ಕನ್ನಡದ ‘ಪೊರ್ಕಿ’ (Porki) ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಿತರಾದ ನಟಿ ಪ್ರಣೀತಾ ಸುಭಾಷ್ (Pranitha Subhash) ಅವರು ಮದುವೆ, ಮಗುವಾದ್ಮೇಲೆ ಮತ್ತೆ ನಟನೆಗೆ ಕಮ್‌ಬ್ಯಾಕ್ ಆಗಿದ್ದಾರೆ. ಸದಾ ಮಾಡ್ರನ್ ಡ್ರೆಸ್ ಮಿಂಚಿದ್ದ ನಟಿ, ಈಗ ಸೀರೆಯುಟ್ಟು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ಕನ್ನಡತಿ ಪ್ರಣೀತಾ, ಕನ್ನಡ, ತೆಲುಗು, ತಮಿಳು, ಬಾಲಿವುಡ್‌ನಲ್ಲೂ ನಾಯಕಿಯಾಗಿ ಶೈನ್ ಆಗಿದ್ದಾರೆ. ದಿಲೀಪ್‌ಗೆ ನಾಯಕಿಯಾಗುವ ಮೂಲಕ ಮಾಲಿವುಡ್ (Mollywood) ರಂಗಕ್ಕೂ ನಟಿ ಪ್ರಣೀತಾ ಕಾಲಿಟ್ಟಿದ್ದಾರೆ. ಕೇರಳದಲ್ಲಿ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಇದನ್ನೂ ಓದಿ:ಮಗಳ ಭವಿಷ್ಯಕ್ಕಾಗಿ ದೇಶ ಬಿಡಲು ಸಿದ್ಧ ಎಂದ ಪ್ರಿಯಾಂಕಾ ಚೋಪ್ರಾ
ಕಳೆದ ಲಾಕ್‌ಡೌನ್‌ನಲ್ಲಿ ಉದ್ಯಮಿ ನಿತಿನ್ ಜೊತೆ ಪ್ರಣೀತಾ ಹಸೆಮಣೆ(Wedding) ಏರಿದ್ದರು. ಗುರುಹಿರಿಯರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಿದ್ದರು. ಇದೀಗ ಮುದ್ದಾದ ಮಗಳಿದ್ದಾಳೆ. ಸಿನಿಮಾ- ಮಗಳ ಆರೈಕೆ ಎರಡನ್ನು ಬ್ಯಾಲೆನ್ಸ್ ಮಾಡ್ತಿದ್ದಾರೆ. ಹಾಗೆಯೇ ಫಿಟ್‌ನೆಸ್ ಕಡೆ ಹೆಚ್ಚು ಗಮನ ಕೊಡ್ತಿದ್ದಾರೆ.
View this post on Instagram
ಮುದ್ದಾದ ಮಗಳು ಜನಿಸಿದ ನಂತರ ಪ್ರಣೀತಾ ಮತ್ತಷ್ಟು ಬೋಲ್ಡ್ ಆಗಿದ್ದಾರೆ. ಆಗಾಗ ಹಾಟ್ ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆಕೆಡಿಸುತ್ತಿರುತ್ತಾರೆ. ಇದೀಗ ಹಳದಿ ಬಣ್ಣದ ಸೀರೆಯುಟ್ಟು ಕ್ಯಾಮೆರಾ ಕಣ್ಣಿಗೆ ಮುದ್ದಾಗಿ ಪೋಸ್ ನೀಡಿದ್ದಾರೆ. ಸಾಂಪ್ರದಾಯಿಕ ಲುಕ್‌ಗೂ ಸೈ, ಮಾಡ್ರನ್ ಡ್ರೆಸ್‌ಗೂ ಜೈ ಎಂದು ಮಿಂಚಿದ್ದಾರೆ. ಪ್ರಣೀತಾ ಅವತಾರ ನೋಡಿ ಸಂತೂರ್ ಮಮ್ಮಿ ಅಂತಾ ಫ್ಯಾನ್ಸ್ ಕಾಮೆಂಟ್ ಮಾಡ್ತಿದ್ದಾರೆ.