ಟಾಲಿವುಡ್ (Tollywood) ನಟಿ ಸಮಂತಾ (Samantha) ಇದೀಗ ಮತ್ತಷ್ಟು ಬೋಲ್ಡ್ ಆಗಿದ್ದಾರೆ. ಬ್ರಾ ಧರಿಸದೆ ಎದೆ ಮೇಲೆ ಕೈಯಿಟ್ಟು ಸಖತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಸಮಂತಾ ಮೈಮಾಟಕ್ಕೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ನಟಿಯ ಹಾಟ್ ಫೋಟೋಗಳನ್ನು (Photoshoot) ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಒಳ ಉಡುಪು ಧರಿಸಿದೇ ಬ್ಲೇಜರ್ ತೊಟ್ಟಿರುವ ಹಾಟ್ ಹಾಟ್ ಫೋಟೋಗಳನ್ನು ಸಮಂತಾ ಶೇರ್ ಮಾಡಿ ಗಂಡ್ ಹೈಕ್ಳ ನಿದ್ದೆ ಕದ್ದಿದ್ದಾರೆ. ಮಡಿವಂತಿಗೆ ಬಿಟ್ಟು ಪೋಸ್ ಕೊಟ್ಟಿದ್ದೀರಾ ಅಂದ್ಮೇಲೆ ಎದೆಯ ಮೇಲೆ ಯಾಕೆ ಕೈಯಿಟ್ಟುಕೊಂಡಿದ್ದೀರಾ ಎಂದು ನೆಟ್ಟಿಗರು ನಟಿಯ ಕಾಲೆಳೆದಿದ್ದಾರೆ. ಇದನ್ನೂ ಓದಿ:ಜೂ.20ಕ್ಕೆ ಪ್ರಭಾಸ್ ನಟನೆಯ ‘ಕಲ್ಕಿ’ ರಿಲೀಸ್
ಬಾಲಿವುಡ್‌ಗೆ ಸಮಂತಾ ಬಲಗಾಲಿಟ್ಟು ಪಾದಾರ್ಪಣೆ ಮಾಡಿದ ಮೇಲೆ ಖದರ್ ಬದಲಾಗಿದೆ. ಬಾಲಿವುಡ್‌ಗೆ ತಕ್ಕಂತೆಯೇ ನಟಿ ತಮ್ಮ ಸ್ಟೈಲ್ ಬದಲಿಸಿಕೊಳ್ತಿದ್ದಾರೆ. ಗೌರಮ್ಮನಂತಿದ್ದ ಸಮಂತಾ ಬಹಳಷ್ಟು ಬದಲಾಗಿದ್ದಾರೆ. ಮೈ ಚಳಿ ಬಿಟ್ಟು ಕಮ್ಮಿ ಬಟ್ಟೆ ಧರಿಸಿ ಪೋಸ್ ಕೊಡುತ್ತಿದ್ದಾರೆ.
ಅಂದಹಾಗೆ, ವಿವಾದ, ಅನಾರೋಗ್ಯ, ಯಶಸ್ಸು ಎಲ್ಲವೂ ಅನುಭವಿಸಿರುವ ಜೀವ ಸಮಂತಾ. ನಾಗಚೈತನ್ಯ (Nagachaitanya) ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಸಮಂತಾ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಎಲ್ಲಾ ವಿಚಾರಕ್ಕೂ ಸಮಂತಾ ಕಡೆಯೇ ಬೆಟ್ಟು ಮಾಡಿ ತೋರಿಸುತ್ತಿದ್ದರು. ಸಹವಾಸವೇ ಬೇಡ ಅಂತ ವೃತ್ತಿರಂಗದಲ್ಲಿ ಬ್ಯುಸಿಯಾದರು. ‘ಪುಷ್ಪ’ (Pushpa) ಚಿತ್ರದಲ್ಲಿ ಸೊಂಟ ಬಳುಕಿಸಿದ ಮೇಲೆ ಸಮಂತಾ ಲಕ್ ಬದಲಾಯ್ತು.
ಆದರೆ ಯಶೋದ ಮತ್ತು ಖುಷಿ ಸಿನಿಮಾ ಆದ್ಮೇಲೆ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿರಲಿಲ್ಲ. ಎರಡೂ ಹೀನಾಯವಾಗಿ ಸೋತ ಚಿತ್ರಗಳು. ಸೋಲಿನ ಹೊಡೆತಕ್ಕೆ ಅನಾರೋಗ್ಯದ ಆಘಾತ ಎರಡನ್ನೂ ಸಹಿಕೊಳ್ಳೋಕೆ ಸ್ಯಾಮ್‌ಗೆ 8 ತಿಂಗಳು ಹಿಡಿಯಿತು. ಇದೀಗ ಮತ್ತೆ ಕೆಲಸಕ್ಕೆ ಮರಳಿದ್ದಾರೆ. ವರುಣ್ ಧವನ್‌ಗೆ ನಾಯಕಿಯಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ.