ಸಿನಿಮಾ ರಂಗದಂತೆಯೇ ಕಿರುತೆರೆಯಲ್ಲೂ ಕಲಾವಿದೆಯರಿಗೆ ಸಾಕಷ್ಟು ಹಿಂಸೆ ಮಾಡಲಾಗುತ್ತಿದೆ ಎನ್ನುವ ಆರೋಪ ಪದೇ ಪದೇ ಕೇಳಿ ಬರುತ್ತಿದೆ. ಅದರಲ್ಲೂ ಬಾಲಿವುಡ್ ಅನೇಕ ನಟಿಯರು ತಮಗಾದ ಕಹಿ ಅನುಭವಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ. ಇದೀಗ ರಾಮಾಯಣ (Ramayana) ಧಾರಾವಾಹಿಯ ನಿರ್ದೇಶಕ ರಮಾನಂದ್ ಸಾಗರ್ (Ramanand Sagar) ಅವರ ಮರಿಮೊಮ್ಮಗಳು ಅಂಥದ್ದೊಂದು ಆರೋಪ ಮಾಡಿದ್ದಾರೆ.
ರಮಾನಂದ್ ಸಾಗರ್ ಅವರ ಮರಿಮೊಮ್ಮಗಳಾದ ಸಾಕ್ಷಿ ಚೋಪ್ರಾ (Sakshi Chopra) ತಮ್ಮ ಬೋಲ್ಡ್ ಲುಕ್ ಮೂಲಕ ಸಾಕಷ್ಟು ಅಭಿಮಾನಿ ಹೊಂದಿದವರು. ಹಲವಾರು ಶೋಗಳಲ್ಲಿ ಅವರು ಭಾಗಿಯಾದವರು. ಇದೀಗ ಅಂಥದ್ದೇ ಒಂದು ಶೋನ ನಿರ್ಮಾಪಕರು ತಮಗೆ ಸಾಕಷ್ಟು ಕಿರುಕುಳ (Harassment) ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇದನ್ನೂ ಓದಿ:Exclusive: ಅರ್ಜುನ್ ಸರ್ಜಾ ನಿರ್ದೇಶನದ ಚಿತ್ರದಲ್ಲಿ ಉಪ್ಪಿ ಅಣ್ಣನ ಮಗ ನಟಿಸುತ್ತಾರಾ? ನಿರಂಜನ್ ಸ್ಪಷ್ಟನೆ
ಈ ಕುರಿತು ಅವರು ಇನ್ಸಾಟಾಗ್ರಾಮ್ ನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದು, ನಾನು ಒಪ್ಪಿದ್ದ ರಿಯಾಲಿಟಿ ಶೋ (Reality Show) ಒಪ್ಪಂದ ಪ್ರಕಾರ ತಾಯಿಯೊಂದಿಗೆ ಪ್ರತಿದಿನ ಒಂದು ಬಾರಿ ಫೋನ್ ಕರೆ ಮಾಡಲು ಅವಕಾಶವಿತ್ತು. ಆದರೆ, ಅದಕ್ಕೆ ಅವರು ಅವಕಾಶ ಕೊಡುತ್ತಿರಲಿಲ್ಲ. ಕೊಟ್ಟರೆ ಅವರ ಬಣ್ಣ ಬಯಲು ಮಾಡುತ್ತೇನೆ ಎನ್ನುವ ಆತಂಕವೂ ಇತ್ತು. ಅಪರಿಚಿತರು ಬೆನ್ನು ಸ್ಪರ್ಶಿಸಿ ಗಾಯ ಮಾಡುತ್ತಿದ್ದರು. ಊಟ ಮಾಡಲು ಹೋದಾಗ ಅಶ್ಲೀಲ ಪದಗಳಿಂದ ನಿಂದಿಸುತ್ತಿದ್ದರು ಎಂದೆಲ್ಲ ಆರೋಪ ಮಾಡಿದ್ದಾರೆ.
ಈ ಕಿರುಕುಳವನ್ನು ಅವರು ಕಳೆದ ಒಂದು ವರ್ಷದಿಂದಲೂ ಅನುಭವಿಸುತ್ತಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ. ಅಮ್ಮನಿಗೆ ಹೇಳುತ್ತೇನೆ ಎಂದಾಗ ಕೂತು, ಮಾತನಾಡಿಸಿ ಮತ್ತೊಂದು ಸಲ ಹೀಗೆ ಮಾಡುವುದಿಲ್ಲ ಎಂದು ಹೇಳುತ್ತಿದ್ದರು. ಭರವಸೆ ನೀಡುತ್ತಿದ್ದರು. ಆದರೂ, ಅವರು ಸರಿ ಹೋಗಲಿಲ್ಲ. ಕೆಲ ಶೋಗಳ ನಿರ್ಮಾಪಕರು ಕೊಳಕು ಮನರಂಜನೆಗಾಗಿ ಏನು ಮಾಡಲು ಸಿದ್ಧರು ಎಂದೆಲ್ಲ ಸಾಕ್ಷಿ ಆರೋಪ ಮಾಡಿದ್ದಾರೆ.