ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸಾಕಷ್ಟು ಸಿನಿಮಾಗಳ ಮೋಡಿ ಮಾಡಿರುವ ನಟಿ ತೆರೆಮರೆಯಲ್ಲಿ ಸೈಲೆಂಟ್ ಆಗಿ ತಮ್ಮ ಮದುವೆಗೆ ಸಿದ್ಧತೆ ನಡೆಸಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ನಟಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ತಮಿಳು, ತೆಲುಗು, ಕನ್ನಡ ಸಿನಿಮಾಗಳ ಮೂಲಕ ಗಮನ ಸೆಳೆದ ಪ್ರತಿಭಾನ್ವಿತ ನಟಿ ಹನ್ಸಿಕಾ ಹೊಸ ಬಾಳಿಗೆ(Wedding) ಕಾಲಿಡುತ್ತಿದ್ದಾರೆ. ತಮ್ಮ ಮಾದಕ ನೋಟದಿಂದ ಪಡ್ಡೆಹುಡುಗರ ನಿದ್ದೆಗೆಡಿಸಿದ್ದ ಚೆಲುವೆ ಹನ್ಸಿಕಾ ಕೈಯಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿವೆ. ಚಿತ್ರರಂಗದಲ್ಲಿ ಡಿಮ್ಯಾಂಡ್ ಇರುವ ಸಮಯದಲ್ಲೇ ನಟಿ ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿದ್ದಾರೆ. ಇದನ್ನೂ ಓದಿ:ಕೊಟ್ಟ ಮಾತಿನಂತೆ ದಾವಣಗೆರೆ ಬೆಣ್ಣೆದೋಸೆ ಸವಿದ ಸ್ಯಾಂಡಲ್ ವುಡ್ ಕ್ವೀನ್
ದಕ್ಷಿಣ ಭಾರತದ ರಾಜಕೀಯ ಮುಖಂಡರೊಬ್ಬರ(Politician) ಮಗನೊಂದಿಗೆ ಮದುವೆಗೆ ನಟಿ ರೆಡಿಯಾಗಿದ್ದಾರೆ. ಖ್ಯಾತ ಉದ್ಯಮಿಯ ಕೈಹಿಡಿಯಲಿದ್ದಾರೆ ನಟಿ ಹನ್ಸಿಕಾ ಮೋಟ್ವಾನಿ. ಈಗಾಗಲೇ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆದಿದ್ದು, ಡಿಸೆಂಬರ್‌ನಲ್ಲಿ ಈ ಜೋಡಿ ಹಸೆಮಣೆ ಏರಲಿದ್ದಾರೆ. ಅಂದಹಾಗೆ ಪುನೀತ್ ರಾಜ್‌ಕುಮಾರ್ ನಟನೆಯ ʻಬಿಂದಾಸ್ʼ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಈ ಮೂಲಕ ಸ್ಯಾಂಡಲ್‌ವುಡ್‌ನಲ್ಲೂ ಛಾಪೂ ಮೂಡಿಸಿದ್ದರು.
450 ವರ್ಷದ ಹಳೆಯ ಜೈಪುರದ ಪ್ಯಾಲೇಸ್‌ನಲ್ಲಿ(Jaipur Palace) ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಪ್ಲ್ಯಾನ್ ಮಾಡಲಾಗಿತ್ತು. ಇದಕ್ಕಾಗಿ ಸಕಲ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಈ ವರ್ಷದ ಅಂತ್ಯದಲ್ಲಿ ಹನ್ಸಿಕಾ ಮೋಟ್ವಾನಿ ಉದ್ಯಮಿಯ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸದ್ಯದಲ್ಲೇ ಈ ವಿಚಾರವನ್ನ ಅಧಿಕೃತವಾಗಿ ಹೇಳಲಿದ್ದಾರೆ.