ಜಪಾನ್ ಸುತ್ತಾಟದ ವಿಶೇಷ ವಿಡಿಯೋ ಹಂಚಿಕೊಂಡ ರಶ್ಮಿಕಾ ಮಂದಣ್ಣ

Public TV
1 Min Read
rashmika mandanna 5

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಇತ್ತೀಚೆಗೆ ಜಪಾನ್‌ಗೆ ಹೋಗಿ ಬಂದಿದ್ದಾರೆ. ಅನಿಮಿ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ಹೇಳಿಕೊಂಡಿದ್ದರು. ಇದೀಗ ಜಪಾನ್ ಸುತ್ತಾಟ ಮತ್ತು ತುಂಟಾಟದ ವಿಡಿಯೋ ತುಣುಕನ್ನು ಹರಿಬಿಟ್ಟಿದ್ದಾರೆ. ಇದನ್ನೂ ಓದಿ:ಸದ್ದಿಲ್ಲದೇ 2ನೇ ಚಿತ್ರದ ಶೂಟಿಂಗ್‌ ಮುಗಿಸಿದ ಆಮೀರ್ ಖಾನ್ ಪುತ್ರ

rashmika mandanna 1 2

ರಶ್ಮಿಕಾ ಈಗ ಬರೀ ಇಂಡಿಯಾದ ಹುಡುಗಿಯಾಗಿ ಉಳಿದಿಲ್ಲ. ಪುಷ್ಪ ಹಾಗೂ ‘ಅನಿಮಲ್’ (Animal) ಸಿನಿಮಾ ಬಂದ ಮೇಲಂತೂ ಆ ಹುಡುಗಿ ಎಲ್ಲಿಗೋ ಹೋಗಿ ಮುಟ್ಟಿದ್ದಾರೆ. ಬಾಲಿವುಡ್‌ನಲ್ಲಿ ಬೆಳಗುತ್ತಿರುವ ರಶ್ಮಿಕಾ ಈಗ ಜಪಾನ್‌ಗೆ ಹೋಗಿದ್ದ ವಿಡಿಯೋ ತುಣುಕನ್ನು ಕೊಂಚ ಹೆಚ್ಚಾಗಿಯೇ ಹಂಚಿಕೊಂಡಿದ್ದಾರೆ. ಈ ಹಿಂದೆ ಜಪಾನ್‌ಗೆ ಹೋಗೋದು ನನ್ನ ಬಾಲ್ಯದ ಕನಸು ಎಂದು ನಟಿ ಹೇಳಿದ್ದರು. ಹಾಗಾಗಿ ಜಪಾನ್ ಸ್ಥಳದ ವಿಶೇಷ ವಿಡಿಯೋ ಮಾಡಿ ಶೇರ್ ಮಾಡಿದ್ದಾರೆ.

rashmika mandanna

ಒಬ್ಬ ನಟಿ ಎಂಥ ಹೋಟೆಲ್‌ನಲ್ಲಿ ಇರುತ್ತಾರೆ. ಏನೇನು ತಿನ್ನುತ್ತಾರೆ. ಜನರ ಜೊತೆ ಹೇಗೆ ಬೆರೆಯುತ್ತಾರೆ. ಇತ್ಯಾದಿ ವಿಷಯ ಅಷ್ಟು ಸುಲಭವಾಗಿ ಯಾರಿಗೂ ಕಾಣಿಸಲ್ಲ. ಅದನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ ಸಾನ್ವಿ. ಸ್ನೇಹಿತೆಯರ ಹೋಗಿದ್ದು. ಸೆಲ್ಫಿ ತೆಗೆಸಿಕೊಂಡಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಎಲ್ಲವೂ ಅಭಿಮಾನಿಗಳಿಗೆ ತೆರೆಹಿಂದಿನ ಝಲಕ್ ತೋರಿಸಿದ್ದಾರೆ.


ಪುಷ್ಪ 2, ಅನಿಮಲ್ ಪಾರ್ಕ್, ಚಾವಾ, ರೈನ್‌ಬೋ ಸೇರಿದಂತೆ ಹಲವು ಸಿನಿಮಾಗಳು ರಶ್ಮಿಕಾ ಮಂದಣ್ಣ ಕೈಯಲ್ಲಿವೆ.

Share This Article