ಆಲಿಯಾ ಭಟ್ ಪತಿ ಜೊತೆ ರಶ್ಮಿಕಾ ಮಂದಣ್ಣ ಕ್ಲೋಸಪ್ ಸೆಲ್ಫಿ- ಫೋಟೋ ವೈರಲ್

Public TV
2 Min Read
rashmika mandanna 1 1

ನ್ನಡದ ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸೌತ್- ಬಾಲಿವುಡ್‌ನಲ್ಲಿ ಬ್ಯುಸಿ ನಾಯಕಿಯಾಗಿ ಸದ್ದು ಮಾಡ್ತಿದ್ದಾರೆ. ಸದ್ಯ ಆಲಿಯಾ ಭಟ್ ಪತಿ ರಣ್‌ಬೀರ್ ಕಪೂರ್ ಜೊತೆಗಿನ ಆಪ್ತತೆ ವಿಚಾರವಾಗಿ ರಶ್ಮಿಕಾ ಮಂದಣ್ಣ ಸುದ್ದಿಯಲ್ಲಿದ್ದಾರೆ. ರಣ್‌ಬೀರ್ ಜೊತೆಗಿನ ಕ್ಲೋಸಪ್ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.

rashmika mandanna 1

‘ಕಿರಿಕ್ ಪಾರ್ಟಿ’ (Kirik Party) ಸಿನಿಮಾದಿಂದ ಕೆರಿಯರ್ ಶುರು ಮಾಡಿದ ನಟಿ ರಶ್ಮಿಕಾ ಮಂದಣ್ಣ ಅವರು ಈಗ ಪ್ಯಾನ್ ಇಂಡಿಯಾ ಸ್ಟಾರ್ ನಾಯಕಿಯಾಗಿ ಮಿಂಚ್ತಿದ್ದಾರೆ. ತೆಲುಗು, ತಮಿಳು, ಬಾಲಿವುಡ್‌ನಲ್ಲಿ ಶ್ರೀವಲ್ಲಿಗೆ ಭಾರಿ ಡಿಮ್ಯಾಂಡ್‌ಯಿದೆ. ‘ಪುಷ್ಪ’ (Pushpa) ಸಿನಿಮಾ ಅಂತೂ ಹಿಟ್ ಆದ್ಮೇಲೆ ಕೇಳಬೇಕಾ.? ಜಾಹಿರಾತಿಗೂ ಇವರೇ ಬೇಕು.. ಸ್ಟಾರ್ ನಟರ ಚಿತ್ರಕ್ಕೂ ರಶ್ಮಿಕಾನೇ ಬೇಕು ಎನ್ನುವಷ್ಟರ ಮಟ್ಟಿಗೆ ಹವಾ ಕ್ರಿಯೇಟ್ ಮಾಡಿದ್ದಾರೆ. ಕೊಡಗಿನ ಕುವರಿಗೆ ಸೆಡ್ಡು ಹೊಡೆಯಲು ಶ್ರೀಲೀಲಾ (Sreeleela) ಬಂದ ಮೇಲೆ ಕೊಂಚ ಡಲ್ ಆಗಿದ್ದಾರೆ. ಆದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ರಶ್ಮಿಕಾ (Rashmika) ಮುಂದೆ ಸಾಗುತ್ತಿದ್ದಾರೆ.

rashmika

ಬಾಲಿವುಡ್‌ನ ‘ಗುಡ್ ಬೈ’, ‘ಮಿಷನ್ ಮಜ್ನು’ ಸಿನಿಮಾ ತೆರೆ ಕಂಡ ಮೇಲೆ ಇದೀಗ 3ನೇ ಚಿತ್ರ ‘ಅನಿಮಲ್’ ತೆರೆಗೆ ಬರುತ್ತಿದೆ. ರಣ್‌ಬೀರ್‌ಗೆ (Ranbir Kapoor) ನಾಯಕಿಯಾಗಿ ರಶ್ಮಿಕಾ ನಟಿಸಿದ್ದಾರೆ. ಹಾಗಾಗಿ ಆಲಿಯಾ ಭಟ್ (Aliaa Bhatt) ಪತಿ ಜೊತೆಗಿನ ಆಪ್ತತೆ ಎಷ್ಟರ ಮಟ್ಟಿಗೆ ಇದೆ ಅನ್ನೋದ್ದಕ್ಕೆ ಈ ಸೆಲ್ಫಿ ಸಾಕ್ಷಿ ಹೇಳುತ್ತಿದೆ. ಇದರ ನಡುವೆ ಏನಾದರೂ ಕುಚ್ ಕುಚ್ ನಡಿತಿದ್ಯಾ ಅಂತಾ ಗಾಸಿಪ್ ಪ್ರಿಯರು ಮಾತನಾಡುತ್ತಿದ್ದಾರೆ. ಇದನ್ನೂ ಓದಿ:ಕರುಣೆಯ ಕಣ್ಣುಗಳಿಂದ ಜಗತ್ತನ್ನು ನೋಡಲು ಕಲಿಸಿದ ರಾಗಾಗೆ ರಮ್ಯಾ ವಿಶ್

rashmikar

ರಣ್‌ಬೀರ್, ರಶ್ಮಿಕಾ ನಟನೆಯ ‘ಅನಿಮಲ್’ (Animal) ಸಿನಿಮಾ ಇದೇ ಆಗಸ್ಟ್ 11ಕ್ಕೆ ತೆರೆಗೆ ಬರುತ್ತಿದೆ. ಹಾಗಾಗಿ ಚಿತ್ರೀಕರಣದ ಸಮಯ ಫೋಟೋಗಳನ್ನ ಈಗ ಶೇರ್ ಮಾಡಿ ಸಂಭ್ರಮಿಸಿದ್ದಾರೆ. ಪೀಸ್ ಆಫ್ ಮೈ ಹಾರ್ಟ್ ಎಂದು ರಶ್ಮಿಕಾ ಅಡಿಬರಹ ನೀಡಿ ಪೋಸ್ಟ್ ಮಾಡಿದ್ದಾರೆ. ರಣ್‌ಬೀರ್ ಜೊತೆ ರಶ್ಮಿಕಾ ಕ್ಲೋಸ್ ಆಗಿರುವ ಫೋಟೋ ಮತ್ತು ತಂಡದ ಜೊತೆಗಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದೆಲ್ಲದರ ನಡುವೆ ರಶ್ಮಿಕಾ ನಟನೆಯ ಬಾಲಿವುಡ್‌ನ 3ನೇ ಸಿನಿಮಾ ಗೆಲ್ಲುತ್ತಾ.? ಬಿಟೌನ್‌ ಅಡ್ಡಾದಲ್ಲಿ ಶ್ರೀವಲ್ಲಿ ಗಟ್ಟಿ ಸ್ಥಾನ ಗಿಟ್ಟಿಸಿಕೊಳ್ಳುತ್ತಾರಾ ಅಂತಾ ಕಾದುನೋಡಬೇಕಿದೆ.

Share This Article