ಕೊಡಗಿನ ಬ್ಯೂಟಿ ರಶ್ಮಿಕಾ ಮಂದಣ್ಣ(Rashmika Mandanna) ಸಿಕ್ಕಾಪಟ್ಟೆ ಲಕ್ಕಿ ನಟಿ ಎಂಬುದನ್ನ ಮತ್ತೆ ಪ್ರೂವ್ ಮಾಡಿದ್ದಾರೆ. ಸೌತ್ ಸುಂದರಿಯಾಗಿ ಛಾಪೂ ಮೂಡಿಸಿರುವ ನಟಿ ರಶ್ಮಿಕಾ ಈಗ ಬಾಲಿವುಡ್‌ನ ನಟಿಮಣಿಯರನ್ನೇ ಸೆಡ್ಡು ಹೊಡೆದು ಸ್ಟಾರ್ ನಟನಿಗೆ ನಾಯಕಿಯಾಗಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
`ಪುಷ್ಪ’ (Pushpa) ಬ್ಯೂಟಿ ರಶ್ಮಿಕಾ ಇದೀಗ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹಿಂದಿಯ ಚೊಚ್ಚಲ ಸಿನಿಮಾ ರಿಲೀಸ್ ಆಗುವುದಕ್ಕೂ ಮುನ್ನವೇ ಸಾಲು ಸಾಲು ಬಾಲಿವುಡ್ ಅವಕಾಶಗಳನ್ನ ಬಾಚಿಕೊಳ್ಳುತ್ತಿದ್ದಾರೆ. ಇದೀಗ ಹೊಸ ಅಪ್‌ಡೇಟ್, ಬಿಟೌನ್ ಸ್ಟಾರ್ ಟೈಗರ್ ಶ್ರಾಫ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:‘ಕಾಂತಾರ’ ಸಿನಿಮಾದ ಮೊದಲ ದಿನದ ಗಳಿಕೆ: ಸಿನಿ ಪಂಡಿತರ ಲೆಕ್ಕಾಚಾರ
ಸಿದ್ಧಾರ್ಥ್ ಆನಂದ್ ನಿರ್ಮಾಣದ, ರೋಹಿತ್ ಧವನ್ ನಿರ್ದೇಶನದ ಸಿನಿಮಾದಲ್ಲಿ ಟೈಗರ್ ಶ್ರಾಫ್‌ಗೆ (Tiger Shroff) ನಾಯಕಿಯಾಗಿ ರಶ್ಮಿಕಾ ಸೆಲೆಕ್ಟ್ ಆಗಿದ್ದಾರೆ. ಭಿನ್ನ ಪಾತ್ರದ ಮೂಲಕ ರಂಜಿಸಲು ಕಿರಿಕ್ ಬ್ಯೂಟಿ ರಶ್ಮಿಕಾ(Rashmika) ರೆಡಿಯಾಗಿದ್ದಾರೆ.
ಇನ್ನೂ ಬಾಲಿವುಡ್‌ನ ರಶ್ಮಿಕಾ ಡೆಬ್ಯೂ ಸಿನಿಮಾ ಇದೇ ಅಕ್ಟೋಬರ್ 7ಕ್ಕೆ `ಗುಡ್ ಬೈ’ ತೆರೆಗೆ ಬರುತ್ತಿದೆ. ಬಿಗ್ ಬಿ ಮತ್ತು ರಶ್ಮಿಕಾ ಕಾಂಬಿನೇಷನ್ ಅದೆಷ್ಟರ ಮಟ್ಟಿಗೆ ಕಮಾಲ್ ಮಾಡಲಿದೆ ಎಂದು ಕಾದುನೋಡಬೇಕಿದೆ.