CinemaKarnatakaLatestLeading NewsMain PostSandalwood

‘ಕಾಂತಾರ’ ಸಿನಿಮಾದ ಮೊದಲ ದಿನದ ಗಳಿಕೆ: ಸಿನಿ ಪಂಡಿತರ ಲೆಕ್ಕಾಚಾರ

ವಾರ ಕರ್ನಾಟಕದಲ್ಲಿ ನಾಲ್ಕು ಸಿನಿಮಾಗಳು ರಿಲೀಸ್ ಆಗಿದ್ದವು. ಅದರಲ್ಲಿ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ (Kantara) ಸಿನಿಮಾ ಕೂಡ ಒಂದು. ಸಿನಿಮಾದ ಬಗ್ಗೆ ಬಹುತೇಕ ಪಾಸಿಟಿವ್ ರಿವ್ಯು (Review) ಬಂದಿರುವ ಕಾರಣದಿಂದಾಗಿ ಶುಕ್ರವಾರ ಬಿಡುಗಡೆ ಕಂಡ ಬಹುತೇಕ ಚಿತ್ರಮಂದಿರಗಳಲ್ಲಿ ಕಾಂತಾರ ಹೌಸ್ ಫುಲ್ ಪ್ರದರ್ಶನ ಕಂಡಿದೆ. ನೂರಾರು ಚಿತ್ರಮಂದಿರಗಳಲ್ಲಿ ಕಾಂತಾರ ಬಿಡುಗಡೆ ಆಗಿದ್ದು, ಕೋಟಿ ಕೋಟಿ ಹಣವನ್ನು ಬಾಚಿದೆ ಎಂದು ಅಂದಾಜಿಸಲಾಗಿದೆ.

ಸ್ಯಾಂಡಲ್ ವುಡ್ (Sandalwood) ಸಿನಿ ಪಂಡಿತರ ಲೆಕ್ಕಾಚಾರದಂತೆ ಸಿನಿಮಾದ ಮೊದಲ ದಿನದ ಕಲೆಕ್ಷನ್ (Collection) ಐದರಿಂದ ಆರು ಕೋಟಿ ಎಂದು ಅಂದಾಜಿಸಲಾಗಿದ್ದು, ವೀಕೆಂಡ್ ಮುಗಿಯುವುದರೊಳಗೆ ಕಾಂತಾರ ಹದಿನೈದು ಕೋಟಿ ಬಾಚಲಿದೆ ಎಂದು ಹೇಳಲಾಗುತ್ತಿದೆ. ಮೂರೇ ದಿನಕ್ಕೆ ಕಾಂತಾರದ ಬಜೆಟ್ ವಾಪಸ್ಸಾಗಲಿದೆ ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ. ಶನಿವಾರ ಮತ್ತು ಭಾನುವಾರ ಮತ್ತಷ್ಟು ಚಿತ್ರಮಂದಿರಗಳಲ್ಲಿ ಕಾಂತಾರ ಪ್ರದರ್ಶನ ಕಾಣುತ್ತಿರುವುದು ಗಳಿಕೆಯ ವೇಗವನ್ನು ಮತ್ತಷ್ಟು ಹೆಚ್ಚಿಸಲಿದೆ. ಇದನ್ನೂ ಓದಿ:ಖ್ಯಾತ ನಟಿ ಆಶಾ ಪರೇಖ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಕಾಂತಾರ ನೋಡಿದ ಪ್ರತಿಯೊಬ್ಬರೂ ಚಿತ್ರದ ಬಗ್ಗೆ ಅತ್ಯುತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅದರಲ್ಲೂ ಸಿನಿಮಾಗಾಗಿ ಆಯ್ಕೆ ಮಾಡಿಕೊಂಡ ಕಥೆ, ಅದನ್ನು ಪ್ರಸೆಂಟ್ ಮಾಡಿದ ರೀತಿ, ಕಲಾವಿದರ ಅಭಿನಯ, ರಿಷಬ್ ಶೆಟ್ಟಿ (Rishabh Shetty) ಅವರ ಆರ್ಭಟ ಎಲ್ಲವನ್ನೂ ಕೊಂಡಾಡಲಾಗುತ್ತಿದೆ. ಹಿನ್ನೆಲೆ ಸಂಗೀತ ಮತ್ತು ಕ್ಯಾಮೆರಾ ಕೆಲಸ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿರುವುದರಿಂದ ಕಾಂತಾರ ಈ ವರ್ಷದ ಹಿಟ್ ಸಿನಿಮಾಗಳ ಲಿಸ್ಟ್ ನಲ್ಲಿ ನೋಡುಗರು ಸೇರಿಸಿಬಿಟ್ಟಿದ್ದಾರೆ.

ಸಿನಿಮಾ ಜನರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ಇತ್ತು. ಆದರೆ, ಈ ಪ್ರಮಾಣದಲ್ಲಿ ಜನರು ಸಿನಿಮಾವನ್ನು ಸ್ವೀಕಾರ ಮಾಡುತ್ತಾರೆ ಎನ್ನುವ ಅಂದಾಜು ಇರಲಿಲ್ಲ. ಒಳ್ಳೆಯ ಸಿನಿಮಾಗಳನ್ನು ಕೊಟ್ಟರೆ ಜನ ಸ್ವೀಕರಿಸುತ್ತಾರೆ ಎಂಬ ನಂಬಿಕೆ ಮತ್ತೊಮ್ಮೆ ಸಾಬೀತಾಗಿದೆ ಎಂದೂ ರಿಷಬ್ ಹೇಳಿದ್ದಾರೆ. ತಮ್ಮ ನೆಲದ ಕಥೆ ಹೇಳಿರುವುದಕ್ಕೆ ಸಹಜವಾಗಿಯೇ ಅವರಿಗೆ ಹೆಮ್ಮೆ ಇದೆ.

Live Tv

Leave a Reply

Your email address will not be published. Required fields are marked *

Back to top button