ಜೋಗುಳ, ಕನ್ಯಾದಾನ, ಗೆಜ್ಜೆಪೂಜೆ ಸೀರಿಯಲ್‌ಗಳಲ್ಲಿ ನಟಿಸಿದ ಜ್ಯೋತಿ ರೈ (Jyothi Rai) ಸದ್ಯ ತೆಲುಗಿನಲ್ಲಿ (Tollywood) ಬ್ಯುಸಿಯಾಗಿದ್ದಾರೆ. ಇದರ ನಡುವೆ ತಮ್ಮ ಅಭಿಮಾನಿಗಳಿಗೆ ಹೆಲ್ತ್ ಟಿಪ್ಸ್ ನೀಡಿದ್ದಾರೆ. ಬೆಳ್ಳುಳ್ಳಿ ಸೇವಿಸೋದ್ರಿಂದ ಏನೆಲ್ಲ ಆಗಲಿದೆ ಎಂದು ಹಾಟ್ ಬೆಡಗಿ ಜ್ಯೋತಿ ರೈ ಸಲಹೆ ನೀಡಿದ್ದಾರೆ. ಇದನ್ನೂ ಓದಿ:ದರ್ಶನ್ ಅಭಿಮಾನಿಗಳ ಬೈಕ್ ರ‍್ಯಾಲಿಗೆ ಪೊಲೀಸ್ ನಿರಾಕರಣೆ
View this post on Instagram
ಬೆಳ್ಳುಳ್ಳಿಯನ್ನು ಫೋಟೋವನ್ನು ಶೇರ್ ಮಾಡಿ, ಅದರ ಉಪಯೋಗಗಳನ್ನು ಬರೆದುಕೊಂಡಿದ್ದಾರೆ. ಬೆಳಗ್ಗೆ ಎದ್ದ ಕೂಡಲೇ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ. ಲಿವರ್ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಜೀರ್ಣಕ್ರಿಯೆ ಹೆಚ್ಚಾಗುತ್ತೆ ಎಂದು ಜ್ಯೋತಿ ರೈ ಸಲಹೆ ನೀಡಿದ್ದಾರೆ.
ಮೊದಲ ಮದುವೆಯ ಡಿವೋರ್ಸ್ ನಂತರ ಇತ್ತೀಚೆಗೆ ತೆಲುಗಿನ ನಿರ್ದೇಶಕ ಸುಕು ಪೂರ್ವಜ್ ಜೊತೆ ಜ್ಯೋತಿ ರೈ 2ನೇ ಮದುವೆಯಾಗಿದ್ದಾರೆ. ತಮ್ಮ ಮದುವೆಯ ಸ್ವತಃ ನಟಿಯೇ ಸೋಷಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದರು.
ಅನುರಾಗ, ಲವಲವಿಕೆ, ಮೂರುಗಂಟು, ಕಿನ್ನರಿ, ಕಸ್ತೂರಿ ನಿವಾಸ ಸೇರಿದಂತೆ 18ಕ್ಕೂ ಹೆಚ್ಚು ಕನ್ನಡ ಸೀರಿಯಲ್‌ಗಳಲ್ಲಿ ಜ್ಯೋತಿ ನಟಿಸಿದ್ದಾರೆ. ‘ಸೀತಾರಾಮ ಕಲ್ಯಾಣ’ ಸೇರಿದಂತೆ ಹಲವು ಚಿತ್ರಗಳಲ್ಲಿ ಈ ಕರಾವಳಿ ಬ್ಯೂಟಿ ನಟಿಸಿದ್ದಾರೆ.