ಮತ್ತೆ ಕ್ಯಾಮೆರಾ ಮುಂದೆ ಮಿಂಚಲು ಸಜ್ಜಾದ ‘ಕೃಷ್ಣಲೀಲಾ’ ಮಯೂರಿ

Public TV
1 Min Read
mayuri 1

ಸ್ಯಾಂಡಲ್ವುಡ್ (Sandalwood) ಬ್ಯೂಟಿ ಮಯೂರಿ ಅವರು ಮದುವೆಯಾಗಿ ಒಂದು ಮಗುವಾಗಿದ್ರು ಕೂಡ ಬ್ಯೂಟಿ ಮತ್ತು ಫಿಟ್‌ನೆಸ್ ಹೆಚ್ಚಿನ ಗಮನ ಕೊಡ್ತಾರೆ. ಬ್ರೇಕ್ ನಂತರ ಮತ್ತೆ ಕ್ಯಾಮೆರಾ ಮುಂದೆ ಮಿಂಚಲು ಕೃಷ್ಣನ ಲೀಲಾ(Krishnaleela) ಮಯೂರಿ (Mayuri) ರೆಡಿಯಾಗಿದ್ದಾರೆ.

MAYURI

ಕಿರುತೆರೆಯ ‘ಅಶ್ವಿನಿ ನಕ್ಷತ್ರ’ (Ashwini Nakshatra) ಸೀರಿಯಲ್ ಮೂಲಕ ನಟನಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಮಯೂರಿ ಕ್ಯಾತರಿ, ಕೃಷ್ಣ ಅಜಯ್ ರಾವ್‌ಗೆ ನಾಯಕಿಯಾಗಿ ಮಿಂಚಿದ್ದರು. ಸಾಕಷ್ಟು ಸಿನಿಮಾಗಳ ಜೊತೆ ರಿಯಾಲಿಟಿ ಶೋ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಕಳೆದ ಬಿಗ್ ಬಾಸ್ (Bigg Boss Kannada) ಸೀಸನ್ 9ರಲ್ಲಿ ಮಯೂರಿ ಮಿಂಚಿದ್ದರು. ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ ಅವರು ಇದ್ದ ಸೀಸನ್‌ಲ್ಲಿ ಗಟ್ಟಿ ಸ್ಪರ್ಧಿಯಾಗಿ ಮಯೂರಿ ಕಾಣಿಸಿಕೊಂಡಿದ್ದರು.

mayuri

ಸಹಜ ನಟನೆ, ಮುದ್ದು ಮುಖದಿಂದ ಮಯೂರಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಕಡೆಯದಾಗಿ ಪೊಗರು, ವೀಲ್‌ಚೇರ್ ರೋಮಿಯೊ ಸಿನಿಮಾ ನಟಿಸಿದ್ದರು. ಈಗ ಮತ್ತಷ್ಟು ಫಿಟ್ ಆಗಿ ಕ್ಯಾಮೆರಾ ಮುಂದೆ ನಟಿ ಬರುತ್ತಿದ್ದಾರೆ. ವಾಹಿನಿಯಲ್ಲಿ ಪ್ರಸಾರವಾಗುವ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ ಎಂಬ ಸೀರಿಯಲ್‌ನಲ್ಲಿ ನಟಿ ಬಣ್ಣ ಹಚ್ಚಿದ್ದಾರೆ. ಇದನ್ನೂ ಓದಿ:ಕೆಟ್ಟ ಸಿನಿಮಾ ಬಗ್ಗೆ ಬಾಯ್ಬಿಟ್ಟ ತಮನ್ನಾ ನೇರ ಮಾತಿಗೆ ವಿಜಯ್ ಫ್ಯಾನ್ಸ್ ಕಿಡಿ

mayuri 1

ಮಾಟಗಾತಿ ಕನಕಾಂಬರಿ ಎಂಬ ವಿಶೇಷ ಪಾತ್ರಕ್ಕೆ ಮಯೂರಿ ಜೀವತುಂಬಿದ್ದಾರೆ. ಆಗಸ್ಟ್ 6ರಂದು ಸಂಜೆ 6:30ಕ್ಕೆ ಈ ಸೀರಿಯಲ್ ಪ್ರಸಾರವಾಗಲಿದೆ. 3 ಗಂಟೆಗಳ ಕಾಲ ಮೂಡಿ ಬರಲಿದೆ. ಎಂದೂ ಕಾಣಿಸಿಕೊಂಡಿರದ, ನಟಿಸಿರದ ಲುಕ್‌ನಲ್ಲಿ ಕೃಷ್ಣಲೀಲಾ ಚೆಲುವೆ ಎಂಟ್ರಿ ಕೊಡ್ತಿದ್ದಾರೆ.

ಕೃಷ್ಣಲೀಲಾ ಬೆಡಗಿಯ ಹೊಸ ಅವತಾರ ಪ್ರೋಮೋ ನೋಡಿಯೇ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಅಸಲಿ ಡ್ರಾಮಾ ನೋಡೊದಕ್ಕೆ ಸೀರಿಯಲ್ ನೋಡಬೇಕಿದೆ. ಈ ವಾರಾಂತ್ಯ ಟಿವಿ ಪರದೆಯಲ್ಲಿ ಮಯೂರಿ ಮಿಂಚಲಿದ್ದಾರೆ. ಹಾಗೆಯೇ ಹೊಸ ಬಗೆಯ ಕಥೆಯನ್ನ ಕೇಳ್ತಿರೋ ಮಯೂರಿ ಮತ್ತೆ ಬೆಳ್ಳಿಪರದೆಯಲ್ಲಿ ಮಿಂಚಲಿದ್ದಾರೆ.

Share This Article