ರಾಕೇಶ್ ಅಡಿಗ ಸೇರಿದಂತೆ ಹಲವು ಕಲಾವಿದರು ನಟಿಸಿದ್ದ ಜೋಶ್ (Josh) ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿದ್ದ ಪೂರ್ಣಾ ಅಲಿಯಾಸ್ ಶಮ್ನಾ ಕಾಸಿಮ್ (Shamna Kasim) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗಷ್ಟೇ ಈ ನಟಿ ತಾವು ಮದುವೆ ಆಗುತ್ತಿರುವ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಆದರೆ, ಯಾರನ್ನು ಮದುವೆ ಆಗುತ್ತಿದ್ದಾರೆ ಎನ್ನುವ ವಿಚಾರವನ್ನು ಮಾತ್ರ ಗುಟ್ಟಾಗಿ ಇಟ್ಟಿದ್ದರು.
Advertisement
ಅಂದಹಾಗೆ ಶಮ್ನಾ ದುಬೈ (Dubai) ಮೂಲದ ಉದ್ಯಮಿ ಶಾನಿದ್ ಆಸಿಫ್ ಅಲಿ (Shanid Asif Ali) ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದು, ಅದ್ಧೂರಿಯಾಗಿಯೇ ಈ ಜೋಡಿಯ ಮದುವೆ ನೆರವೇರಿದೆ. ಅಕ್ಟೋಬರ್ 24 ರಂದು ದುಬೈನಲ್ಲಿಯೇ ರಾತ್ರಿ ಈ ಜೋಡಿಯ ವಿವಾಹ ನಡೆದಿದ್ದು, ಕುಟುಂಬದ ಸದಸ್ಯರಿಗೆ ಮತ್ತು ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ತಮ್ಮ ಮದುವೆಯ ವಿಚಾರವನ್ನು ಹಂಚಿಕೊಳ್ಳುವುದರ ಮೂಲಕ ಮದುವೆ ಫೋಟೋಗಳನ್ನೂ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ ನಟಿ. ಇದನ್ನೂ ಓದಿ:ಚೇತನ್ ಕಾಂಟ್ರವರ್ಸಿಗೆ ಪ್ರಗತಿ ರಿಷಬ್ ಶೆಟ್ಟಿ ಪ್ರತಿಕ್ರಿಯೆ
Advertisement
Advertisement
ಮುಸ್ಲಿಂ ಸಂಪ್ರದಾಯದಂತೆ ಶಮ್ನಾ ಮದುವೆ (Marriage) ಆಗಿದ್ದು, ಕೆಂಪು ಬಣ್ಣದ ಜೆರಿಯ ಬಿಳಿ ಮತ್ತು ಗೋಲ್ಡನ್ ಬಣ್ಣದ ಸೀರೆಯಲ್ಲಿ ಶಮ್ನಾ ಮಿಂಚುತ್ತಿದ್ದರು. ಅಲ್ಲದೇ, ಸಾಕಷ್ಟು ಬಂಗಾರದ ಆಭರಣಗಳನ್ನೂ ಅವರು ಧರಿಸಿದ್ದರು. ಮದುವೆ ಸಿಂಪಲ್ ಅಂತ ಅನಿಸಿದರೂ, ಅದೊಂದು ದುಬಾರಿ ಮದುವೆ ಆಗಿತ್ತು ಎಂದು ಹೇಳಲಾಗುತ್ತಿದೆ.
Advertisement
ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದ ಶಮ್ನಾ, ಮಂಜು ಪೋಲೂರು ಪೆಂಕುಟ್ಟಿ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ನಂತರ ತೆಲುಗು ಮತ್ತು ತಮಿಳಿನಲ್ಲೂ ಅವರು ಸಿನಿಮಾಗಳನ್ನು ಮಾಡಿದರು. ಕನ್ನಡದ ಜೋಶ್ ಸಿನಿಮಾ ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತು.
ಜೋಶ್ ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆಯೇ ಶಮ್ನಾ ಸ್ಟಾರ್ ನಟಿಯಾಗಿ ಬದಲಾದರು. ಅಲ್ಲದೇ, ಇತ್ತೀಚೆಗಷ್ಟೇ ರಮೇಶ್ ಅರವಿಂದ್ ನಟನೆಯ 100 ಸಿನಿಮಾದಲ್ಲೂ ನಟಿಸಿದ್ದರು. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಇವರು, ಈ ಹೊತ್ತಿನಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಭಿಮಾನಿಗಳು ಇವರಿಗೆ ಶುಭ ಹಾರೈಸಿದ್ದಾರೆ.