ಸೌತ್ ಸಿನಿಮಾರಂಗದ ಬ್ಯೂಟಿ ಸಾಯಿಪಲ್ಲವಿ, ತಮ್ಮ ಅಮೋಘ ಅಭಿನಯದ ಮೂಲಕ ಮನೆಮಾತಾಗಿರುವ ನಟಿ ಇದೀಗ ತಮ್ಮ ಮದುವೆಯ ಬಗ್ಗೆ ಕನಸು ಬಿಚ್ಚಿಟ್ಟಿದ್ದಾರೆ. ತಮ್ಮ ಮದುವೆಯ ಕುರಿತು ಇದೀಗ ಮುಕ್ತವಾಗಿ ಸಾಯಿ ಪಲ್ಲವಿ ಮಾತನಾಡಿದ್ದಾರೆ.
Advertisement
ದಕ್ಷಿಣದ ಚಿತ್ರರಂಗದಲ್ಲಿ ನಟನೆ ಮತ್ತು ಡ್ಯಾನ್ಸ್ ಎರಡರಲ್ಲೂ ಸೈ ಎನಿಸಿಕೊಂಡ ನಟಿ ಸಾಯಿಪಲ್ಲವಿಯ ಮದುವೆಯ ಕುರಿತು ಸಾಕಷ್ಟು ವಿಚಾರಗಳು ಕೇಳಿ ಬಂದಿತ್ತು. ಸಾಯಿಪಲ್ಲವಿ ಸದ್ಯದಲ್ಲೇ ಮದುವೆ ಆಗಲಿದ್ದಾರೆ ಎಂಬ ಸುದ್ದಿಗೆ ಸಾಲು ಸಾಲು ಚಿತ್ರಗಳ ಅನೌನ್ಸ್ ಮಾಡುವ ಮೂಲಕ ಮದುವೆಯ ಸುದ್ದಿಗೆ ಈ ನಟಿ ಬ್ರೇಕ್ ಹಾಕಿದ್ದರು. ಇದೀಗ ಸಂದರ್ಶನವೊಂದರಲ್ಲಿ ತಮ್ಮ ಮದುವೆ ಕನಸಿನ ಬಗ್ಗೆ ಸಾಯಿಪಲ್ಲವಿ ಮಾತನಾಡಿದ್ದಾರೆ.
Advertisement
Advertisement
ಕೋವಿಡ್ ಸಮಯದಲ್ಲಿ ನನಗೆ ಮದುವೆ ಆಗುವಂತೆ ಪೋಷಕರಿಂದ ಒತ್ತಾಯವಿತ್ತು. ಅದಕ್ಕೂ ಮುನ್ನ ನಾನು ಸಾಕಷ್ಟು ಸಮಯ ಸಿನಿಮಾ ಶೂಟಿಂಗ್‌ನಲ್ಲಿಯೇ ಭಾಗವಹಿಸುತ್ತಿದ್ದೆ, ಹಾಗಾಗಿ ನನ್ನ ಪೋಷಕರಿಗೂ ಭಯವಾಗುತ್ತಿತ್ತು. ಜತೆಗೆ ಗ್ರಾಮದಲ್ಲಿ ನನ್ನ ಜೊತೆಗಿದ್ದ ಸಾಕಷ್ಟು ನನ್ನ ವಯಸ್ಸಿನ ಯುವತಿಯರಿಗೆ ಮದುವೆಯಾಗಿತ್ತು. ಸಹಜವಾಗಿ, ನನಗೂ ಮದುವೆಯಾಗುವಂತೆ ಮನೆಯಲ್ಲಿ ಒತ್ತಾಯಿಸುತ್ತಿದ್ದರು ಎಂದಿದ್ದಾರೆ.
Advertisement
ನನಗೆ 18ನೇ ವಯಸ್ಸಿನಲ್ಲಿ ಒಂದು ಕನಸಿತ್ತು. ನನಗೆ 23 ವಯಸ್ಸಿಗೆ ಮದುಯಾಗುತ್ತದೆ, 30 ವಯಸ್ಸಿನಲ್ಲಿ ಇಬ್ಬರು ಮಕ್ಕಳಿರುತ್ತಾರೆ ಎಂದು ಕನಸು ಕಂಡಿದ್ದೆ. ಆದರೆ ಈಗ ದಾಂಪತ್ಯದ ಕುರಿತು ಯೋಚನೆ ಮಾಡಿದ್ರೆ, ನಾನು ಮದುವೆಯಾಗದಿದ್ದು ಒಳ್ಳೆಯದು ಅನಿಸುತ್ತಿದೆ. ಮದುವೆಯೆಂಬ ಜವಾಬ್ದಾರಿಯನ್ನ ತೆಗೆದುಕೊಳ್ಳಲು ಪರಿಪಕ್ವತೆ ಬೇಕು. ಮಡದಿಯಾಗಿ, ತಾಯಿಯಾಗಿ ಅವರ ಬೆಂಬಲಕ್ಕೆ ನಿಲ್ಲಬೇಕು. ಈಗ ಇಷ್ಟು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಇನ್ನು ಮದುವೆಯ ವಿಚಾರದಲ್ಲಿ ನನಗೆ ಸಂಪೂರ್ಣ ಸ್ವತಂತ್ರ್ಯವಿದೆ. ಆದರೆ ಹುಡುಗ ಯಾರು ಸೆಲೆಕ್ಟ್ ಮಾಡ್ತಾರೆ ಗೊತ್ತಿಲ್ಲ. ಪೋಷಕರು ಆದ್ರು ಓಕೆ, ನಾನು ಹೇಳಿದ್ರು ಸರಿ ಸದ್ಯ ಈ ಕುರಿತು ಯೋಚನೆ ಮಾಡಿಲ್ಲ ಅಂತಾ ಮುಕ್ತವಾಗಿ ಸಾಯಿಪಲ್ಲವಿ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಬಿಗ್‌ಬಿ ಮೊಮ್ಮಗಳ ಜೊತೆ `ಗಲ್ಲಿಬಾಯ್’ ನಟನ ಡೇಟಿಂಗ್ ಸ್ಟೋರಿ
ಸದ್ಯ ಸಾಯಿಪಲ್ಲವಿ ನಟನೆಯ `ಗಾರ್ಗಿ’ ಮತ್ತು `ವಿರಾಟ ಪರ್ವಂ’ ಚಿತ್ರಗಳು ರಿಲೀಸ್‌ಗೆ ರೆಡಿಯಿದೆ. ಹೊಸ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು `ಪ್ರೇಮಂ’ ಬೆಡಗಿ ರೆಡಿಯಾಗಿದ್ದಾರೆ.