ಸ್ಯಾಂಡಲ್‌ವುಡ್‌ನ (Sandalwood) `ಟಗರು’ (Tagaru) ಚೆಲುವೆ ಮಾನ್ವಿತಾ ಕಾಮತ್ (Manvitha Kamath) ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಯಂಗ್ ಹೀರೋ ಲವ್ಲಿ ಸ್ಟಾರ್ ಪ್ರೇಮ್‌ಗೆ ಮಾನ್ವಿತಾ ನಾಯಕಿಯಾಗಿ ನಟಿಸುತ್ತಿದ್ದಾರೆ.
Advertisement
ʻಕೆಂಡಸಂಪಿಗೆʼ, ʻಟಗರುʼ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದ ಪ್ರತಿಭಾನ್ವಿತ ನಟಿ ಮಾನ್ವಿತಾ ಕಾಮತ್ ಅವರು ಕಳೆದ ವರ್ಷ `ಶಿವ 143′ (Shiva 143) ಸಿನಿಮಾ ಮೂಲಕ ಮೋಡಿ ಮಾಡಿದ್ದರು. ಇದೀಗ ವಿಭಿನ್ನ ಪಾತ್ರದ ಮೂಲಕ ಅಭಿಮಾನಿಗಳ ಮನ ಗೆಲ್ಲಲು `ಟಗರು’ ಬ್ಯೂಟಿ ಮಾನ್ವಿತಾ ರೆಡಿಯಾಗಿದ್ದಾರೆ. ತಮ್ಮ ಸಿನಿಮಾ ಮತ್ತು ಪಾತ್ರದ ಬಗ್ಗೆ ಪಬ್ಲಿಕ್ ಟಿವಿ ಡಿಜಿಟಲ್‌ಗೆ ನಟಿ ಮಾನ್ವಿತಾ ಮಾಹಿತಿ ನೀಡಿದ್ದಾರೆ.
Advertisement
Advertisement
ಈ ಚಿತ್ರದ ಕಥೆ ತಂದೆಯ ಪ್ರಾಮುಖ್ಯತೆಯ ಸುತ್ತ ಸುತ್ತುತ್ತದೆ. ಸಮಾಜಕ್ಕೆ ಒಂದೊಳ್ಳೆ ಸಂದೇಶ ತಿಳಿಸುವ ಚಿತ್ರ ಇದಾಗಿದ್ದು, ತಂದೆ-ತಾಯಿಯನ್ನು ನಾವು ಹೇಗೆ ನೋಡಿಕೊಳ್ಳಬೇಕು ಎಂಬ ಒನ್‌ಲೈನ್ ಸ್ಟೋರಿಯನ್ನ ಹೊಂದಿದೆ. ಮೊದಲ ಬಾರಿಗೆ ಲವ್ಲಿ ಸ್ಟಾರ್ ಪ್ರೇಮ್ (Lovely Star Prem) ಅವರ ಜೊತೆ ನಟಿಸುತ್ತಿದ್ದೇನೆ ಈ ಬಗ್ಗೆ ಖುಷಿಯಿದೆ. ಅವರು ನಮ್ಮ ಕನ್ನಡ ಚಿತ್ರರಂಗದ ಟ್ಯಾಲೆಂಟೆಡ್ ನಟ ಎಂದು ಮಾನ್ವಿತಾ ಅವರು ತಿಳಿಸಿದ್ದಾರೆ.
Advertisement
ತಬಲಾ ನಾಣಿ (Tabala Nani) ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ನಾಗೇಶ್ ಕಾರ್ತಿಕ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ತಬಲಾ ನಾಣಿ ಮತ್ತು ಪ್ರೇಮ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಪ್ರೇಮ್‌ಗೆ ಮಾನ್ವಿತಾ ನಾಯಕಿಯಾಗಿದ್ದಾರೆ. ಇದನ್ನೂ ಓದಿ: ಕನ್ನಡದ ಹೆಸರಾಂತ ನಿರ್ದೇಶಕ ಎಸ್.ಕೆ. ಭಗವಾನ್ ನಿಧನ
ಇನ್ನೂ ನಟಿ ಮಾನ್ವಿತಾ ಅವರಿಗೆ ನಿರ್ದೇಶನದ (Direction) ಕಡೆಗೂ ಒಲವಿದೆ. ಈ ಹಿಂದೆ ಹಲವು ಸಂದರ್ಶನಗಳಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು. ಮಾನ್ವಿತಾ ಅವರು ನಿರ್ದೇಶನದ ಕಥೆ ಅದ್ಯಾವಾಗ ತೆರೆಯ ಮೇಲೆ ಬರಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯದಲ್ಲೇ ಈ ಬಗ್ಗೆ ಅಪ್‌ಡೇಟ್ ಸಿಗುತ್ತಾ ಕಾದುನೋಡಬೇಕಿದೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k
Your point of view caught my eye and was very interesting. Thanks. I have a question for you. https://www.binance.com/en/register?ref=53551167