ಕನ್ನಡದ ‘ವಜ್ರಕಾಯ’ ಬೆಡಗಿ ನಭಾ ನಟೇಶ್ (Nabha Natesh) ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಡಾರ್ಲಿಂಗ್ ಎನ್ನುತ್ತಾ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಆಕ್ಸಿಡೆಂಟ್‌ನಿಂದ ಚೇತರಿಸಿಕೊಂಡ ಬಳಿಕ ಹೊಸ ಚಿತ್ರದ ಮೂಲಕ ಬೆಳ್ಳಿಪರದೆಯಲ್ಲಿ ಮಿಂಚಲು ನಟಿ ರೆಡಿಯಾಗಿದ್ದಾರೆ.
ನಟ ಪ್ರಿಯಾದರ್ಶಿಗೆ ನಾಯಕಿಯಾಗಿ ನಭಾ ಡಾರ್ಲಿಂಗ್ (Darling) ಎಂಬ ಸಿನಿಮಾ ಮಾಡಿದ್ದಾರೆ. ಸದ್ಯ ಚಿತ್ರದ ಪೋಸ್ಟರ್ ಲುಕ್, ಪ್ರೋಮೋ ಝಲಕ್‌ನಿಂದ ಡಾರ್ಲಿಂಗ್ ಸಿನಿಮಾ ಗಮನ ಸೆಳೆಯುತ್ತಿದೆ. ವಿಭಿನ್ನ ಪಾತ್ರದ ಮೂಲಕ ನಟಿ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಈ ಚಿತ್ರವನ್ನು ‘ಹನುಮಾನ್’ ಚಿತ್ರದ ನಿರ್ಮಾಪಕ ನಿರಂಜನ್ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ಇದನ್ನೂ ಓದಿ:ದರ್ಶನ್ ಬೇಜಾರಿನಲ್ಲಿದ್ದಾರೆ- ಭೇಟಿಯ ಬಳಿಕ ಧನ್ವೀರ್ ರಿಯಾಕ್ಷನ್
ಇದೊಂದೇ ಸಿನಿಮಾ ಅಲ್ಲ, ‘ಸ್ವಯಂಭು’ ಎಂಬ ಪ್ಯಾನ್ ಇಂಡಿಯಾ ಚಿತ್ರ ಕೂಡ ನಭಾ ಕೈಯಲ್ಲಿದೆ. ಈ ಸಿನಿಮಾದ ಕೆಲಸ ಕೂಡ ನಡೆಯುತ್ತಿದೆ. ನಿಖಿಲ್ ಸಿದ್ಧಾರ್ಥ್ ನಾಯಕಿಯಾಗಿ ನಭಾ ನಟಿಸಿದ್ದಾರೆ. ಇದನ್ನೂ ಓದಿ:ದುಬೈ ಮೂಲದ ಯೂಟ್ಯೂಬರ್ ಜೊತೆ ನಟಿ ಸುನೈನಾ ನಿಶ್ಚಿತಾರ್ಥ?
ಅಂದಹಾಗೆ, ಕನ್ನಡದ ‘ವಜ್ರಕಾಯ’ ಚಿತ್ರದ ಮೂಲಕ ನಭಾ ಪರಿಚಿತರಾದರು. ಶಿವಣ್ಣಗೆ ಹೀರೋಯಿನ್ ಜನಪ್ರಿಯತೆ ಗಳಿಸಿದರು. ಲೀ, ಸಾಹೇಬ ಸಿನಿಮಾದ ಬಳಿಕ ತೆಲುಗಿನಲ್ಲಿ ಬ್ಯುಸಿಯಾದರು.