ಬಾಲಿವುಡ್ ಬೆಡಗಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಮದುವೆ ಬಳಿಕ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಮದುವೆ ನಂತರ ಉದ್ಯಮ ಕ್ಷೇತ್ರಕ್ಕೆ ನಟಿ ಕಾಲಿಟ್ಟಿದ್ದರು. ಇದೀಗ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿದ್ದಾರೆ. ಮತ್ತೆ ಸಿನಿಮಾ ಚಿತ್ರೀಕರಣದತ್ತ ನಟಿ ತೊಡಗಿಸಿಕೊಂಡಿದ್ದಾರೆ. ಇದನ್ನೂ ಓದಿ:ರವೀನಾ ಟಂಡನ್ ರಸ್ತೆ ಅಪಘಾತ: ಪ್ರತಿಕ್ರಿಯೆ ಕೊಟ್ಟ ಕೆಜಿಎಫ್ ರಮಿಕಾ
ಅಜಯ್ ದೇವಗನ್ (Ajay Devgn) ಜೊತೆ ಮತ್ತೆ ರಕುಲ್ ಕೈಜೋಡಿಸಿದ್ದಾರೆ. ‘ದೇ ದೇ ಪ್ಯಾರ್ ದೇ 2’ (De De Pyaar De 2) ಎಂಬ ಸಿನಿಮಾದಲ್ಲಿ ರಕುಲ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಿರುವ ಸೆಟ್‌ನ ಫೋಟೋವೊಂದನ್ನು ನಟಿ ಹಂಚಿಕೊಂಡಿದ್ದಾರೆ. ‘ನನ್ನ ಫೇವರೇಟ್ ಸೆಟ್ ಹಿಂದಿರುಗಿದ್ದೇನೆ’ ಎಂದು ನಟಿ ಕ್ಯಾಪ್ಷನ್ ನೀಡಿದ್ದಾರೆ. ಇದನ್ನೂ ಓದಿ:ಡೇಟಿಂಗ್‌ಗೆ ಸಿಕ್ತು ಸಾಕ್ಷಿ- ಯುರೋಪ್‌ನಲ್ಲಿ ಸಿಕ್ಕಿಬಿದ್ದ ನಾಗಚೈತನ್ಯ, ಶೋಭಿತಾ ಜೋಡಿ
‘ದೇ ದೇ ಪ್ಯಾರ್ ದೇ’ ಸಿನಿಮಾದಲ್ಲಿ ಟಬು ಜೊತೆ ಅಜಯ್ ದೇವಗನ್, ರಕುಲ್ ನಟಿಸಿದ್ದರು. ಈ ಸಿನಿಮಾದ ಮುಂದುವರೆದ ಭಾಗವನ್ನು ಇದೀಗ ಶೂಟಿಂಗ್ ಮಾಡಲಾಗುತ್ತಿದೆ. ಮುಂದಿನ ವರ್ಷ ಮೇ 1ರಂದು ಸಿನಿಮಾ ರಿಲೀಸ್ ಆಗಲಿದೆ.
ಚಿತ್ರದ ಪಾರ್ಟ್ 1ರಲ್ಲಿ ಅಜಯ್ ಮತ್ತು ರಕುಲ್ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಹಿಡಿಸಿತ್ತು. ‘ದೇ ದೇ ಪ್ಯಾರ್ ದೇ 2’ನಲ್ಲಿ ಕಥೆ ಮತ್ತು ಇಬ್ಬರ ರೊಮ್ಯಾನ್ಸ್ ನೋಡಲು ಅಭಿಮಾನಿಗಳು ಎದುರು ನೋಡ್ತಿದ್ದಾರೆ.