‘ಬಿಗ್ ಬಾಸ್’ ಖ್ಯಾತಿಯ ಕವಿತಾ ಗೌಡ (Kavitha Gowda) ಮುದ್ದು ಮಗನ (Son) ಆರೈಕೆಯಲ್ಲಿದ್ದಾರೆ. ಮಗನಿಗೆ 6 ತಿಂಗಳು ತುಂಬಿದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆ ಮಗನ ಜೊತೆಗಿನ ಕ್ಯೂಟ್ ಫೋಟೋವೊಂದನ್ನು ಕವಿತಾ ಹಾಗೂ ಚಂದನ್ (Chandan Kumar) ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹೊಸ ಜೀವನದ 6 ತಿಂಗಳುಗಳು. ಗುಂಡಪ್ಪ ಎಂದು ನಟಿ ಬರೆದುಕೊಂಡಿದ್ದಾರೆ. ಪೋಷಕರಾಗಲು ಅದೃಷ್ಟ ಮಾಡಿದ್ದೇವೆ. ನಿನ್ನೊಂದಿಗೆ ಅರ್ಧ ವರ್ಷ ಸಂತೋಷದಿಂದ ಕಳೆದಿರೋದು ಖುಷಿಯಿದೆ ಎಂದು ಕವಿತಾ ದಂಪತಿ ಮಗನ ಫೋಟೋ ಶೇರ್ ಮಾಡಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ:ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ನಟನೆಯ ‘ಸಿಕಂದರ್’ ಚಿತ್ರದ ಸಾಂಗ್ ರಿಲೀಸ್
 
View this post on Instagram 
ಇನ್ನೂ ‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಲ್ಲಿ ಜೊತೆಯಾಗಿ ನಟಿಸಿದ್ದರು. 2021ರಲ್ಲಿ ಮೇ 14ರಂದು ಹೊಸ ಬಾಳಿಗೆ ಕಾಲಿಟ್ಟರು. ಗುರುಹಿರಿಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆ ಜರುಗಿತ್ತು. ಇದನ್ನೂ ಓದಿ:‘ಟಾಕ್ಸಿಕ್’ನಲ್ಲಿ ಕೆಲಸ ಮಾಡಿದ್ದು, ನಿಜಕ್ಕೂ ಅದ್ಭುತ ಅನುಭವ- ಯಶ್‌ರನ್ನು ಕೊಂಡಾಡಿದ ಅಮೆರಿಕ ನಟ
 
View this post on Instagram 
ಇನ್ನೂ ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಟಿ ಗಂಡು ಮಗುವಿಗೆ ಜನ್ಮ ನೀಡಿದರು. ಮಗನ ಆಗಮನದಿಂದ ಕವಿತಾ ಹಾಗೂ ಚಂದನ್ ಮನೆಯಲ್ಲಿ ಸಂಭ್ರಮ ದುಪ್ಪಟ್ಟು ಮಾಡಿದೆ.
 


 
		 
		 
		 
		 
		
 
		 
		 
		 
		