ಮಗಳ ಮುದ್ದಾದ ಫೋಟೋ ಹಂಚಿಕೊಂಡ ನಟಿ ಮಾನಸ ಜೋಶಿ

Public TV
1 Min Read
manasa joshi

ಕಿರುತೆರೆಯಲ್ಲಿ ಮಹಾದೇವಿ (Mahadevi), ಮಂಗಳಗೌರಿ ಮದುವೆ, ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ನಟಿಸಿರುವ ಮಾನಸ ಜೋಶಿ (Manasa Joshi) ಇದೀಗ ಮೊದಲ ಬಾರಿಗೆ ಮಗಳ ಮುಖ ರಿವೀಲ್ ಮಾಡಿದ್ದಾರೆ. ಪುಟ್ಟ ಮಗಳ ಮುದ್ದಾದ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಪಾತ್ರಕ್ಕಾಗಿ ಅವನು ಸಹಕರಿಸು ಅಂದ: ಕರಾಳ ಘಟನೆ ಬಿಚ್ಚಿಟ್ಟ ನಟಿ ಮಾಳವಿಕಾ

manasa joshi

2015ರಲ್ಲಿ ಸಂಕರ್ಷಣ ಪ್ರಸಾದ್ ಎಂಬುವವರ ಜೊತೆ ನಟಿ ಬೆಂಗಳೂರಿನಲ್ಲಿ ಹಸೆಮಣೆ (Wedding) ಏರಿದ್ದರು. ಸಂಪ್ರದಾಯ ಬದ್ಧವಾಗಿ ಮಾನಸ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾದರು. ಕಳೆದ ನವೆಂಬರ್‌ನಲ್ಲಿ ಹೆಣ್ಣು ಮಗುವಿಗೆ ಪೋಷಕರಾದರು. ಇದೀಗ ನಟನೆಯಿಂದ ದೂರ ಸರಿದು ಮಗಳ ಪಾಲನೆಯಲ್ಲಿ ನಟಿ ಬ್ಯುಸಿಯಾಗಿದ್ದಾರೆ.

 

View this post on Instagram

 

A post shared by Manasa Joshi (@manasajoshi)

ಹಸಿರು ಬಣ್ಣದ ಮುದ್ದಾದ ಫೋಟೋ ಶೇರ್ ಮಾಡಿ, ಮಗಳಿಗೆ (Paarthavi Kashyap) ಮುದ್ದಾದ ಹೆಸರನ್ನ ಇಟ್ಟಿದ್ದಾರೆ. ಈ ಫೋಟೋ ನೋಡಿ, ಅಭಿಮಾನಿಗಳು ಮಗುವಿಗೆ ಶುಭಹಾರೈಸಿದ್ದಾರೆ.

ಮಾನಸ ಜೋಶಿ ಅವರು ಕಿರುತೆರೆ ಮಾತ್ರವಲ್ಲ ಹಿರಿತೆರೆಯಲ್ಲೂ ನಟಿಸಿದ್ದಾರೆ. ಲಾಸ್ಟ್ ಬಸ್, ಅಮೃತಾ ಅಪಾರ್ಟ್‌ಮೆಂಟ್ಸ್‌, ಯಶೋಗಾಥೆ, ಕಿರಗೂರಿನ ಗಯ್ಯಾಳಿಗಳು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

Share This Article