. ಇದೀಗ ಕಿಚ್ಚನ ಬಗ್ಗೆ ವಿಶೇಷವಾಗಿ ಪೋಸ್ಟ್ ಶೇರ್ ಮಾಡಿದ್ದಾರೆ. ನಮ್ಮ ಕರುನಾಡ ‘ಅಭಿನಯ ಚಕ್ರವರ್ತಿ’, ನಮ್ಮೆಲ್ಲರ ಪ್ರೀತಿಯಾ ಕಿಚ್ಚನಿಗೆ ನಾನು ಎಂದೆಂದೂ ಆಭಾರಿ. ಮೊದಲನೇ ವಾರದಿಂದ ಕೊನೆಯ ದಿನದವರೆಗೂ ಬಹಳ ಸೂಕ್ಷ್ಮತೆಯಿಂದ, ಕಾಳಜಿಯಿಂದ ಕಂಡಿರಿ, ತಿದ್ದಿ ಸರಿ ದಾರಿ ತೋರಿದಿರಿ. ನಮ್ಮ ಬಿಗ್ ಬಾಸ್ ನೀವೇ ಎಂದು ನಟಿ ಬರೆದಿದ್ದಾರೆ.
ಕಷ್ಟಕರವಾದ ಬಿಗ್ ಬಾಸ್ ಜರ್ನಿಯನ್ನು ಅಡ್ವೆಂಚರ್ ಆಗಿ ಬದಲಾಯಿಸಿದ ಕಿಚ್ಚ ಅವರಿಗೆ ಧನ್ಯವಾದ. ನಿಮ್ಮ ನಿರೂಪಣೆ ಈ ಶೋವನ್ನು ಅದ್ಭುತವಾಗಿಸಿದೆ ಎಂದು ನಟಿ ಬರೆದಿದ್ದಾರೆ. ಫಿನಾಲೆ ದಿನ ಕಿಚ್ಚನ ಜೊತೆ ನಿಂತಿದ್ದ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಕೋಟಿ ಕೊಟ್ರು ಬಿಗ್ ಬಾಸ್‌ಗೆ ಹೋಗಲ್ಲ ಎಂದಿದ್ದ ನಟಿ ಆನಂತರ ಬಿಗ್ ಬಾಸ್ ಕನ್ನಡ 10ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಳ್ಳುವ ಮೂಲಕ ಸಂಗೀತಾ ಅಚ್ಚರಿ ಮೂಡಿಸಿದ್ದರು. ‘777 ಚಾರ್ಲಿ’ (777 Charlie Film) ಚಿತ್ರದ ಮೂಲಕ ಪ್ಯಾನ್ ಇಂಡಿಯಾ ನಟಿಯಾಗಿ ಗುರುತಿಸಿಕೊಂಡಿರುವ ಸಂಗೀತಾ ಬಿಗ್ ಬಾಸ್‌ನಿಂದ ಟಿವಿ ಪ್ರೇಕ್ಷಕರ ಮನಗೆದ್ದರು.