ರವಿ ತೇಜಾ ಸಿನಿಮಾದಿಂದ ಪೂಜಾ ಹೆಗ್ಡೆ ಔಟ್- ಮತ್ತೋರ್ವ ನಟಿಯ ಆಗಮನ

Public TV
2 Min Read
pooja hegde

ಚಿತ್ರರಂಗದಲ್ಲಿ ಅದ್ಯಾಕೋ ಪೂಜಾ ಹೆಗ್ಡೆ(Pooja Hegde) ನಸೀಬು ಕೈ ಕೊಟ್ಟಿದೆ. ನಟಿಸಿದ ಅಷ್ಟು ಸಿನಿಮಾ ಫ್ಲಾಪ್ ಮೇಲೆ ಫ್ಲಾಪ್, ಹೊಸ ಸಿನಿಮಾದಿಂದ ನಟಿ ಔಟ್ ಆಗ್ತಿದ್ದಾರೆ. ಮಹೇಶ್ ಬಾಬು(Mahesh Babu), ಪವನ್ ಕಲ್ಯಾಣ್ (Pawan Kalyan) ಸಿನಿಮಾದಿಂದ ಕರಾವಳಿ ನಟಿ ಕಿಕ್ ಔಟ್ ಆಗಿರೋ ಬೆನ್ನಲ್ಲೇ ರವಿ ತೇಜಾ (Raviteja) ಸಿನಿಮಾದಿಂದ ಕೂಡ ಔಟ್ ಆಗಿದ್ದಾರೆ.

pooja hegde

ಬಾಲಿವುಡ್-ಸೌತ್ ಸಿನಿ ರಂಗದಲ್ಲಿ ಮೋಡಿ ಮಾಡ್ತಿರುವ ನಟಿ ಪೂಜಾ ಹೆಗ್ಡೆಗೆ ಇತ್ತೀಚಿನ ದಿನಗಳಲ್ಲಿ ಲಕ್ ಕೈ ಕೊಟ್ಟಿದೆ. ಯಾವುದೇ ಸಿನಿಮಾ ಮಾಡಿದ್ರು. ಸ್ಟಾರ್ ನಟರಿಗೆ ನಾಯಕಿಯಾದರು ಕೂಡ ಅವರಿಗೆ ಸಕ್ಸಸ್ ಸಿಗುತ್ತಿಲ್ಲ. ಬೀಸ್ಟ್, ರಾಧೆ ಶ್ಯಾಮ್, ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸೇರಿದಂತೆ ಹಲವು ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಗೆಲುವು ಕಾಣದೇ ಸೋತಿದೆ. ಇದನ್ನೂ ಓದಿ:ಚಿರಂಜೀವಿಯನ್ನು ಹಾಡಿ ಹೊಗಳಿದ ‘ಕಾವಾಲಾ’ ಬ್ಯೂಟಿ ತಮನ್ನಾ

pooja hegde

ಸೋಲಿನ ತಲೆ ಬಿಸಿ ಬಿಟ್ಟು ಮತ್ತೆ ಸಿನಿಮಾರಂಗದಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಳ್ಳಬೇಕು ಎಂದು ಕನಸು ಇಟ್ಟುಕೊಂಡ ನಟಿಗೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾದಲ್ಲಿ ನಾಯಕಿಯಾಗಿ ಪೂಜಾ ನಟಿಸಿದ್ದರು. ಅಲ್ಲಿ ಕೆಲವು ಮನಸ್ತಾಪಗಳಾಗಿ ಹೊರಬಂದರು. ಆ ಜಾಗವನ್ನ ಶ್ರೀಲೀಲಾ (Sreeleela) ಆಕ್ರಮಿಸಿದರು. ಪವನ್ ಕಲ್ಯಾಣ್ ಹೊಸ ಸಿನಿಮಾದಲ್ಲಿಯೂ ಹಾಗೆಯೇ ಆಯಿತು. ಆ ಚಿತ್ರ ಕೂಡ ಧಮಾಕಾ (Dhamaka) ನಟಿಯ ಪಾಲಾಯಿತು. ಈಗ ಮತ್ತೊಂದು ಶಾಕ್ ನಟಿಗೆ ಎದುರಾಗಿದೆ.

mrunal thakur

ರವಿತೇಜಾ- ನಿರ್ದೇಶಕ ಗೋಪಿ ಚಂದ್ ಮಲಿನೇನಿ ಸಿನಿಮಾಗೆ ಕರಾವಳಿ ನಟಿ ಪೂಜಾ ಹೆಗ್ಡೆ ನಾಯಕಿಯಾಗಿದ್ರು. ಎಲ್ಲವೂ ಫೈನಲ್ ಆಗಿತ್ತು. ಆದರೆ ಈ ಸಿನಿಮಾದಿಂದ ಕೂಡ ಪೂಜಾ ಹೊರಬಂದಿದ್ದಾರೆ ಎನ್ನಲಾಗುತ್ತಿದೆ. ಅವರ ಜಾಗಕ್ಕೆ ‘ಸೀತಾರಾಮಂ’ ನಟಿ ಮೃಣಾಲ್ (Mrunal Thakur) ಆಯ್ಕೆ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

ಹೀಗೆ ಸಾಲು ಸಾಲು ಸಿನಿಮಾಗಳ ಸೋಲು, ಅವಕಾಶಗಳ ಕೊರತೆ ಇವೆಲ್ಲಾವನ್ನು ನೋಡಿ ನಟಿಗೆ ಐರೆನ್ ಲೆಗ್ ಎಂದು ಗಾಸಿಪ್ ಪ್ರಿಯರು ಕರೆಯುತ್ತಿದ್ದಾರೆ. ಮುಂದೆ ಮತ್ತೆ ಅವಕಾಶದ ಜೊತೆ ಅದೃಷ್ಟ ಬದಲಾಗುತ್ತಾ? ಕಾದುನೋಡಬೇಕಿದೆ.

Share This Article