ಕನ್ನಡದ ಕಿರಿಕ್ ನಟಿ ಸಂಯುಕ್ತಾ ಹೆಗ್ಡೆ (Samyuktha Hegde) ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಟ್ರಾವೆಲಿಂಗ್ ಇಷ್ಟ ಪಡೋ ಸಂಯುಕ್ತಾ ಈ ಬಾರಿ ಮಾಲ್ಡೀವ್ಸ್ಗೆ (Maldives) ಹಾರಿದ್ದಾರೆ. ಬಿಕಿನಿ ಫೋಟೋ ಹಂಚಿಕೊಳ್ಳುವ ಮೂಲಕ ಇಂಟರ್ನೆಟ್ ಬೆಂಕಿ ಹಚ್ಚಿದ್ದಾರೆ. ಇದನ್ನೂ ಓದಿ:ಸೆ.24ಕ್ಕೆ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ಮದುವೆ ಡೇಟ್ ಫಿಕ್ಸ್
ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಬಳಿಕ ಸಂಯುಕ್ತಾ ಹೆಗ್ಡೆ ಮಾಲ್ಡೀವ್ಸ್ ಡೇಸ್ ಎಂಜಾಯ್ ಮಾಡ್ತಿದ್ದಾರೆ. ಇತ್ತೀಚಿಗೆ ಸೋನು ಬಿಕಿನಿ ಧರಿಸಿ ಸುದ್ದಿಯಾಗಿದ್ದರು. ಅವರ ಬಿಕಿನಿ ಫೋಟೋಸ್ ಇಂಟರ್ನೆಟ್ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಈಗ ಕಿರಿಕ್ ನಟಿ ಸಂಯುಕ್ತಾ, ನಾನೇನು ಕಮ್ಮಿ ಎಂಬಂತೆ ಬಿಕಿನಿ ಅವತಾರದಲ್ಲಿ ಪಡ್ಡೆಹುಡುಗರಿಗೆ ದರ್ಶನ ಕೊಟ್ಟಿದ್ದಾರೆ. ಪಿಂಕ್ ಬಣ್ಣದ ಬಿಕಿನಿಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಬಿಕಿನಿ ಲುಕ್ನಲ್ಲಿ ಇದೇ ಮೊದಲೇನಲ್ಲ, ಈ ಹಿಂದೆ ಬಿಕಿನಿ ಫೋಟೋ ಹಂಚಿಕೊಳ್ಳುವ ಮೂಲಕ ನಟಿ ಸುದ್ದಿಯಾಗಿದ್ದರು. ಒಟ್ನಲ್ಲಿ ಸ್ಯಾಂಡಲ್ವುಡ್ ನಟಿಯರ ಬಿಕಿನಿ ಫೋಟೋಸ್ ನೋಡಿ, ಪಡ್ಡೆಹುಡುಗರ ಪಾಲಿಗೆ ಇಷ್ಟದೇವತೆಗಳಾಗಿದ್ದಾರೆ.
ರಕ್ಷಿತ್ ಶೆಟ್ಟಿ(Rakshit Shetty), ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಕಿರಿಕ್ ಪಾರ್ಟಿ’ (Kirik Party) ಸಿನಿಮಾದಲ್ಲಿ ಸಂಯುಕ್ತಾ ಹೆಗ್ಡೆ (Samyuktha Hegde) ಕೂಡ ನಾಯಕಿಯಾಗಿ ನಟಿಸಿ ಗಮನ ಸೆಳೆದಿದ್ದರು. ಬಳಿಕ ಸೌತ್ ಸಿನಿಮಾದಲ್ಲಿ ಸಂಯುಕ್ತಾ ಗುರುತಿಸಿಕೊಂಡರು. ಹೇಳಿಕೊಳ್ಳುವಂತಹ ಯಶಸ್ಸು ಅವರಿಗೆ ಸಿಗಲಿಲ್ಲ.
ಜಯಂರವಿ, ಪ್ರಭುದೇವ, ನಿಖಿಲ್ ಸಿದ್ಧಾರ್ಥ್ಗೆ ನಾಯಕಿಯಾಗಿ ಸಂಯುಕ್ತಾ ನಟಿಸಿದ್ದರು. ಈಗ ಕನ್ನಡದ ‘ಕ್ರೀಮ್’ (Cream) ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ಸದ್ಯದಲ್ಲೇ ಈ ಸಿನಿಮಾದ ರಿಲೀಸ್ ಅಪ್ಡೇಟ್ ಸಿಗಲಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]