‘ಮಗಧೀರ’ ಬ್ಯೂಟಿ ಕಾಜಲ್ ಅಗರ್ವಾಲ್ (Kajal Aggarwal) ಮದುವೆಯಾಗಿ ಮಗು ಆದ್ಮೇಲೆ ಕೂಡ ನಟನೆಯಲ್ಲಿ ಸಕ್ರಿಯರಾಗಿದ್ದಾರೆ. ತಮ್ಮ ಚಾರ್ಮ್ ಅನ್ನು ನಟಿ ಉಳಿಸಿಕೊಂಡಿದ್ದಾರೆ. ಸದ್ಯ ನಟಿಯ ಬಗ್ಗೆ ಕ್ರೇಜಿ ಅಪ್‌ಡೇಟ್‌ವೊಂದು ಸಿಕ್ಕಿದೆ. ಸ್ಟಾರ್ ನಟ ಜ್ಯೂ.ಎನ್‌ಟಿಆರ್ ನಟನೆಯ ದೇವರ ಚಿತ್ರಕ್ಕೆ ಕಾಜಲ್ ಕೈಜೋಡಿಸಿದ್ದಾರೆ. ಇದನ್ನೂ ಓದಿ:ಇಂದು ಡಾ.ರಾಜ್‌ಕುಮಾರ್ 95ನೇ ವರ್ಷದ ಹುಟ್ಟುಹಬ್ಬ
ಇತ್ತೀಚೆಗೆ ಪೂಜಾ ಹೆಗ್ಡೆ ಸಿನಿಮಾದಲ್ಲಿ ಸ್ಪೆಷಲ್ ಸಾಂಗ್‌ನಲ್ಲಿ ಕುಣಿಯುತ್ತಾರೆ ಎನ್ನಲಾಗಿತ್ತು. ಪೂಜಾ ಒಬ್ಬರೇ ಅಲ್ಲ ಅವರ ಜೊತೆ ಕಾಜಲ್ ಕೂಡ ಸೊಂಟ ಬಳುಕಿಸಲಿದ್ದಾರೆ ಎಂಬ ಲೇಟೆಸ್ಟ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಇಬ್ಬರೂ ಕೂಡ ಜ್ಯೂ.ಎನ್‌ಟಿಆರ್ ಜೊತೆ ಹೆಜ್ಜೆ ಹಾಕಲಿದ್ದಾರೆ.
‘ದೇವರ’ ಸಿನಿಮಾದಲ್ಲಿ ಪೂಜಾ ಹೆಗ್ಡೆ ಮತ್ತು ಕಾಜಲ್ ಡ್ಯಾನ್ಸ್‌ಗೆ ಮಾತ್ರ ಸೀಮಿತನಾ? ಅಥವಾ ನಟನೆಗೂ ಅವಕಾಶವಿದ್ಯಾ ಎಂಬುದು ಖಾತ್ರಿಯಾಗಿಲ್ಲ. ಜ್ಯೂ.ಎನ್‌ಟಿಆರ್ ಜೊತೆಗೆ ಈ ಹಿಂದೆ ಕೂಡ ನಾಯಕಿಯಾಗಿ ಕಾಜಲ್ ನಟಿಸಿದ್ದಾರೆ. ಆ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಗೆದ್ದು ಬೀಗಿತ್ತು.
ಇನ್ನೂ ಈ ಹಿಂದೆ ಕೂಡ ಚಿರಂಜೀವಿ, ರಾಮ್ ಚರಣ್ ನಟನೆಯ ‘ಆಚಾರ್ಯ’ (Acharya) ಚಿತ್ರದಲ್ಲಿ ಪೂಜಾ ಹೆಗ್ಡೆ (Pooja Hegde) ಮತ್ತು ಕಾಜಲ್ ಜೊತೆಯಾಗಿ ನಟಿಸಿದ್ದರು. ಇಬ್ಬರಿಗೂ ಉತ್ತಮ ಒಡನಾಟವಿದೆ. ಹಾಗಾಗಿ ಮತ್ತೆ ಈ ಕಾಂಬಿನೇಷನ್ ರಿಪೀಟ್ ಆದರೆ ಚೆನ್ನಾಗಿರುತ್ತೆ ಎಂಬುದು ಪ್ರೇಕ್ಷಕರ ಅಭಿಪ್ರಾಯ. ಮುಂದಿನ ದಿನಗಳಲ್ಲಿ ಚಿತ್ರತಂಡದಿಂದ ಈ ಕುರಿತು ಸಿಹಿಸುದ್ದಿ ಸಿಗುತ್ತಾ? ಕಾಯಬೇಕಿದೆ.