ಡೊಳ್ಳು ಬಾರಿಸಿದ ಪವನ್ ಒಡೆಯರ್ ಮತ್ತೊಂದು ಗೂಗ್ಲಿಗೆ ಸಜ್ಜಾಗಿದ್ದಾರೆ. ಅರ್ಥಾತ್ ಪವನ್ ಒಡೆಯರ್ (Pavan Wodeyar) ತಮ್ಮದೇ ಒಡೆಯರ್ ಮೂವೀಸ್ ಬ್ಯಾನರ್ ನಡಿಯಲ್ಲಿ ಚೊಚ್ಚಲ ಬಾರಿಗೆ ನಿರ್ಮಾಣದ ಮಾಡಿದ್ದ ಡೊಳ್ಳು ಎಲ್ಲೆಡೆ ಮಾರ್ಧನಿಸಿತ್ತು. ಪ್ರಶಸ್ತಿಗಳ ಬೇಟೆಯಾಡಿತ್ತು. ರಾಷ್ಟ್ರಪ್ರಶಸ್ತಿಯಿಂದ ಹಿಡಿದು ಹಲವಾರು ಅಂತರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡು ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿತ್ತು. ಕರ್ನಾಟಕದ ಜನಪದ ಕಲೆ ಡೊಳ್ಳುಗೆ ಕೈಗನ್ನಡಿ ಹಿಡಿದ್ದ ಈ ಚಿತ್ರಕ್ಕೆ ಸಾಗರ್ ಪುರಾಣಿಕ್ (Sagar Puranik) ಆಕ್ಷನ್ ಕಟ್ ಹೇಳಿದ್ದರು. 2021 ರಲ್ಲಿ ಬಿಡುಗಡೆಯಾದ ಡೊಳ್ಳು ಸಿನಿಮಾ ಸಂಪ್ರದಾಯವನ್ನು ಪುನರುಜ್ಜೀವನಗೊಳಸಿ, ಸಾಂಸ್ಕೃತಿಕ ವೈವಿಧ್ಯತೆಯ ಮೇಲೆ ಬೆಳಕು ಚೆಲ್ಲಿತ್ತು. ಈ ಚಿತ್ರದ ಬಗ್ಗೆ ಇಷ್ಟೆಲ್ಲಾ ವಿವರ ಹೇಳೋದಿಕ್ಕೆ ಕಾರಣ ಈ ಜೋಡಿ ಮತ್ತೆ ಒಂದಾಗುತ್ತಿದೆ.
Advertisement
ಡೊಳ್ಳು ಜೋಡಿ ಈಗ ಮತ್ತೊಂದು ಚಿತ್ರಕ್ಕಾಗಿ ಸಜ್ಜಾಗಿದೆ. ಒಡೆಯರ್ ಮೂವೀಸ್ ಬ್ಯಾನರ್ ಮೂರನೇ ಕಾಣಿಕೆಯಾಗಲಿರುವ ಈ ಚಿತ್ರವನ್ನು ಸಾಗರ್ ಪುರಾಣಿಕ್ ನಿರ್ದೇಶನ ಮಾಡಲಿದ್ದಾರೆ. ಇದೊಂದು ವಿಭಿನ್ನ ಪ್ರಯತ್ನದ ಸಿನಿಮಾ. ಉತ್ತರ ಕರ್ನಾಟಕದ ಕಥೆಯಾದ್ರೂ ಅದು ದೇಶ ಎಲ್ಲಾ ಸುತ್ತಲಿದೆ. ಇದೊಂದು ಹೊಸ ಬಗೆಯ ಕಮರ್ಷಿಯಲ್ ಸಿನಿಮಾ ಅಂತಾರೇ ನಿರ್ಮಾಪಕ ಪವನ್ ಒಡೆಯರ್..
Advertisement
Advertisement
ಅಪೇಕ್ಷಾ ಒಡೆಯರ್ ಮತ್ತು ಪವನ್ ಒಡೆಯರ್ ಹಣ ಹಾಕುತ್ತಿರುವ ಈ ಚಿತ್ರಕ್ಕೆ ಸ್ನೇಹಿತರಾದ ಅವಿನಾಶ್ ವಿ ರೈ ಮತ್ತು ಮೋಹನ್ ಲಾಲ್ ಮೆನನ್ ಸಹ ನಿರ್ಮಾಣವಿರಲಿದೆ. ಸದ್ಯ ಪ್ರೀ ಪ್ರೊಡಕ್ಷನ್ ಹಂತದಲ್ಲಿರುವ ಸಿನಿಮಾದ ಟೈಟಲ್ ಶೀಘ್ರದಲ್ಲೇ ರಿವೀಲ್ ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.
Advertisement
ಮತ್ತೊಂದೆಡೆ, ಪವನ್ ಒಡೆಯರ್ ತಮ್ಮ ಚೊಚ್ಚಲ ನಿರ್ದೇಶನದ ಮೂಲಕ ಬಾಲಿವುಡ್ಗೆ ಕಾಲಿಟ್ಟಿದ್ದಾರೆ. ಅವಸ್ಥಿ ವರ್ಸಸ್ ಅವಸ್ಥಿ ಚಿತ್ರದಲ್ಲಿ ಪರಂಬ್ರತ ಚಟರ್ಜಿ ನಟಿಸಿದ್ದಾರೆ ಮತ್ತು ಗೀತಾ ಬಾಸ್ರಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಕೋರ್ಟ್ ರೂಮ್ ಡ್ರಾಮ್ ಕಥೆ ಕೂಡ ಇದೆ. ಆದರೆ ಅದರ ಹೊರತಾಗಿ ಇಲ್ಲಿ ಬೇರೆ ಬೇರೆ ವಿಚಾರವೂ ಇದೆ ಎಂದು ಹೇಳುವ ಡೈರೆಕ್ಟರ್ ಪವನ್ ಒಡೆಯರ್ ಸದ್ಯ, ಚಿತ್ರದ ಪೊಸ್ಟ್ ಪ್ರೋಡಕ್ಷನ್ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಪವನ್ ಒಡೆಯರ್ ಈ ಸಿನಿಮಾ ಮೂಲಕ ಬಾಲಿವುಡ್ನಲ್ಲೂ ಹೊಸದೊಂದು ಅಲೆ ಎಬ್ಬಿಸೋ ಹಾಗೆ ಕಾಣುತ್ತಿದೆ. ಸಿನಿಮಾದಲ್ಲಿ ಅದ್ಭುತ ಕಥೆ ಕೂಡ ಇದ್ದು, ಅದ್ಭುತ ಕಲಾವಿದರ ಸಿನಿಮಾ ಇದಾಗಿದೆ.