ಬಾಹುಬಲಿ ನಟ ಪ್ರಭಾಸ್ (Prabhas) ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚ್ತಿರೋ ಸ್ಟಾರ್ ಹೀರೋ. ಅವರ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಬೇಕು ಎಂಬುದು ಹಲವರ ಕನಸು. ಇದೀಗ ಪ್ರಭಾಸ್ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ನಟಿಸುವ ಲಕ್ಕಿ ಚಾನ್ಸ್ ಅನ್ನು ಬೆಂಗಳೂರಿನ ಬ್ಯೂಟಿ ನಿಧಿ ಅಗರ್ವಾಲ್ (Nidhhi Agerwal) ಬಾಚಿಕೊಂಡಿದ್ದಾರೆ.
Advertisement
ಸೌತ್ ಸಿನಿಮಾರಂಗದಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿರುವ ಬೆಂಗಳೂರಿನ ನಟಿ ನಿಧಿ ಈಗ ಪ್ರಭಾಸ್ ಜೊತೆ ರೊಮ್ಯಾನ್ಸ್ ಮಾಡಲು ರೆಡಿಯಾಗಿದ್ದಾರೆ. ಆಗಸ್ಟ್ 17ರಂದು ನಿಧಿ ಹುಟ್ಟುಹಬ್ಬದಂದು ಪ್ರಭಾಸ್ ನಟನೆಯ ರಾಜಾ ಡಿಲಕ್ಸ್ ಸಿನಿಮಾಗೆ ನಿಧಿ ಹೀರೋಯಿನ್ ಎಂದು ನಿರ್ದೇಶಕ ಮಾರುತಿ ಅನೌನ್ಸ್ ಮಾಡಿದ್ದಾರೆ.
Advertisement
Advertisement
‘ರಾಜಾ ಡಿಲಕ್ಸ್’ (Raja Deluxe) ಸಿನಿಮಾ ಇದೊಂದು ಹಾರರ್-ಕಾಮಿಡಿ ಜೊತೆ ಚೆಂದದ ಲವ್ ಸ್ಟೋರಿ ಕೂಡ ಚಿತ್ರದಲ್ಲಿ ಇರಲಿದೆ. ಪ್ರಭಾಸ್- ನಿಧಿ ಈ ಚಿತ್ರದ ಮೂಲಕ ಮೊದಲ ಬಾರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಇನ್ನೂ ನಟ ಪ್ರಭಾಸ್ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಸೂಕ್ತ ಚಿಕಿತ್ಸೆಗಾಗಿ ಸದ್ಯ ಪ್ರಭಾಸ್ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಸರ್ಜರಿ ಮತ್ತು ವಿಶ್ರಾಂತಿಯ ಬಳಿಕ ಮತ್ತೆ ಸಿನಿಮಾಗಳತ್ತ ನಟ ಮುಖ ಮಾಡಲಿದ್ದಾರೆ.
Advertisement
‘ಸಲಾರ್’ (Salaar) ಮುಗಿಸಿಕೊಟ್ಟಿರೋ ಪ್ರಭಾಸ್, ಚಿಕಿತ್ಸೆಯ ಬಳಿಕ ದೀಪಿಕಾ ಪಡುಕೋಣೆ (Deepika Padukone) ಜೊತೆಗಿನ ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ. ಇದಾದ ಬಳಿಕ ‘ರಾಜಾ ಡಿಲಕ್ಸ್’ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಇನ್ನೂ ನಟಿ ನಿಧಿಗೆ ಇದು ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಇದನ್ನೂ ಓದಿ:ತೆಲುಗು ನಟ ಬ್ರಹ್ಮಾನಂದಂ ಪುತ್ರನ ಮದುವೆಗೆ ಬಂದ ಸೆಲೆಬ್ರಿಟಿಗಳು
ನಿಧಿ ಅಗರ್ವಾಲ್ ಅವರು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು. ಅವರ ವಿದ್ಯಾಭ್ಯಾಸ ಕೂಡ ಬೆಂಗಳೂರಿನಲ್ಲಿಯೇ ಪೂರ್ಣಗೊಳಿಸಿದ್ದರು. ಹಿಂದಿ ’ಮುನ್ನಾ ಮೈಖಲ್’ ಸಿನಿಮಾ ಮೂಲಕ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು. ಬಳಿಕ ತೆಲುಗಿನ ಸವ್ಯಸಾಚಿ, ಮಿಸ್ಟರ್ ಮಜ್ನು, ಇಸ್ಮಾರ್ಟ್ ಶಂಕರ್, ಹೀರೋ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಪ್ರಸ್ತುತ ಪವನ್ ಕಲ್ಯಾಣ್ (Pawan Kalyan) ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾದಲ್ಲಿ ನಿಧಿ ನಾಯಕಿಯಾಗಿದ್ದಾರೆ.