ಸೌತ್ ನಟಿ ಸಮಂತಾ (Samantha) ಅವರು ನಾಗಚೈತನ್ಯ (Nagachaitanya) ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿ ಒಂದೂವರೆ ವರ್ಷ ಕಳೆದಿದೆ. ಈವರೆಗೂ ಇಬ್ಬರ ಡಿವೋರ್ಸ್‌ಗೆ (Divorce) ಕಾರಣ ಏನು ಎಂಬುದು ಸೀಕ್ರೆಟ್ ಆಗಿಯೇ ಇದೆ. ಸಂಬಂಧ ಕಳೆದುಕೊಂಡರು ಕೂಡ ಮಾಜಿ ಪತಿಯ ಕುಟುಂಬದ ಜೊತೆ ಸ್ಯಾಮ್‌ಗೆ ಒಡನಾಟವಿದೆ. ಮಾಜಿ ಪತಿಯ ಕುಟುಂಬದ ಮೇಲಿನ ಪ್ರೀತಿ ಸ್ಯಾಮ್‌ಗೆ ಕಮ್ಮಿಯಾಗಿಲ್ಲ. ಬಾಮೈದ ಬರ್ತ್‌ಡೇಗೆ ಸಮಂತಾ ಶುಭಕೋರಿದ್ದಾರೆ.
ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಎರಡು ಕುಟುಂಬವನ್ನು ಒಪ್ಪಿಸಿ ಸಮಂತಾ- ನಾಗಚೈತನ್ಯ ಅದ್ದೂರಿಯಾಗಿ ಮದುವೆಯಾಗಿದ್ದರು. ಆದರೆ ಅವರ ದಾಂಪತ್ಯ ನಾಲ್ಕೇ ವರ್ಷಕ್ಕೆ ಬ್ರೇಕ್ ಬಿತ್ತು. ಸದ್ಯ ಇಬ್ಬರು ತಮ್ಮ ತಮ್ಮ ಸಿನಿಮಾಗಳತ್ತ ಬ್ಯುಸಿಯಾಗಿದ್ದಾರೆ. ಜೊತೆಗೆ ಆಗಾಗ ತಮ್ಮ ಖಾಸಗಿ ವಿಚಾರವಾಗಿ ಸದ್ದು ಮಾಡುತ್ತಾರೆ.
ಅಖಿಲ್ ಅಕ್ಕಿನೇನಿ (Akhil Akkineni) ಅವರಿಗೆ ಈಗ 29 ವರ್ಷ ವಯಸ್ಸು. ಶನಿವಾರ (ಏಪ್ರಿಲ್ 08) ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಆ ಪ್ರಯುಕ್ತ ಅವರ ಹೊಸ ಸಿನಿಮಾ ‘ಏಜೆಂಟ್’ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಸ್ನೇಹಿತರು, ಅಭಿಮಾನಿಗಳು, ಸೆಲೆಬ್ರಿಟಿಗಳು ಅಖಿಲ್‌ಗೆ ಶುಭಾಶಯ ಕೋರಿದ್ದಾರೆ. ಇನ್ಸ್ಟಾಗ್ರಾಂ ಸ್ಟೋರಿ ಮೂಲಕ ಸಮಂತಾ ಕೂಡ ಅಖಿಲ್‌ಗೆ ಶುಭ ಹಾರೈಸಿದ್ದಾರೆ. `ಏಜೆಂಟ್’ (Agent) ಸಿನಿಮಾ ಸೂಪರ್ ಹಿಟ್ ಆಗಲಿ ಎಂದು ಅವರು ವಿಶ್ ಮಾಡಿದ್ದಾರೆ. ಇದನ್ನೂ ಓದಿ: ನಿಮ್ಮ ಉಪಸ್ಥಿತಿಗೆ ಬೆಲೆ ಕೊಡುವವರನ್ನು ಬಿಟ್ಟೋಗ್ಬೇಡಿ-ರಾಧಿಕಾ ಪಂಡಿತ್ ಹಿಂಗ್ಯಾಕಂದ್ರು?
ಸೌತ್ ಬ್ಯೂಟಿ ಸಮಂತಾ, ಯಶೋದ ಸೂಪರ್ ಸಕ್ಸಸ್ ನಂತರ ‘ಶಾಕುಂತಲಂ’ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಏ.14ಕ್ಕೆ ಸಿನಿಮಾ ತೆರೆಗೆ ಅಪ್ಪಳಿಸುತ್ತಿದೆ. ಸಮಂತಾ ಶಾಕುಂತಲೆಯಾಗಿ ಬರುತ್ತಿದ್ದಾರೆ.