ʻಕಾಂತಾರʼ ನೋಡಿಲ್ಲ ಎಂದ ರಶ್ಮಿಕಾ ಮಂದಣ್ಣಗೆ ನೆಟ್ಟಿಗರಿಂದ ಕ್ಲಾಸ್

ಲಕ್ಕಿ ನಟಿ ರಶ್ಮಿಕಾ ಮಂದಣ್ಣ(Rashmika Mandanna) ಸದಾ ಒಂದಲ್ಲಾ ಒಂದು ವಿಷ್ಯವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ʻಕಾಂತಾರʼ ಚಿತ್ರ ನೋಡಿಲ್ಲ ಎಂದಿರುವ ರಶ್ಮಿಕಾ, ಕನ್ನಡಿಗರ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ. ನಟಿಯ ಉಡಾಫೆಯ ಉತ್ತರಕ್ಕೆ ನೆಟ್ಟಿಗರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ರಿಷಬ್ ಶೆಟ್ಟಿ(Rishab Shetty) ನಿರ್ದೇಶನದ ಕನ್ನಡದ `ಕಿರಿಕ್ ಪಾರ್ಟಿ’ (Kirik Party) ಚಿತ್ರದ ಮೂಲಕ ನಟನಾ ರಂಗಕ್ಕೆ ಎಂಟ್ರಿ ಕೊಟ್ಟ ನಟಿ ರಶ್ಮಿಕಾ ಇದೀಗ ಸೌತ್ ಮತ್ತು ಬಾಲಿವುಡ್‌ನಲ್ಲಿ ಮಿರ ಮಿರ ಅಂತಾ ಮಿಂಚ್ತಿದ್ದಾರೆ. ಇನ್ನೂ ಮುಂಬೈ ವಿಮಾನ ನಿಲ್ದಾಣದಲ್ಲಿ ಸಿಕ್ಕ ರಶ್ಮಿಕಾ ಮಂದಣ್ಣಗೆ ಪಾಪರಾಜಿಗಳು `ಕಾಂತಾರ'(Kantara Film) ಚಿತ್ರ ನೋಡಿದ್ರಾ ಅಂತಾ ಕೇಳಿದ್ದಾರೆ. ಇದನ್ನೂ ಓದಿ:ದಆಮೀರ್ ಖಾನ್ ತಾಯಿಗೆ ಹೃದಯಾಘಾತ
ದೇಶವೇ ಮೆಚ್ಚಿರುವ `ಕಾಂತಾರ’ ಸಿನಿಮಾವನ್ನ ರಶ್ಮಿಕಾ ನೋಡಿಲ್ಲ ಎಂದು ಉಡಾಫೆಯ ಉತ್ತರ ನೀಡಿದ್ದಾರೆ. ನಾನಿನ್ನೂ ಸಿನಿಮಾ ನೋಡಿಲ್ಲ. ಆದರೆ ನೋಡುತ್ತೇನೆ. ಬೆಂಗಳೂರಿಗೆ ಹಿಂದಿರುಗಿದ ಮೇಲೆ ವೀಕ್ಷಿಸುತ್ತೇನೆ ಎಂದು ಸಬೂಬಿನ ಉತ್ತರ ನೀಡಿದ್ದಾರೆ.
`ಕಾಂತಾರ’ ಸಿನಿಮಾ ನೋಡಿ ಪರಭಾಷೆಯ ಸೂಪರ್ ಸ್ಟಾರ್‌ಗಳೇ ಹಾಡಿ ಹೊಗಳುತ್ತಿರುವಾಗ ಕನ್ನಡದವರೇ ಆಗಿರುವ ರಶ್ಮಿಕಾ ಇನ್ನೂ ಸಿನಿಮಾ ನೋಡದೇ ಇರುವುದು ಕನ್ನಡಿಗರನ್ನ ಕೆರಳಿಸಿದೆ. ತಮ್ಮ ಮೊದಲ ಸಿನಿಮಾ ನಿರ್ದೇಶಕನ ಚಿತ್ರ ಹೇಗಿದೆ ಎಂದು ಹೇಳುವ ನಿಯತ್ತು ಕೂಡ ಇಲ್ವಾ ಎಂದು ಫ್ಯಾನ್ಸ್ ರಶ್ಮಿಕಾಗೆ ಸೋಷಿಯಲ್ ಮೀಡಿಯಾದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.